MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Rohit Chandel Arrest: ಕಿರುತೆರೆ ನಟ ರೋಹಿತ್ ಚಂದೆಲ್ ಅರೆಸ್ಟ್; ಮುಂಬೈನಲ್ಲಿ ಆ ಆರೋಪದಲ್ಲಿ ಸಿಕ್ಕಬಿದ್ದ ಈ ನಟ!

Rohit Chandel Arrest: ಕಿರುತೆರೆ ನಟ ರೋಹಿತ್ ಚಂದೆಲ್ ಅರೆಸ್ಟ್; ಮುಂಬೈನಲ್ಲಿ ಆ ಆರೋಪದಲ್ಲಿ ಸಿಕ್ಕಬಿದ್ದ ಈ ನಟ!

ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

2 Min read
Author : Shriram Bhat
Published : Jul 13 2026, 10:43 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಕಿರುತೆರೆಯ 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ಮತ್ತು 'ಪಾಂಡ್ಯ ಸ್ಟೋರ್' ನಂತಹ ಪ್ರಸಿದ್ಧ ಹಿಂದಿ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಜನಪ್ರಿಯ ಕಿರುತೆರೆ ನಟ ರೋಹಿತ್ ಚಂದೆಲ್ (Rohit Chandel) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಹಿಂಬಾಲಿಸಿದ ಗಂಭೀರ ಆರೋಪ ನಟನ ಮೇಲಿದ್ದು, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಇದೀಗ ಪ್ರಗತಿಯಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ವಿವಿಧ ನಂಬರ್‌ಗಳಿಂದ ಕರೆ; ಬಾಲಕಿಗೆ ಕಿರುಕುಳ

ಮುಂಬೈನ ಪೂರ್ವ ಉಪನಗರದ ಅಪ್ರಾಪ್ತ ಬಾಲಕಿಯೊಬ್ಬರು ರೋಹಿತ್ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾರೆ. ರೋಹಿತ್ ಚಂದೆಲ್ ತನ್ನ ಮೊಬೈಲ್ ಫೋನ್‌ಗೆ ಪದೇಪದೇ ಕರೆ ಮಾಡುತ್ತಿದ್ದಲ್ಲದೆ, ವಿವಿಧ ಫೋನ್ ನಂಬರ್‌ಗಳ ಮೂಲಕ ಸಂಪರ್ಕಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ತನ್ನ ತಿಳಿಸಿದ್ದಾಳೆ. ಜೊತೆಗೆ, ಮನೆಯ ಬಳಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ದೈಹಿಕ ಹಿಂಸೆ ಕೂಡ ನಡೆಸಿದ್ದಾನೆ ಎಂದು ಆ ಅಪ್ರಾಪ್ತ ಬಾಲಕಿ ದೂರಿನಲ್ಲಿ ಬರೆದಿದ್ದಾರೆ.

Related Articles

Related image1
KM Chaitanya Post: ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!
Related image2
Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!
36
Image Credit : Instagram

ಕಳೆದ ವಾರ, ಜುಲೈ 5ರಂದು ನಟ ರೋಹಿತ್ ತನ್ನ ಮನೆಯ ಬಳಿ ತನ್ನನ್ನು ಹಿಂಬಾಲಿಸಿಕೊಂಡು ಬಂದು, ನನ್ನನ್ನು ತಡೆದು, ಅಸಭ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿ ಗಂಭೀರವಾಗಿ ಆರೋಪಿಸಿದ್ದಾಳೆ. ಬಂಧಿತ ಆರೋಪಿ ರೋಹಿತ್ ಹಾಗೂ ಸಂತ್ರಸ್ತ ಬಾಲಕಿಗೆ ಮುಂಚಿನಿಂದಲೇ ಪರಿಚಯವಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

