- Home
- News
- India News
- India Latest News Live: ಜುರೆಲ್-ಜೈಸ್ವಾಲ್ ಬೊಂಬಾಟ ಆಟ; ಬಿಷ್ಣೋಯ್ ದಾಳಿಗೆ ಮುಳುಗಿದ ಗುಜರಾತ್ ಟೈಟಾನ್ಸ್
India Latest News Live: ಜುರೆಲ್-ಜೈಸ್ವಾಲ್ ಬೊಂಬಾಟ ಆಟ; ಬಿಷ್ಣೋಯ್ ದಾಳಿಗೆ ಮುಳುಗಿದ ಗುಜರಾತ್ ಟೈಟಾನ್ಸ್

ನವದೆಹಲಿ: ಭಾರತದ ಕ್ರೀಡಾಪಟುಗಳಲ್ಲಿ ವರ್ಷದಿಂದ ವರ್ಷಕ್ಕೆ ನಿಷೇಧಿತ ಮದ್ದು ಸೇವನೆ(ಡೋಪಿಂಗ್) ಪ್ರಮಾಣ ಹೆಚ್ಚುತ್ತಿದ್ದು, ಅನರ್ಹ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಈಗ ಕೀನ್ಯಾಕ್ಕಿಂತಲೂ ಕಳಪೆ ಸಾಧನೆ ಮಾಡಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದೆ. ಆಫ್ರಿಕಾ ದೇಶ ಕೀನ್ಯಾ ಈಗ 2ನೇ ಸ್ಥಾನದಲ್ಲಿದೆ.
ವಿಶ್ವ ಅಥ್ಲೆಟಿಕ್ ಸಂಸ್ಥೆಯ ಅಥ್ಲೆಟಿಕ್ಸ್ ಸಮಗ್ರತಾ ಘಟಕ(ಎಐಯು) ವರದಿ ಪ್ರಕಾರ, ಭಾರತದಲ್ಲಿ ಈಗ ಬರೋಬ್ಬರಿ 148 ಕ್ರೀಡಾಪಟುಗಳು ಸ್ಪರ್ಧೆಗೆ ಅನರ್ಹಗೊಂಡಿದ್ದಾರೆ. ಇದರಲ್ಲಿ ಅಗ್ರ ಅಥ್ಲೀಟ್ಗಳಾದ ದ್ಯುತೀ ಚಂದ್, ಶೇಕರ್ ಧನಲಕ್ಷ್ಮಿ, ಫರ್ವೇಜ್ ಖಾನ್ ಸೇರಿ ಪ್ರಮುಖರಿದ್ದಾರೆ. ಇನ್ನು, ಕೀನ್ಯಾದಲ್ಲಿ ಡೋಪಿಂಗ್ನಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡ ಅಥ್ಲೀಟ್ಗಳ ಸಂಖ್ಯೆ 146. ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಒಟ್ಟು 66 ಕ್ರೀಡಾಪಟುಗಳು ಅನರ್ಹಗೊಂಡಿದ್ದಾರೆ.
India Latest News Live 4 April 2026ಜುರೆಲ್-ಜೈಸ್ವಾಲ್ ಬೊಂಬಾಟ ಆಟ; ಬಿಷ್ಣೋಯ್ ದಾಳಿಗೆ ಮುಳುಗಿದ ಗುಜರಾತ್ ಟೈಟಾನ್ಸ್
India Latest News Live 4 April 2026ಆಸ್ತಿ ಮನೆ ಇಲ್ಲ, ವಾಹನ ಇಲ್ಲ, ಕೈಯಲ್ಲಿದೆ 84 ರೂ, ವಿಧಾನಸಭೆ ಚುನಾವಣೆ ಅಚ್ಚರಿ ಅಭ್ಯರ್ಥಿ
ಆಸ್ತಿ ಮನೆ ಇಲ್ಲ, ವಾಹನ ಇಲ್ಲ, ಕೈಯಲ್ಲಿದೆ 84 ರೂ, ವಿಧಾನಸಭೆ ಚುನಾವಣೆ ಅಚ್ಚರಿ ಅಭ್ಯರ್ಥಿ , ಎಟುಮಾನೂರು ಕ್ಷೇತ್ರದ ಅಭ್ಯರ್ಥಿ ಖಾತೆಯಲ್ಲಿ 40 ರೂಪಾಯಿ, ಕೈಯಲ್ಲಿ 44 ರೂಪಾಯಿ ಬಿಟ್ಟರೆ ಇನ್ಯಾವ ಆಸ್ತಿಯೂ ಇಲ್ಲ.
