MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಪುನೀತ್ ಜೊತೆ ‘ಮಿಲನ’ದಲ್ಲಿ ಮಿಂಚಿದ್ದ ಪಾರ್ವತಿ ಈಗ ಸಖತ್ ಗ್ಲಾಮರಸ್: ಫೋಟೋಸ್ ನೋಡಿದ್ರಾ?

ಪುನೀತ್ ಜೊತೆ ‘ಮಿಲನ’ದಲ್ಲಿ ಮಿಂಚಿದ್ದ ಪಾರ್ವತಿ ಈಗ ಸಖತ್ ಗ್ಲಾಮರಸ್: ಫೋಟೋಸ್ ನೋಡಿದ್ರಾ?

ಕನ್ನಡಿಗರಿಗೆ ‘ಮಿಲನ’ ಚಿತ್ರದ ಮೂಲಕ ಪರಿಚಿತರಾದ ಮಲಯಾಳಂ ನಟಿ ಪಾರ್ವತಿ ತಿರುವೋತ್ತು ಇದೀಗ ತಮ್ಮ ಹೊಸ ಗ್ಲಾಮರಸ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಮಿಲನ’ ಹಾಗೂ ‘ಪೃಥ್ವಿ’..

2 Min read
Author : Govindaraj S
Published : Oct 08 2026, 08:11 PM IST
Share this Photo Gallery
  • FB
  • TW
  • Linkdin
  • Whatsapp
18
ಗ್ಲಾಮರಸ್ ಫೋಟೋಶೂಟ್
Image Credit : Parvathy Thiruvothu Instagram

ಗ್ಲಾಮರಸ್ ಫೋಟೋಶೂಟ್

ಕನ್ನಡ ಸಿನಿಪ್ರೇಕ್ಷಕರಿಗೆ ‘ಮಿಲನ’ ಚಿತ್ರದ ಮೂಲಕ ಹತ್ತಿರವಾದ ಮಲಯಾಳಂ ನಟಿ ಪಾರ್ವತಿ ತಿರುವೋತ್ತು, ತಮ್ಮ ವಿಭಿನ್ನ ಅಭಿನಯದ ಮೂಲಕವೇ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದೆ, ಸವಾಲಿನ ಹಾಗೂ ಗಂಭೀರ ಪಾತ್ರಗಳಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಈ ನಟಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕಾರಣ ಅವರ ಹೊಸ ಗ್ಲಾಮರಸ್ ಫೋಟೋಶೂಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
‘ಮಿಲನ’ ಮೂಲಕ ಕನ್ನಡಿಗರ ಮನಗೆದ್ದ ನಟಿ
Image Credit : Parvathy Thiruvothu Instagram

‘ಮಿಲನ’ ಮೂಲಕ ಕನ್ನಡಿಗರ ಮನಗೆದ್ದ ನಟಿ

ಪಾರ್ವತಿ ತಿರುವೋತ್ತು ಅವರಿಗೆ ಕನ್ನಡ ಪ್ರೇಕ್ಷಕರೊಂದಿಗೆ ವಿಶೇಷ ನಂಟಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಗಮನ ಸೆಳೆದಿದ್ದರು.

Related Articles

Related image1
ಒಂದೇ ಸಕ್ಸಸ್‌ಗೆ ಬದಲಾಯ್ತು ನಟಿ ಭಾಗ್ಯಶ್ರೀ ಬೋರ್ಸೆ ಲಕ್: ಈಗ ಸಿಕ್ಕಿದ್ದು ಮಾಮೂಲಿ ಚಾನ್ಸ್ ಅಲ್ಲ!
Related image2
‘ಬೇಬಮ್ಮ’ ನಟಿ ಡ್ರೀಮ್‌ ರೋಲ್‌ ರಿವೀಲ್: ಈ ಪಾತ್ರದಲ್ಲಿ ನೋಡೋಕೆ ಫ್ಯಾನ್ಸ್‌ ಕೂಡ ಕಾತರ!
38
ಶಿವಣ್ಣನ ಜೊತೆಗೂ ನಟನೆ
Image Credit : Parvathy Thiruvothu Instagram

ಶಿವಣ್ಣನ ಜೊತೆಗೂ ನಟನೆ

‘ಮಿಲನ’ ಬಳಿಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಮತ್ತೊಮ್ಮೆ ‘ಪೃಥ್ವಿ’ ಸಿನಿಮಾದಲ್ಲೂ ನಟಿಸಿದರು. ಇದರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಗೂ ತೆರೆ ಹಂಚಿಕೊಂಡು ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿದರು.

48
ಈಗ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ!
Image Credit : Parvathy Thiruvothu Instagram

ಈಗ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ!

