Maa Inti Bangaram OTT: ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಿದೆ.
ವಿಶ್ವದಾದ್ಯಂತ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಈಗ ಖಚಿತವಾಗಿದೆ. ಈ ಚಿತ್ರದ ಮೂಲಕ ಸಮಂತಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾವನ್ನು ಯಾವ ಒಟಿಟಿಯಲ್ಲಿ, ಯಾವಾಗ ನೋಡಬಹುದು. ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ.
ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಅಭಿಮಾನಿಗಳಿಗೆ ಡಿಜಿಟಲ್ ಸ್ಟ್ರೀಮಿಂಗ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಮುಖ ಒಟಿಟಿ ಸಂಸ್ಥೆ ಜಿಯೋಹಾಟ್‌ಸ್ಟಾರ್ (JioHotstar) ಪಡೆದುಕೊಂಡಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಜುಲೈ 17, 2026 ರಿಂದ 'ಮಾ ಇಂಟಿ ಬಂಗಾರಂ' ಸ್ಟ್ರೀಮಿಂಗ್ ಆರಂಭವಾಗಲಿದೆ.
ಸದ್ಯಕ್ಕೆ ತೆಲುಗು ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲೂ ಬರಬಹುದು ಎನ್ನಲಾಗಿದೆ. ಈ ಚಿತ್ರದಲ್ಲಿ ಪೋಷಕ ನಟರ ಬಳಗವೂ ತಮ್ಮ ಪಾತ್ರಗಳಲ್ಲಿ ಬಲವಾದ ಅಭಿನಯ ನೀಡಿದೆ. ಸಮಂತಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ 'ಟ್ರಲಾಲಾ ಮೂವಿಂಗ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿಯೂ ಈ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಕ್ರಿಯೇಟರ್ ಆಗಿ ಕೆಲಸ ಮಾಡಿದ್ದರೆ, ನಂದಿನಿ ರೆಡ್ಡಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಕಾಂಬಿನೇಷನ್ ಮೊದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಬಿಡುಗಡೆಯ ನಂತರವೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದು ಬಾಕ್ಸಾಫೀಸ್‌ನಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.
ಯಶಸ್ವಿ ಪ್ರದರ್ಶನ
ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸ್ವರ ಸಂಯೋಜಿಸಿದ್ದಾರೆ. ಅವರ ಸಂಗೀತವು ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ. ಸದ್ಯ ಈ ಚಿತ್ರವು ಥಿಯೇಟರ್‌ಗಳಲ್ಲಿಯೂ ಉತ್ತಮ ಟಿಕೆಟ್ ಮಾರಾಟದೊಂದಿಗೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಒಟಿಟಿ ಬಿಡುಗಡೆ ದಿನಾಂಕ ಖಚಿತವಾಗಿದ್ದು, ಜುಲೈ 17 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಕಾಯುತ್ತಿದ್ದಾರೆ.