46
Image Credit : Instagram

ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಎಷ್ಟು ವರ್ಷಗಳಿಂದ ಆ ಬಾಲಕಿಯ ಪರಿಚಯ ರೋಹಿತ್‌ಗೆ ಇತ್ತು, ಅವರಿಬ್ಬರ ನಡುವೆ ವಿಶೇಷವಾದ ಸಂಬಂಧವೇನಾದರೂ ಇತ್ತ? ಈ ಎಲ್ಲಾ ವಿಷಯಗಳೂ ತನಿಖೆ ಬಳಿಕ ತಿಳಿದುಬರಬೇಕಿದೆ. ಸದ್ಯಕ್ಕೆ ಪೋಕ್ಸೋ ಕಾಯಿದೆಯಡೊ ತನಿಖೆ ಚುರುಕುಗೊಂಡಿದೆ.

ಪೊಲೀಸ್ ವಶಕ್ಕೆ ರೋಹಿತ್‌ ಚಂದೆಲ್…..

ಮುಂದೆ ನೋಡಿ…

56
Image Credit : Instagram

ಬಾಲಕಿ ನೀಡಿದ ಕಂಪ್ಲೇಂಟ್ ಆಧರಿಸಿ ದಹಿಸರ್‌ನಲ್ಲಿದ್ದ ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ತದನಂತರ ಆರೋಪಿಯನ್ನು ವಿಶೇಷ ಪೋಕ್ಸೋ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ರೋಹಿತ್‌ ಚಂದೆಲ್‌ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ. ಸದ್ಯ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

66
Image Credit : Instagram

ಕ್ರಿಕೆಟರ್ ಆಗಿದ್ದ ರೋಹಿತ್

ರೋಹಿತ್ ಚಂದೆಲ್ ಅವರು ಕಿರುತೆರೆಯಲ್ಲಿ ಸಾಕಷ್ಟು ಫೇಮಸ್ ಆಗುವ ಮೊದಲು ಕಿರಕೆಟರ್ ಆಗಿದ್ದರು. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪರ ಕ್ರಿಕೆಟ್ ಆಡಿದ್ದರು ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಆ ಬಳಿಕ, 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ನಲ್ಲಿ ಬಾಜೀರಾವ್ ಪಾತ್ರದ ಮೂಲಕ ಹಾಗೂ 'ಪಾಂಡ್ಯ ಸ್ಟೋರ್' ಧಾರಾವಾಹಿಯಲ್ಲಿ ಧವಳ್ ಮಕ್ವಾನಾ ಎಂಬ ಪ್ರಮುಖ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದು ಮನೆಮಾತಾಗಿದ್ದರು. ಇನ್ನೇನು ಸಿನಿಮಾರಂಗಕ್ಕೆ ಕಾಲಿಡುವ ತಯಾರಿಯಲ್ಲಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಬಂದಿರುವ ಇವರ ಬಂಧನದ ಸುದ್ದಿ ಕಿರುತೆರೆ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಟಿವಿ ಶೋ
ಮನರಂಜನಾ ಸುದ್ದಿ
ಕ್ರೈಮ್ ನ್ಯೂಸ್
ವೈರಲ್ ಸುದ್ದಿ

Latest Videos
Recommended Stories
Recommended image1
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
Recommended image2
karna Serial ಸಂಜಯ್​ ಹಿಂದೆ ಹೋಗದಂತೆ BMTC ಲೇಡಿ ಕಂಡಕ್ಟರ್​ ರಿಯಾಗೆ ಬುದ್ಧಿಮಾತು
Recommended image3
7 ವರ್ಷ ಯುಟ್ಯೂಬ್‌ ಕಂಟೆಂಟ್ ಮಾಡಿ‌, ದುಬಾರಿ ಜಾಗದಲ್ಲೇ ಸೈಟ್‌ ತಗೊಂಡ ಕನ್ನಡತಿ ವರ್ಷಾ ಕಾವೇರಿ!
Related Stories
Recommended image1
KM Chaitanya Post: ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!
Recommended image2
Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved