MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮೈ ಚಳಿ ಬಿಟ್ಟು ಅಜಯ್​ ದೇವಗನ್​ ಜೊತೆ ಕರೀನಾ ಕಪೂರ್​ ​ ಲಿಪ್​ಲಾಕ್​: ಸೈಫ್​ ಎಂಟ್ರಿ ಆದಾಗ ಆಗಿದ್ದೇ ಬೇರೆ

ಮೈ ಚಳಿ ಬಿಟ್ಟು ಅಜಯ್​ ದೇವಗನ್​ ಜೊತೆ ಕರೀನಾ ಕಪೂರ್​ ​ ಲಿಪ್​ಲಾಕ್​: ಸೈಫ್​ ಎಂಟ್ರಿ ಆದಾಗ ಆಗಿದ್ದೇ ಬೇರೆ

ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, 2013ರ 'ಸತ್ಯಾಗ್ರಹ' ಚಿತ್ರದಲ್ಲಿ ಕರೀನಾ ಕಪೂರ್ ಅವರು ಲಿಪ್‌ಲಾಕ್ ದೃಶ್ಯಕ್ಕೆ ನಿರಾಕರಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಸೈಫ್ ಅಲಿ ಖಾನ್ ಜೊತೆಗಿನ ಮದುವೆಯ ನಂತರ ಕರೀನಾ ಈ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲಿ ಆಗಿದ್ದೇನು?

2 Min read
Author : Suchethana D
Published : Apr 04 2026, 06:39 PM IST
Share this Photo Gallery
  • FB
  • TW
  • Linkdin
  • Whatsapp
17
ಅಜಯ್​ ದೇವಗನ್​ ಹುಟ್ಟುಹಬ್ಬ
Image Credit : Instagram

ಅಜಯ್​ ದೇವಗನ್​ ಹುಟ್ಟುಹಬ್ಬ

ನಟಿ ಕಾಜೋಲ್​ ಪತಿ ಅಜಯ್​ ದೇವಗನ್​ ಅವರು ಮೊನ್ನೆಯಷ್ಟೇ ಅಂದ್ರೆ ಏಪ್ರಿಲ್​ 2ರಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಕುರಿತಾದ ರೋಚಕ ಸ್ಟೋರಿ ಒಂದು ಇದೀಗ ಬಹಿರಂಗಗೊಂಡಿದೆ. ಅದು ಕರೀನಾ ಕಪೂರ್​ ಜೊತೆಗಿನ ಲಿಪ್​ಲಾಕ್​ ಕುರಿತು ಸಂದರ್ಭ.

27
ದೇಹ ಪ್ರದರ್ಶನ, Lip Lock
Image Credit : social media

ದೇಹ ಪ್ರದರ್ಶನ, Lip Lock

ಈಗಿನ ಬಹುತೇಕ ಚಿತ್ರತಾರೆಯರು ತಮ್ಮ ದೇಹ ಪ್ರದರ್ಶನ ಮಾಡಲು ಪೈಪೋಟಿಗೆ ನಿಂತಿದ್ದಾರೆ. ಎಷ್ಟೇ ಬೋಲ್ಡ್​ (Bold) ಆಗಿ ಡ್ರೆಸ್​ ಮಾಡಿಕೊಂಡರೂ ಕೆಲವು ನಟಿಯರಿಗೆ ಚಿತ್ರಗಳಲ್ಲಿ ನಾಯಕ ಜೊತೆ ಲಿಪ್​ ಲಾಕ್​ನಂಥ ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಈಗಿನ ಬಹುತೇಕ ನಟಿಯರು ಯಾವುದೇ ಮುಲಾಜು ಇಲ್ಲದೇ ಇದನ್ನು ಅಷ್ಟೇ ಬೋಲ್ಡ್​ ಆಗಿ ಮಾಡುತ್ತಿದ್ದರೂ, ಕೆಲವು ನಟಿಯರು ಇನ್ನೂ ಸ್ವಲ್ಪ ಮರ್ಯಾದೆ ಉಳಿಸಿಕೊಂಡಿರುವ ಕಾರಣ, ಇಂಥ ದೃಶ್ಯಗಳನ್ನು ಮಾಡಲು ಹಿಂಜರಿಯುತ್ತಾರೆ.