ಕನ್ನಡದಲ್ಲಿ ಗಮನ ಸೆಳೆದ ಬಳಿಕ ಪಾರ್ವತಿ ತಿರುವೋತ್ತು ಮಲಯಾಳಂ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಕಥೆಗಳು ಮತ್ತು ಗಟ್ಟಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

58
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ
Image Credit : Parvathy Thiruvothu Instagram

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಇತ್ತೀಚೆಗೆ ಬಿಡುಗಡೆಯಾದ ಅವರ ‘ಪ್ರಥಮ ದೃಶ್ಯ ಕುಟ್ಟಕಾರ್’ ಮಲಯಾಳಂ ಸಿನಿಮಾ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಸಿಕ್ಕಿದ್ದು, ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಸದ್ದು ಮಾಡಿದೆ.

68
ನಟನೆಯಷ್ಟೇ ಅಲ್ಲ, ಗ್ಲಾಮರ್‌ನಲ್ಲೂ ಪಾರ್ವತಿ ಸಖತ್!
Image Credit : Parvathy Thiruvothu Instagram

ನಟನೆಯಷ್ಟೇ ಅಲ್ಲ, ಗ್ಲಾಮರ್‌ನಲ್ಲೂ ಪಾರ್ವತಿ ಸಖತ್!

ಪಾರ್ವತಿ ತಿರುವೋತ್ತು ಅವರನ್ನು ಕೇವಲ ಗಂಭೀರ ಪಾತ್ರಗಳ ಮೂಲಕವೇ ಗುರುತಿಸುವಂತಿಲ್ಲ. ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ, ತಮ್ಮ ಸ್ಟೈಲಿಶ್ ಹಾಗೂ ಗ್ಲಾಮರಸ್ ಅವತಾರಗಳಿಂದಲೂ ಆಗಾಗ್ಗೆ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

78
ಸಖತ್ ವೈರಲ್
Image Credit : Parvathy Thiruvothu Instagram

ಸಖತ್ ವೈರಲ್

ಇದೀಗ ಪಾರ್ವತಿ ಮಾಡಿಸಿರುವ ಹೊಸ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಫ್ಯಾನ್ಸ್‌ ಗಮನ ಸೆಳೆಯುತ್ತಿದ್ದು, ‘ಮಿಲನ’ ಚಿತ್ರದ ಆ ಸಿಂಪಲ್ ಪಾರ್ವತಿಗೂ, ಈಗಿನ ಈ ಗ್ಲಾಮರಸ್ ಅವತಾರಕ್ಕೂ ಎಷ್ಟು ಬದಲಾವಣೆ! ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

88
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ
Image Credit : Parvathy Thiruvothu Instagram

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ

ಇನ್ನು ಪಾರ್ವತಿಯ ಈ ಹೊಸ ಫೋಟೋಶೂಟ್, ಅವರ ನಟನೆಯ ಮತ್ತೊಂದು ವಿಭಿನ್ನ ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದೆ. ಸಿನಿಮಾ, ಪಾತ್ರ, ಫ್ಯಾಷನ್-ಮೂರರಲ್ಲೂ ತಮ್ಮದೇ ಸ್ಟೈಲ್ ಉಳಿಸಿಕೊಂಡಿರುವ ನಟಿಯ ಹೊಸ ಲುಕ್‌ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಮನರಂಜನಾ ಸುದ್ದಿ
ಮಲಯಾಳಂ ಸಿನೆಮಾ
ಸ್ಯಾಂಡಲ್‌ವುಡ್
 

Latest Videos
Recommended Stories
Recommended image1
Janhvi Kapoor: ಬಾಡಿ-ಹಗ್ಗಿಂಗ್ ಡ್ರೆಸ್‌ಗಳಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್: ಫೋಟೋಸ್ ನೋಡಿ
Recommended image2
Army service: ನಾನಾ ಪಾಟೇಕರ್‌ಗೆ ಸೇನೆ ಸೇರಲು ವಿಶೇಷ ಅವಕಾಶ ನೀಡಿದ ಕನ್ನಡಿಗ ಇವರೇ!
Recommended image3
‘ಬೇಬಮ್ಮ’ ನಟಿ ಡ್ರೀಮ್‌ ರೋಲ್‌ ರಿವೀಲ್: ಈ ಪಾತ್ರದಲ್ಲಿ ನೋಡೋಕೆ ಫ್ಯಾನ್ಸ್‌ ಕೂಡ ಕಾತರ!
Related Stories
Recommended image1
ಒಂದೇ ಸಕ್ಸಸ್‌ಗೆ ಬದಲಾಯ್ತು ನಟಿ ಭಾಗ್ಯಶ್ರೀ ಬೋರ್ಸೆ ಲಕ್: ಈಗ ಸಿಕ್ಕಿದ್ದು ಮಾಮೂಲಿ ಚಾನ್ಸ್ ಅಲ್ಲ!
Recommended image2
‘ಬೇಬಮ್ಮ’ ನಟಿ ಡ್ರೀಮ್‌ ರೋಲ್‌ ರಿವೀಲ್: ಈ ಪಾತ್ರದಲ್ಲಿ ನೋಡೋಕೆ ಫ್ಯಾನ್ಸ್‌ ಕೂಡ ಕಾತರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved