MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • Cine World
  • Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!

Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!

2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಕೈ ಹಿಡಿದಾಗ ಸೆಲಿನಾ ಬದುಕು ಹೂವಿನ ಹಾಸಿಗೆಯಂತೆ ಕಾಣುತ್ತಿತ್ತು. ಮೂವರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ದಾಂಪತ್ಯದ ಪರದೆಯ ಹಿಂದೆ 'ನರಕ' ಸದೃಶ್ಯ ಅನುಭವ ಏನಿತ್ತು? ಈ ಸ್ಟೋರಿ ನೋಡಿ..

2 Min read
Author : Shriram Bhat
Published : Jul 13 2026, 07:23 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಬಾಲಿವುಡ್‌ನ ಗ್ಲಾಮರ್ ಚೆಲುವೆ ಸೆಲಿನಾ ಜೆಟ್ಲಿ (Celina Jaitly) ಅವರ ಜೀವನದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲಿ ಕೇವಲ ಬಣ್ಣದ ಬದುಕಿಲ್ಲ, ಬದಲಿಗೆ ಕಣ್ಣೀರ ಕಡಲೂ ಇದೆ ಎನ್ನಬಹುದು. ಹೊರಗಿನಿಂದ ನೋಡಲು ಸುಂದರವಾಗಿ ಕಾಣುವ ಈ ಸೆಲೆಬ್ರಿಟಿಗಳ ಲೈಫ್ ಒಳಗೆ ಎಷ್ಟು ಕಹಿ ಘಟನೆಗಳು ಇರುತ್ತವೆ ಎಂಬುದಕ್ಕೆ ಸೆಲಿನಾ ಅವರ ಜೀವನವೇ ಒಂದು ತಾಜಾ ಉದಾಹರಣೆ ಎನ್ನಬಹುದೇ? ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದು ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ, ಈ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : stockPhoto

ಬಣ್ಣದ ಬದುಕಿನ ಹಿಂದೆ ಅಡಗಿದ್ದ ಕಣ್ಣೀರ ಕಥೆ!

2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಕೈ ಹಿಡಿದಾಗ ಸೆಲಿನಾ ಬದುಕು ಹೂವಿನ ಹಾಸಿಗೆಯಂತೆ ಕಾಣುತ್ತಿತ್ತು. ಮೂವರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ದಾಂಪತ್ಯದ ಪರದೆಯ ಹಿಂದೆ 'ನರಕ' ಸದೃಶ್ಯ ಅನುಭವಗಳನ್ನು ಸೆಲಿನಾ ಅನುಭವಿಸುತ್ತಿದ್ದರು ಎಂಬುದು ಈಗ ಬಯಲಾಗಿದೆ. ವಿಚ್ಛೇದನದ ಬಳಿಕ ಅವರು ಅನುಭವಿಸಿದ ಆರ್ಥಿಕ ಪೆಟ್ಟು ಮತ್ತು ಮಾನಸಿಕ ಕಿರಿಕಿರಿ ಸಂಗತಿ ಈಗ ಹೊರಬಂದಿದೆ.

Related Articles

Related image1
KM Chaitanya Post: ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!
Related image2
S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!
37
Image Credit : instagram

20 ಕೋಟಿ ಆಸ್ತಿ ಕೈಬಿಟ್ಟಿತಾ?

ಸೆಲಿನಾ ಬಿಚ್ಚಿಟ್ಟಿರುವ ಅತ್ಯಂತ ಸ್ಫೋಟಕ ಸತ್ಯಗಳಲ್ಲಿ ಮುಖ್ಯವಾದುದು ಅವರು ಬಳಲಿದ ಆರ್ಥಿಕ ನಷ್ಟ. ಮದುವೆಗೂ ಮುನ್ನ ತಾವೇ ಕಷ್ಟಪಟ್ಟು ಸಂಪಾದಿಸಿದ್ದ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈ ಡಿವೋರ್ಸ್ ಸಂಘರ್ಷದಲ್ಲಿ ಕಳೆದುಕೊಳ್ಳಬೇಕಾಯಿತು ಎಂದು ಅವರು ಭಾವುಕರಾಗಿ ಹೇಳಿದ್ದಾರೆ. "ಪ್ರೀತಿ ಮತ್ತು ನಂಬಿಕೆಯ ಮೇಲೆ ಕಟ್ಟಿದ ಸಂಬಂಧ ಮುರಿದುಬಿದ್ದಾಗ, ಅಲ್ಲಿ ಭಾವನೆಗಳಿಗಿಂತ ಹಣ ಮತ್ತು ಆಸ್ತಿಗೇ ಹೆಚ್ಚಿನ ಬೆಲೆ ಬರುತ್ತದೆ" ಎಂಬ ಕಟು ಸತ್ಯವನ್ನು ತಮ್ಮದೇ ದುರಂಥ ಘಟನೆ ಮೂಲಕ ಅವರು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ.