India Latest News Live 4 April 2026ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿದ ರಾಸಲೀಲೆ ಗುರೂಜಿ, ಆ್ಯಕ್ಟಿವಿಸ್ಟ್‌ನಿಂದ CDR ಬಿಡುಗಡೆ
ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿದ ರಾಸಲೀಲೆ ಗುರೂಜಿ, ಆ್ಯಕ್ಟಿವಿಸ್ಟ್‌ನಿಂದ CDR ಬಿಡುಗಡೆ, 100ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಂಡು ಅರೆಸ್ಟ್ ಆಗಿರುವ ಸ್ವಾಮೀಜಿ ಕುರಿತು ಕೆಲ ಮಾಹಿತಿ ಬಹಿರಂಗವಾಗಿದೆ.
India Latest News Live 4 April 2026ಟಾಟಾ ಟ್ರಸ್ಟ್‌ನಲ್ಲಿ ಧರ್ಮ ಸಂಘರ್ಷ, ಪಾರ್ಸಿ ಅಲ್ಲದವರ ನೇಮಕಕ್ಕೆ ಶುರುವಾಯ್ತು ಆಕ್ರೋಶ
ಟಾಟಾ ಟ್ರಸ್ಟ್‌ನ ಮಾಜಿ ಟ್ರಸ್ಟಿ ಮೆಹ್ಲಿ ಮಿಸ್ತ್ರಿ, 'ಬಾಯಿ ಹೀರಾಬಾಯಿ' ಸಂಸ್ಥೆಗೆ ಪಾರ್ಸಿಗಳಲ್ಲದವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. 1923ರ ಟ್ರಸ್ಟ್ ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿರುವ ಅವರು, ಇದು ಕಾನೂನುಬಾಹಿರವೆಂದು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ.
India Latest News Live 4 April 2026'ಧುರಂಧರ್' ಚಿತ್ರಕ್ಕೆ ಕೃತಿಚೌರ್ಯ ಆರೋಪದ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿಸಿದ್ರಾ ಆದಿತ್ಯ ಧರ್? ಸತ್ಯ ಸಂಗತಿ ಏನು?
ಬಾಕ್ಸ್ ಆಫೀಸ್‌ನಲ್ಲಿ ಮಿನುಗುತ್ತಿರುವ 'ಧುರಂಧರ್' ಚಿತ್ರಕ್ಕೆ ಈ ಕಾನೂನು ಸಮರವು ಹೊಸ ತಲೆನೋವಾಗಿ ಪರಿಣಮಿಸಿದೆ. ರಣವೀರ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳು ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂದು ಆತಂಕದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ 'ಕಥೆಯ ಕದನ' ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ.
India Latest News Live 4 April 2026ಮೈ ಚಳಿ ಬಿಟ್ಟು ಅಜಯ್ ದೇವಗನ್ ಜೊತೆ ಕರೀನಾ ಕಪೂರ್ ಲಿಪ್‌ಲಾಕ್ - ಸೈಫ್ ಎಂಟ್ರಿಯಾಗಾದ ಆಗಿದ್ದೇ ಬೇರೆ
ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, 2013ರ 'ಸತ್ಯಾಗ್ರಹ' ಚಿತ್ರದಲ್ಲಿ ಕರೀನಾ ಕಪೂರ್ ಅವರು ಲಿಪ್‌ಲಾಕ್ ದೃಶ್ಯಕ್ಕೆ ನಿರಾಕರಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಸೈಫ್ ಅಲಿ ಖಾನ್ ಜೊತೆಗಿನ ಮದುವೆಯ ನಂತರ ಕರೀನಾ ಈ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲಿ ಆಗಿದ್ದೇನು?
India Latest News Live 4 April 2026ಅರ್ಧಶತಕ ಸಿಡಿಸಿ ಪಂಜಾಬ್ ತಂಡ ಗೆಲ್ಲಿಸಿದ್ರೂ ಶ್ರೇಯಸ್ ಅಯ್ಯರ್ ಟೀಕಿಸಿದ ಆಕಾಶ್ ಚೋಪ್ರಾ!
India Latest News Live 4 April 2026ಜಿಯೋ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳ 'ಆಟ'ಕ್ಕೆ ಟ್ರಾಯ್ ಬ್ರೇಕ್, ಏ.14 ಡೆಡ್‌ಲೈನ್
ರಿಲಯನ್ಸ್ ಜಿಯೋದ ಕೆಲವು ರೀಚಾರ್ಜ್ ಯೋಜನೆಗಳು ತಾರತಮ್ಯದಿಂದ ಕೂಡಿದ್ದು, ಪಾರದರ್ಶಕತೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಟ್ರಾಯ್ ಹೇಳಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಪ್ಲಾನ್‌ಗಳನ್ನು ಎಲ್ಲ ವೇದಿಕೆಗಳಲ್ಲಿ ಮತ್ತು ಎಲ್ಲ ಸಾಧನಗಳಿಗೆ ಲಭ್ಯವಾಗುವಂತೆ ಮಾಡಲು ಟ್ರಾಯ್ ಕಟ್ಟುನಿಟ್ಟಿನ ಆದೇಶ ನೀಡಿದೆ.
India Latest News Live 4 April 2026ಡಿವೋರ್ಸ್ ಸುದ್ದಿಗೆ ಉತ್ತರ ಸಿಕ್ತು ಬಿಡಿ.. ಮೌನ ಮುರಿದು ಪತ್ನಿ-ಮಗಳ ಬಗ್ಗೆ 'ಜೂನಿಯರ್ ಬಿ' ಬಿಚ್ಚಿಟ್ಟ ಸತ್ಯಗಳಿವು!
ಮಹಿಳೆಯರಲ್ಲಿರುವ ಸೂಕ್ಷ್ಮ ಸಂವೇದನೆ ಪುರುಷರಲ್ಲಿ ಕಡಿಮೆ ಇರುತ್ತದೆ. ಆದರೂ ನಾನು ಮತ್ತು ಐಶ್ವರ್ಯಾ ಮಗಳಿಗೆ ಉತ್ತಮ ಮಾದರಿಯಾಗಲು ಬಯಸುತ್ತೇವೆ. ಮಕ್ಕಳಿಗೆ ಬರಿ ಮಾತಿನ ಮೂಲಕ ಪಾಠ ಮಾಡುವ ಬದಲು, ನಾವೇ ಅದನ್ನು ಮಾಡಿ ತೋರಿಸುತ್ತೇವೆ. ಮನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳೊಂದಿಗೆ ಜೀವನ ನಡೆಸಿದರೆ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ಸ್ಪರ್ಧೆಯಿಲ್ಲ..
India Latest News Live 4 April 2026'ನಾನೇನು ಫಾರಿನ್ ಪ್ಲೇಯರಾ?' - ಲಂಡನ್‌ಗೆ ಶಿಫ್ಟ್ ಆಗಿದ್ದಕ್ಕೆ ಟ್ರೋಲ್, ಖಡಕ್ ಉತ್ತರ ಕೊಟ್ಟ ವಿರಾಟ್ ಕೊಹ್ಲಿ
India Latest News Live 4 April 2026ಜಾತ್ರೆಯಲ್ಲಿ ಕುಸಿದು ಬಿದ್ದ 60 ಅಡಿ ಎತ್ತರದ ಜಾಯಿಂಟ್ ವೀಲ್; 30ಕ್ಕೂ ಹೆಚ್ಚು ಮಂದಿಗೆ ಗಾಯ!
ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ವಾರ್ಷಿಕ ಜಾತ್ರೆಯಲ್ಲಿ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ ಕುಸಿದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತಿದ್ದರಿಂದ ಹಾಗೂ ದುರ್ಬಲ ಬುನಾದಿಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
India Latest News Live 4 April 2026ಚಂದ್ರನ ಬಳಿ ಪ್ರಯಾಣ ನಡುವೆ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ
ಚಂದ್ರನ ಬಳಿ ಪ್ರಯಾಣ ನಡುವೆ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ, ವಿಜ್ಞಾನಿಗಳ ತಂಡ ಆರ್ಟಮೆಸ್ 2 ಮೂಲಕ ಮಹತ್ತರ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇದರ ನಡುವೆ ಭೂಮಿ ದೃಶ್ಯ ಕುತೂಹಲಕ್ಕೆ ಕಾರಣವಾಗಿದೆ.
