- Home
- News
- India News
- India Latest News Live: ಜನರನ್ನು ರಂಜಿಸಿ ಹಣ ಗಳಿಸಿ ಸಾಲ ಕಟ್ಟಿ: ರಾಜಪಾಲ್‌ಗೆ ಕೋರ್ಟ್ ಸೂಚನೆ
India Latest News Live: ಜನರನ್ನು ರಂಜಿಸಿ ಹಣ ಗಳಿಸಿ ಸಾಲ ಕಟ್ಟಿ: ರಾಜಪಾಲ್‌ಗೆ ಕೋರ್ಟ್ ಸೂಚನೆ

ನವದೆಹಲಿ: ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ವೇಳೆ ನಟ ರಾಜಪಾಲ್ ಯಾದವ್ ಅವರನ್ನು ವ್ಯಂಗ್ಯಭರಿತವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ’ಒಳ್ಳೆಯ ಸಿನಿಮಾ ಮಾಡಿ, ಜನರನ್ನು ರಂಜಿಸಿ ಮತ್ತು ನಿಮ್ಮ ವರ್ಚಸ್ಸನ್ನು ಮರುಸ್ಥಾಪಿಸಿ. ಅದರಿಂದ ಹಣ ಗಳಿಸಿ ಸಾಲ ಕಟ್ಟಿ’ ಎಂಬ ಸಲಹೆ ನೀಡಿದೆ.2010ರಲ್ಲಿ ‘ಅತಾ ಪತಾ ಲಾಪತಾ’ ಸಿನಿಮಾ ನಿರ್ಮಾಣಕ್ಕಾಗಿ ಪಡೆದ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸಾಲ ಮರುಪಾವತಿಸದ ರಾಜಪಾಲ್ ಅವರ ನಡವಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ಅಲ್ಲದೆ, ಅಕ್ಟೋಬರ್ 13ರೊಳಗೆ 2 ಕೋಟಿ ರು. ಪಾವತಿಸುವಂತೆ ಗಡುವು ವಿಧಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜಪಾಲ್, 1.15 ಕೋಟಿ ರು.ಗಳನ್ನು ಕಟ್ಟಿದ್ದಾಗಿ ಹೇಳಿದರು. ಅಲ್ಲದೆ, ‘13 ವರ್ಷದಲ್ಲಿ ನಾನು 200-250 ಸಿನಿಮಾದಲ್ಲಿ ನಟಿಸಿದೆ. 200-250 ಕೋಟಿ ರು. ಹಾನಿ ಮಾಡಿಕೊಂಡೆ. ಅತಾ ಪತಾ ಲಾ ಪತಾ ಚಿತ್ರ ನಿರ್ಮಾಣದಿಂದ 17 ಕೋಟಿ ರು. ಕಳೆದುಕೊಂಡೆ. ನನ್ನನ್ನು ನೀವು ಎಲ್ಲಿ ಬೇಕಾದರೂ ಹಾಕಿರಿ.. ಹೋಗುವೆ’ ಎಂದರು.
ಇದಕ್ಕೆ ಪೀಠ ಪ್ರತಿಕ್ರಿಯಿಸಿ, ‘ನಿಮ್ಮ ಸಿನಿಮಾ ‘ಅತಾ ಪತಾ ಲಾ ಪತಾ’ದಂತೆ ಹಣವೂ ನಾಪತ್ತೆಯಾಗಿದೆ’ ಎಂದು ತಮಾಷೆ ಮಾಡಿ ‘ಜೈಲಿಗೆ ಹೋಗುವ ಬದಲು ಉತ್ತಮ ಸಿನಿಮಾಗಳನ್ನು ಮಾಡಿ ಹಣ ಮರುಪಾವತಿಸಲು ಗಮನಹರಿಸಿ’ ಎಂದು ತಿಳಿಸಿತು.