47
Image Credit : Google

ವಾರ್ಷಿಕೋತ್ಸವದಂದೇ ಬಂದಿತ್ತು ಆ 'ಜರ್ಮನ್' ಶಾಕ್!

ಸೆಲಿನಾ ಅವರ ಬದುಕಿನ ಅತ್ಯಂತ ನೋವಿನ ಕ್ಷಣವೆಂದರೆ ಅದು ಅವರ ವಿವಾಹ ವಾರ್ಷಿಕೋತ್ಸವದ ದಿನ. ಆ ಸಂಭ್ರಮದಲ್ಲಿ ಇರುವಾಗಲೇ ಪತಿಯಿಂದ ಡಿವೋರ್ಸ್ ನೋಟಿಸ್ ಬಂದಿತ್ತು. ಆ ಪತ್ರ ಜರ್ಮನ್  (ಆಸ್ಟ್ರಿಯನ್ ಜರ್ಮನ್) ಭಾಷೆಯಲ್ಲಿದ್ದ ಕಾರಣ, ಅಸಹಾಯಕತೆಯಿಂದ ಅದನ್ನು ಓದಿಸಿಕೊಳ್ಳಲು ತನ್ನ ಪುಟ್ಟ ಮಕ್ಕಳ ಸಹಾಯ ಕೇಳಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಈ ಬಗ್ಗೆ ಹೇಳಿಕೊಂಡಿರುವ ಸೆಲೆನಾ 'ಆ ಕ್ಷಣ ತಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಒಂದಾಗಿತ್ತು' ಎಂದಿದ್ದಾರೆ.

57
Image Credit : instagram

ಮಹಿಳೆಯರಿಗೊಂದು 'ಖಡಕ್' ಕಿವಿಮಾತು!

ಈಗ ತಮ್ಮ ವೈಯಕ್ತಿಕ ನೋವನ್ನು ಮೆಟ್ಟಿ ನಿಂತಿರುವ ಸೆಲಿನಾ, ಈಗಿನ ಕಾಲದ ಮಹಿಳೆಯರಿಗೆ ಒಂದು ಬಹುಮುಖ್ಯ ಸಲಹೆ ನೀಡಿದ್ದಾರೆ. "ಮದುವೆಗೆ ಮುನ್ನವೇ ಆಸ್ತಿ ಮತ್ತು ಹಕ್ಕುಗಳ ಬಗ್ಗೆ 'ಪ್ರಿನಪ್' (Prenuptial Agreement) ಒಪ್ಪಂದ ಮಾಡಿಕೊಳ್ಳುವುದು ಬಹಳ ಮುಖ್ಯ" ಎಂದು ಅವರು ಒತ್ತಿ ಹೇಳಿದ್ದಾರೆ. ಪ್ರೀತಿಯ ಅಮಲಿನಲ್ಲಿ ಆಸ್ತಿ-ಪಾಸ್ತಿ ಬಗ್ಗೆ ಮಾತನಾಡುವುದು ತಪ್ಪು ಎಂದು ಭಾವಿಸಬೇಡಿ, ಅದು ನಿಮ್ಮ ಭವಿಷ್ಯದ ರಕ್ಷಾ ಕವಚ ಎಂದು ಅವರು ಕರೆ ನೀಡಿದ್ದಾರೆ.

ತಮ್ಮ ಅನುಭವದ ಆಧಾರದ ಮೇಲೆ, ಮದುವೆಗೆ ಮುನ್ನ Prenuptial Agreement (ಪ್ರಿನಪ್ ಒಪ್ಪಂದ) ಮಾಡಿಕೊಳ್ಳುವುದು ಮಹಿಳೆಯರ ಹಕ್ಕುಗಳನ್ನ ರಕ್ಷಿಸಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ರಿನಪ್ ಒಪ್ಪಂದ?