India Latest News Live 4 April 2026ಸೀತೆ ಲುಕ್‌ನಲ್ಲಿ ಸಾಯಿ ಪಲ್ಲವಿ ಕಂಡಾಗ ರಣಬೀರ್‌ಗೆ ಏನಾಯ್ತು? 'ರಾವಣ' ಯಶ್ ಬಗ್ಗೆ 'ರಾಮ' ಹೇಳಿದ್ದು ಭಾರೀ ವೈರಲ್!
ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಮೊದಲ ಭಾಗವು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.
India Latest News Live 4 April 2026ಏಳು ನ್ಯಾಯಾಂಗ ಅಧಿಕಾರಿಗಳಿಗೆ ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ, ಏರ್ಪೋರ್ಟಲ್ಲಿ ಬಂಧನ
India Latest News Live 4 April 2026ಇಮಾಮ್ ಮುಖ್ಯಸ್ಥ ಉಮರ್ ಸ್ಫೋಟಕ ಭವಿಷ್ಯ, ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಘರ್ ವಾಪ್ಸಿ
ಇಮಾಮ್ ಮುಖ್ಯಸ್ಥ ಉಮರ್ ಸ್ಫೋಟಕ ಭವಿಷ್ಯ, ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಘರ್ ವಾಪ್ಸಿ, ಆರ್ಟಿಕಲ್ 370 ತೆಗೆದು ಹಾಕಿದ ಬಳಿಕ ಕಾಶ್ಮೀರದಲ್ಲಿ ಅದ್ಭುತ ಬದಲಾವಣೆ ಆಗಿದೆ ಎಂದಿದ್ದಾರೆ.
India Latest News Live 4 April 2026RCB ಕೈಬಿಟ್ಟು ಈ 4 ತಂಡಗಳೇ ಐಪಿಎಲ್ ಪ್ಲೇ ಆಫ್ ಪ್ರವೇಶಿಸಲಿವೆ ಎಂದು ಅಚ್ಚರಿ ಭವಿಷ್ಯ ನುಡಿದ ಕೆವಿನ್ ಪೀಟರ್‌ಸನ್!
ಬೆಂಗಳೂರು: 19ನೇ ಆವೃತ್ತಿಯ IPL ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಹೀಗಿರುವಾಗಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಈ ಬಾರಿ ಪ್ಲೇ ಆಫ್ ಪ್ರವೇಶಿಸಲಿರುವ ನಾಲ್ಕು ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
India Latest News Live 4 April 2026Ramayana Teaser - ರಣಬೀರ್ ಮುಖದಲ್ಲಿ 'ಅದು' ಸರಿಯಿಲ್ಲ ಎಂದು ಅಪಸ್ವರ ಎತ್ತಿದ 'ರಾಮಾಯಣ'ದ ಲಕ್ಷ್ಮಣ ಸುನಿಲ್ ಲಹ್ರಿ
ನಿತೇಶ್ ತಿವಾರಿ ನಿರ್ದೇಶನದ ಈ 'ರಾಮಾಯಣ' ಕೇವಲ ಸಿನಿಮಾ ಅಲ್ಲ, ಅದೊಂದು ದೃಶ್ಯ ವೈಭವ. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದರೆ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ.
India Latest News Live 4 April 2026ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ
ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ, ಇದು ಅತ್ಯಧಿಕ ದಾಖಲೆಯಾಗಿದೆ. ಅಷ್ಟಕ್ಕೂ ಬೆಂಗಳೂರಲ್ಲಿ ಇವಿ ಖರೀದಿ ಹೆಚ್ಚಾಗಲು ಕಾರಣವೇನು?
India Latest News Live 4 April 2026ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ
ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ, ಮೂರು ದಶಕಗಳಿಂದ ಹುಡುಕಾಟ ನಿರಂತರವಾಗಿ ಸಾಗಿತ್ತು. ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ.