ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿದ ರಾಸಲೀಲೆ ಗುರೂಜಿ, ಆ್ಯಕ್ಟಿವಿಸ್ಟ್‌ನಿಂದ CDR ಬಿಡುಗಡೆ
ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿದ ರಾಸಲೀಲೆ ಗುರೂಜಿ, ಆ್ಯಕ್ಟಿವಿಸ್ಟ್‌ನಿಂದ CDR ಬಿಡುಗಡೆ, 100ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಂಡು ಅರೆಸ್ಟ್ ಆಗಿರುವ ಸ್ವಾಮೀಜಿ ಕುರಿತು ಕೆಲ ಮಾಹಿತಿ ಬಹಿರಂಗವಾಗಿದೆ.

ಸ್ವಯಂ ಘೋಷಿತ ದೇವಮಾನವನ ಕೃತ್ಯ
ಸ್ವಯಂ ಘೋಷಿತ ದೇವಮಾನವ ಎಂದೇ ಗುರುತಿಸಿಕೊಂಡು ಹಲವರಿಗೆ ವಂಚಿಸಿದ ನಾಸಿಕ್ ಗುರೂಜಿ ಅಶೋಕ್ ಖಾರಟ್ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ. ಪೊಲೀಸರ ಪ್ರಶ್ನೆಗೆ ಉತ್ತರ ನೀಡದೆ ಮೌನಕ್ಕೆ ಜಾರಿದ್ದಾರೆ. ಇತ್ತ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಿಡಿಆರ್ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಉಪ ಮುಖ್ಯಮಂತ್ರಿಗೆ ಜೊತೆ 17 ಬಾರಿ ಮಾತುಕತೆ
ನಾಸಿಕ್ ಗುರೂಜಿ ಅಶೋಕ್ ಖಾರಟ್ ಹಲವು ರಾಜಕಾರಣಿಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಇದೇ ಕಾರಣದಿಂದ ಈತ ಮಾಡಿದ ನಿಯಮ ಉಲ್ಲಂಘನೆ ಅಪರಾಧವಾಗಲೇ ಇಲ್ಲ, ಜೈಲು ಸೇರಲಿಲ್ಲ. ಇದೀಗ ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ ಗುರೂಜಿಯ ಕಾಲ್ ಡಿಟೇಲ್ ರೆಕಾರ್ಡ್ (ಸಿಡಿಆರ್) ಬಿಡುಗಡೆ ಮಾಡಿದ್ದಾರೆ. 2025ರಲ್ಲಿ ಅಶೋಕ್ ಖಾರಟ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆ ಫೋನ್ ಮೂಲಕ 17 ಬಾರಿ ಮಾತನಾಡಿದ್ದಾರೆ.
10 ಕರೆ ಅಶೋಕ್ ಖಾರಟ್, 7 ಬಾರಿ ಏಕನಾಥ್ ಶಿಂಧೆ ಕರೆ
2025ರಲ್ಲಿ ಅಶೋಕ್ ಖಾರಟ್ ಹಾಗೂ ಏಕನಾಥ್ ಶಿಂಧೆ ಒಟ್ಟು 17 ಬಾರಿ ಫೋನ್ ಮೂಲಕ ಮಾತನಾಡಿದ್ದಾರೆ. ಈ ಪೈಕಿ 10 ಬಾರಿ ಅಶೋಕ್ ಖಾರಟ್ ಕರೆ ಮಾಡಿದ್ದರೆ, 7 ಬಾರಿ ಏಕನಾಥ್ ಶಿಂಧೆ ಕರೆ ಮಾಡಿದ್ದಾರೆ ಎಂದು ಹೋರಟಗಾರ್ತಿ ಸಿಡಿಆರ್ ಅಂಕಿ ಅಂಶ ಬಹಿರಂಗ ಮಾಡಿದ್ದಾರೆ.
21 ನಿಮಿಷದ ಸುದೀರ್ಘ ಮಾತುಕತೆ
ಅಶೋಕ್ ಖಾರಟ್ ಹಾಗೂ ಏಕನಾಥ್ ಶಿಂಧೆ ಫೋನ್ ಸಂಭಾಷಣೆಯಲ್ಲಿ ಒಂದು ಕರೆ 21 ನಿಮಿಷಗಳ ವರೆಗೆ ಸಾಗಿದೆ. ಇದು ಸುದೀರ್ಘ ಫೋನ್ ಮಾತುಕತೆಯಾಗಿದೆ. ಇದೇ ವೇಳೆ ಹಲವು ಸಚಿವರು, ರಾಜಕಾರಾಣಿಗಳು, ಇದೇ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ಮಹಾರಾಷ್ಟ್ರ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥ ರೂಪಾಲಿಗೂ ಕರೆ ಮಾಡಿದ್ದಾರೆ.
ಅಶೋಕ್ ಖಾರಟ್ ವಿಡಿಯೋ
ಅಶೋಕ್ ಖಾರಟ್ ಫೋನ್ , ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದೆ. ಇದಲ್ಲಿ 200ಕ್ಕೂ ಹೆಚ್ಚು ವಿಡಿಯೋಗಳು ಲಭ್ಯವಾಗಿದೆ. 150ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳು ಕೋಲಾಹಲ ಸೃಷ್ಟಿಸಿದೆ.
ಅಶೋಕ್ ಖಾರಟ್ ವಿಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