ಮುಂದೆ ನೋಡಿ..

67
Image Credit : Instagram

Prenuptial agreement (commonly called a prenup): ಈ ಪ್ರಿನಪ್ ಒಪ್ಪಂದದಲ್ಲಿ ವಿಚ್ಛೇದನ ಸಂಭವಿಸಿದರೆ ಆಸ್ತಿ, ಉಳಿತಾಯ, ಹೂಡಿಕೆ ಮತ್ತು ಇತರ ಹಣಕಾಸು ಸಂಬಂಧಿತ ವಿಷಯಗಳನ್ನ ಹೇಗೆ ಹಂಚಿಕೊಳ್ಳಬೇಕು ಎಂಬುದನ್ನ ಮುಂಚಿತವಾಗಿಯೇ ನಿರ್ಧರಿಸಲಾಗುತ್ತದೆ. ವಿದೇಶಗಳಲ್ಲಿ ಮುದುವೆಗೂ ಮೊದಲು ಈ ರೀತಿಯ ಒಪ್ಪಂದಗಳು ಸಾಮಾನ್ಯ. ಆದರೆ, ಭಾರತದಲ್ಲಿ ಇನ್ನೂ ಇದನ್ನೂ ವ್ಯಾಪಕವಾಗಿ ಅನುಸರಿಸಲಾಗುತ್ತಿಲ್ಲ. ಆದರೆ 'ಇಂತಹ ಕಾನೂನುಬದ್ಧ ವ್ಯವಸ್ಥೆಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಬೇಕು ಮತ್ತು ಅಗತ್ಯವಿದ್ದರೆ ಕಾನೂನು ಸಲಹೆ ಪಡೆದು ನಿರ್ಧಾರ ಕೈಗೊಳ್ಳಬೇಕು' ಎಂದು ಸೆಲಿನಾ ಜೇಟ್ಲಿ ಸಲಹೆ ನೀಡಿದ್ದಾರೆ. ನಟಿಯ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿಚ್ಛೇದನ, ಆಸ್ತಿ ಹಕ್ಕು ಮತ್ತು ಮಕ್ಕಳ ಪಾಲನೆ ಕುರಿತ ಕಾನೂನು ಅರಿವು ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

77
Image Credit : Instagram

ಒಟ್ಟಿನಲ್ಲಿ, ಸೆಲಿನಾ ಜೇಟ್ಲಿ ಅವರ ಈ ಹಸಿಬಿಸಿ ಸತ್ಯಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿವೆ. 'ಆಸ್ತಿ ಹಕ್ಕು ಮತ್ತು ಮಕ್ಕಳ ಪಾಲನೆಯ ವಿಚಾರದಲ್ಲಿ ಮಹಿಳೆಯರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಸೆಲಿನಾ ಅವರ ಜೀವನದ ಈ ಕಹಿ ಘಟನೆಗಳೇ ಸಾಕ್ಷಿ' ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಬಾಲಿವುಡ್
ವಿಚ್ಛೇದನ
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
ದಿನಕ್ಕೆ ₹20 ಸಂಬಳ ಪಡೆಯುತ್ತಿದ್ದ ಪೈಂಟರ್ ಈಗ ಸ್ಟಾರ್ ಹೀರೋ: ಒಂದೊಂದು ಸಿನಿಮಾಗೆ ಕೋಟಿಗಳ ಸಂಭಾವನೆ!
Recommended image2
2 ಕೋಟಿ ರೂ ಸಿನಿಮಾಗೆ 100 ಕೋಟಿ ರೂ ಆಫರ್? ಹನುಮಾನ್ ಅಂಶ್ ಸಿನಿಮಾ ಯಾವಾಗ ಒಟಿಟಿ ರಿಲೀಸ್?
Recommended image3
ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಬಂದ ಚೈತ್ರಾ ರೈ 5 ದಿನಕ್ಕೇ ಎಲಿಮಿನೇಷನ್: ಸಿಗುವ ಹಣವೆಷ್ಟು?
Related Stories
Recommended image1
KM Chaitanya Post: ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!
Recommended image2
S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved