Amazon and Flipkart: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಬ್ಬದ ಸೇಲ್‌ನಲ್ಲಿ ಇದೇ ಮೊದಲ ಬಾರಿಗೆ ಬೈಕ್ ಹಾಗೂ ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಹೀರೋ, ಟಿವಿಎಸ್, ಬಜಾಜ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಲಭ್ಯವಿದ್ದು, ಬ್ಯಾಂಕ್ ಆಫರ್‌ಗಳೂ ಇವೆ. ಆದರೆ ಖರೀದಿಸುವ ಮುನ್ನ ಎಕ್ಸ್‌ ಶೋರೂಮ್ ಮತ್ತು ಆನ್-ರೋಡ್ ಬೆಲೆಗಳನ್ನು ಹೋಲಿಸಿ ನೋಡುವುದು ಅತ್ಯಗತ್ಯ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ (Amazon and Flipkart) ಬಿಗ್ ಡೀಲ್‌ಗಳು ಶುರುವಾಗಿದೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಬಿಗ್ ಬಿಲಿಯನ್‌ ಡೇ ನಂತಹ ವೇದಿಕೆಯನ್ನ ಒದಗಿಸುತ್ತಿವೆ. ಹಬ್ಬದ ಮಾರಾಟದಲ್ಲಿ ನೀವು ಈ ಬಾರಿ ಬೈಕ್ ಹಾಗೂ ಸ್ಕೂಟರ್‍‌ಗಳನ್ನೂ ಖರೀದಿ ಮಾಡಬಹುದಾಗಿದೆ.

Amazon and Flipkart ಹಬ್ಬದ ಮಾರಾಟ ಪ್ರಕ್ರಿಯೆ ಆರಂಭಿಸಿವೆ. ಈ ಬಾರಿಯ ವಿಶೇಷತೆ ಏನು ಅಂದರೆ.. ಬೈಕ್‌ಗಳು ಮತ್ತು ಸ್ಕೂಟರ್‍‌ಗಳ್ನೂ ಆನ್‌ಲೈನ್ ಶಾಪಿಂಗ್ ಡೀಲ್‌ನಲ್ಲಿ ಸೇರಿಸಲಾಗಿದೆ. ಇಲ್ಲಿ ಎಲ್ಲಾ ದ್ವಿಚಕ್ರ ವಾಹನಗಳಿಗೂ ರಿಯಾಯತಿ ಇಲ್ಲ. ಕೆಲವೊಂದು ರಿಯಾಯತಿ ದ್ವಿಚಕ್ರ ವಾಹನಗಳಲ್ಲಿ ಮಾತ್ರ ಮೆಗಾ ಆಫರ್ ನೀಡಲಾಗಿದೆ. ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹೆಸರಲ್ಲಿ ಡೀಲ್ ಮಾಡ್ತಿದ್ದರೆ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಹೆಸರಲ್ಲಿ ಮಾರಾಟಕ್ಕೆ ನಿಂತಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್

  • ಹೀರೋ ಎಕ್ಸ್‌ಟ್ರೀಮ್ 125 R - ₹84,700 ರಿಂದ ಬೆಲೆ ಪ್ರಾರಂಭ
  • ಹೀರೋ ಸ್ಪ್ಲೆಂಡರ್+ ಬೆಲೆ ₹71,048 ರಿಂದ ಪ್ರಾರಂಭ

ಈ ಎಲ್ಲಾ ಬೆಲೆಗಳು ಒಂದೇ ರೀತಿಯ ಉಳಿತಾಯವನ್ನು ಸೂಚಿಸುವುದಿಲ್ಲ. ಏಕೆಂದರೆ ಮಾಡೆಲ್, ವರ್ಸನ್, ಸ್ಥಳ, ಟ್ಯಾಕ್ಸ್, ಬುಕ್ಕಿಂಗ್ ಪರಿಸ್ಥಿತಿಗಳು ಪ್ರಮುಖ ಪಾತ್ರವಹಿಸಲಿವೆ. ಫ್ಲಿಪ್‌ಕಾರ್ಟ್ ಹೀರೋ ಕಂಪನಿಯ ವಿವಿಧ ಮಾದರಿಗಳ ಮೇಲೆ ಹೆಚ್ಚು ಫೋಕಸ್ ಮಾಡಿದೆ. ಹೀರೋ ಎಕ್ಸ್‌ಟ್ರೀಮ್ 125 R - ₹84,700 ರಿಂದ ಬೆಲೆ ಪ್ರಾರಂಭವಾಗಲಿದೆ ಎಂದು ಹೇಳಿಕೊಂಡಿದೆ. ಹೀರೋ ಸ್ಪ್ಲೆಂಡರ್+ ಬೆಲೆ ₹71,048 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಜೊತೆಗೆ ಆಕ್ಸಿಸ್ ಬ್ಯಾಂಕ್ ಐಸಿಐಸಿಐ ಕಾರ್ಡ್ ಮೂಲಕ ವ್ಯವಹಾರ ಮಾಡೋರಿಗೆ ಶೇಕಡಾ 10 ರಷ್ಟು ಡಿಸ್ಕೌಂಟ್ ಸಿಗಲಿದೆ. ಹೀರೋ, ಟಿವಿಎಸ್, ಸುಜುಕಿ, ಏಥರ್ ಮತ್ತು ಬಜಾಜ್‌ನಂತಹ ಬ್ರ್ಯಾಂಡ್‌ಗಳ ಮಾದರಿಗಳನ್ನ ಫ್ಲಿಪ್‌ಕಾರ್ಟ್ ಬಿಗ್ ಡೀಲ್‌ಗೆ ಇಟ್ಟಿದೆ.

ಅಮೇಜಾನ್ ಕೊಡುಗೆ ಏನು?

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಹೀರೋ ಡೆಸ್ಟಿನಿ 125 ಬೆಲೆ ₹79,119 ರಿಂದ ಪ್ರಾರಂಭವಾಗಲಿದೆ. ಈ ಬೈಕ್ 55 ಕಿಲೋ ಮೀಟರ್ ಮೈಲೇಜ್ ನೀಡಲಿದೆ. 85 ಕಿಲೋ ಮೀಟರ್ ಇದರ ಗರಿಷ್ಠ ವೇಗವಾಗಿದೆ. 9.1 ಪಿಎಸ್ ಎಂಜಿನ್ ಸಿವಿಟಿ ಸ್ವಯಂಚಾಲಿತವಾಗಿ ನಿಯಂತ್ರಣಿಸಲ್ಪಡುತ್ತದೆ. ಜಾವಾ-ಯೆಜ್ಡಿ, ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನ ಮಾರಾಟಕ್ಕೆ ಇಟ್ಟಿದೆ.

ಖರೀದಿಗೂ ಮುನ್ನ ಮಾಡಬೇಕಾಗಿದ್ದು ಏನು?

  • ಆಫರ್ ಇದ್ದಾಗ ಬೈಕ್ ಖರೀದಿಸಿದ್ರೆ ನಿಮಗೆ ಪ್ರಯೋಜನ ಆಗಬಹುದು
  • ಆದರೆ ದೊಡ್ಡ ರಿಯಾಯತಿ ಶೇಕಡಾವಾರು ನೋಡಿ ನಿರ್ಧಾರ ಸರಿ ಅಲ್ಲ
  • ಎಕ್ಸ್‌ ಶೋರೂಮ್ ಬೆಲೆ ಮತ್ತು ಮಾರಾಟ ಬೆಲೆಯನ್ನು ಹೋಲಿಸಿ ನೋಡಿ
  • ಬ್ಯಾಂಕ್ ರಿಯಾಯಿತಿ, ಇಎಂಐ ಪ್ರಯೋಜನ, ಇತರ ಶುಲ್ಕಗಳನ್ನು ಸೇರಿಸಿ
  • ಆರ್‌ಟಿಒ, ವಿಮೆ ಮತ್ತು ಇತರ ನೋಂದಣಿ-ಸಂಬಂಧಿತ ವೆಚ್ಚಗಳು ಇರುತ್ತವೆ
  • ₹71,048, ₹79,119 ಬೆಲೆಯ ದ್ವಿಚಕ್ರಗಳ ಆನ್-ರೋಡ್ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