Related Articles

Related image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Related image2
ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?
37
ಕರೀನಾ ಕಪೂರ್​ ಸ್ಟೋರಿ
Image Credit : Social Media

ಕರೀನಾ ಕಪೂರ್​ ಸ್ಟೋರಿ

ಅಂಥದ್ದೇ ಒಂದು ಸಮಸ್ಯೆ ಅಜಯ್​ ದೇವಗನ್​ ಜೊತೆ ಸೈಫ್​ ಅಲಿ ಖಾನ್​ ಪತ್ನಿ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರಿಗೆ ಎದುರಾಗಿತ್ತಂತೆ. ಕರೀನಾ ಕಪೂರ್​ ಇಬ್ಬರು ಮಕ್ಕಳ ತಂದೆ ಸೈಫ್​ ಅಲಿ ಖಾನ್​ರನ್ನು ಮದುವೆಯಾಗಿ ಕಪೂರ್​ ಸರ್​ನೇಮ್​ ಮುಂದೆ ಖಾನ್​ ಸೇರಿಸಿಕೊಂಡ ಮೇಲೂ ಬೋಲ್ಡ್​ ಡ್ರೆಸ್​ಗಳಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ, ಕೆಲವೊಮ್ಮೆ ಅವರು ಡ್ರೆಸ್​ನಿಂದಾಗಿ ಟ್ರೋಲ್​ಗೆ ಒಳಗಾಗುವುದೂ ಇದೆ. ಆದರೆ ಈಗ ಕೆಲ ವರ್ಷಗಳ ಹಿಂದಿನ ಘಟನೆಯೊಂದನ್ನು ಅವರು ಮೆಲುಕು ಹಾಕಿದ್ದಾರೆ.

47
2013ರ ಘಟನೆ
Image Credit : Social Media

2013ರ ಘಟನೆ

2013ರಲ್ಲಿ 'ಸತ್ಯಾಗ್ರಹ' ಸಿನಿಮಾದಲ್ಲಿ ಅಜಯ್​ ದೇವಗನ್ (Ajay Devgan) ಅವರನ್ನು ಚುಂಬಿಸುವ ದೃಶ್ಯ ಮಾಡಲು ನಿರಾಕರಿಸಿದ್ದ ಘಟನೆ ಇದಾಗಿದೆ. ಕರೀನಾ ಮತ್ತು ಅಜಯ್ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಒಳ್ಳೆ ಫ್ರೆಂಡ್ಸ್. ಹಿಂದೆ ಇವರು ಬಿಂದಾಸ್​ ಆಗಿ ಲಿಪ್​ಲಾಕ್​ ಸೀನ್​ ಮಾಡಿದ್ದರು. ಆದರೆ 'ಸತ್ಯಾಗ್ರಹ' ಸಿನಿಮಾದ ಲಿಪ್ ಲಾಕ್ ಸೀನ್ ಗೆ ಕರೀನಾ ನಿರಾಕರಿಸಿದ್ದರು.

57
ಓಂಕಾರ ಚಿತ್ರದಲ್ಲಿ ನಡೆದದ್ದು
Image Credit : Instagram

ಓಂಕಾರ ಚಿತ್ರದಲ್ಲಿ ನಡೆದದ್ದು

2006ರಲ್ಲಿ ಬಂದ ‘ಓಂಕಾರ’ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ಅಜಯ್ ದೇವಗನ್ ಎದುರು ಕರೀನಾ ಕಪೂರ್ ನಟಿಸಿದ್ದರು. ಚಿತ್ರದಲ್ಲಿ ಇಬ್ಬರ ನಡುವೆ ಇಂಟಿಮೇಟ್ ದೃಶ್ಯವನ್ನೂ ಚಿತ್ರೀಕರಿಸಲಾಗಿದೆ. ಆದರೆ ವಿಶಾಲ್ ಭಾರದ್ವಾಜ್ ಅವರ ಈ ಚಿತ್ರದ ನಂತರ ಪ್ರಕಾಶ್ ಝಾ (Prakash Jha) 2013 ರಲ್ಲಿ 'ಸತ್ಯಾಗ್ರಹ' ತಂದಾಗ, ಸಮೀಕರಣವೇ ಬದಲಾಯಿತು. ಚಿತ್ರದಲ್ಲಿನ 'ಚುಂಬನದ ದೃಶ್ಯ'ದ ಬಗ್ಗೆ ಕರೀನಾ ಅಸಮಾಧಾನಗೊಂಡರು ಮತ್ತು ಅದನ್ನು ಮಾಡಲು ನಿರಾಕರಿಸಿದರು. 'ಓಂಕಾರ' ಅಲ್ಲದೆ, ಕರೀನಾ ಅವರು, ಅಜಯ್ ಜೊತೆ 'ಸಿಂಗಂ' ಮತ್ತು 'ಗೋಲ್ಮಾಲ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಎಂಥದ್ದೇ ದೃಶ್ಯಗಳನ್ನಾದರೂ ಇಬ್ಬರೂ ಆರಾಮವಾಗಿ ಮಾಡಿದ್ದಾರೆ.

67
ಮದ್ವೆಯಾಗಿದ್ದ ಕರೀನಾ
Image Credit : instagram

ಮದ್ವೆಯಾಗಿದ್ದ ಕರೀನಾ

‘ಓಂಕಾರ’ದಲ್ಲಿ ಇಂಟಿಮೇಟ್ ದೃಶ್ಯದ ವೇಳೆ ಅವರಿಗೆ ಯಾವುದೇ ಸಮಸ್ಯೆ ಎದುರಾಗದೇ ಇದ್ದಾಗ 'ಸತ್ಯಾಗ್ರಹ' ಚಿತ್ರದಲ್ಲಿ ಆಕೆ ಸತ್ಯಾಗ್ರಹ ಮಾಡಿದ್ದು ಏಕೆ ಎನ್ನುವ ಹಿಂದೆ ಕುತೂಹಲದ ಕಾರಣವಿದೆ. 16 ಅಕ್ಟೋಬರ್ 2012 ರಂದು ಕರೀನಾ ಸೈಫ್ ಅಲಿ ಖಾನ್ (Saif Ali Khan) ಅವರನ್ನು ವಿವಾಹವಾದರು. ಇದಾದ ನಂತರವೇ ಕರೀನಾ ಚಿತ್ರಗಳಲ್ಲಿ 'ಚುಂಬನದ ದೃಶ್ಯ'ದ ಕರೀನಾ ಬಗ್ಗೆ ಮನಸ್ಸು ಬದಲಾಯಿಸಿದರು.

77
ಲಿಪ್​ಲಾಕ್​ಗೆ ನಕಾರ
Image Credit : Instagram\Kareena Kapoor

ಲಿಪ್​ಲಾಕ್​ಗೆ ನಕಾರ

ಮದುವೆಯಾದ ಕೆಲವೇ ದಿನಗಳಲ್ಲಿ ‘ಸತ್ಯಾಗ್ರಹ’ (Satyagrah) ಚಿತ್ರೀಕರಣ ನಡೆಯುತ್ತಿತ್ತು. ಒಂದು ಹಾಡಿನ ಸಮಯದಲ್ಲಿ ಕರೀನಾ ಕಪೂರ್ ಮತ್ತು ಅಜಯ್ ಲಿಪ್​ಲಾಕ್​ ಮಾಡಬೇಕಾಯಿತು. ಹೀಗಿರುವಾಗ ಕರೀನಾ ಮದುವೆಯ ನಂತರ ಈ ಸೀನ್ ಮಾಡೋಕೆ ಆಗುತ್ತಿಲ್ಲ. ಮದುವೆಗಿಂತ ಮೊದಲು ಮಾಡಿದ ಹಾಗೆ ಈಗ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟರು. ಈ ದೃಶ್ಯವನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಕಾಶ್ ಝಾಗೆ ಅವರು ಹೇಳಿದರು. ಬೆಬೋಗಾಗಿ ಪ್ರಕಾಶ್ ಝಾ ದೃಶ್ಯವನ್ನು ಬದಲಾಯಿಸಬೇಕಾಯಿತು. ಈ ಹಿಂದೆ ಇಮ್ರಾನ್ ಹಶ್ಮಿ ಜೊತೆಗಿನ ‘ಬಡ್ತಮೀಜ್ ದಿಲ್’ ಚಿತ್ರದಲ್ಲಿ ಚುಂಬನದ ದೃಶ್ಯಕ್ಕೆ ಕರೀನಾ ನಿರಾಕರಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರೀನಾ ಕಪೂರ್
ಸೈಫ್ ಅಲಿ ಖಾನ್
ಅಜಯ್ ದೇವಗನ್
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ಪ್ರೀತಿ

Latest Videos
Recommended Stories
Recommended image1
'ಧುರಂಧರ್' ಚಿತ್ರಕ್ಕೆ ಕೃತಿಚೌರ್ಯ ಆರೋಪದ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿಸಿದ್ರಾ ಆದಿತ್ಯ ಧರ್? ಸತ್ಯ ಸಂಗತಿ ಏನು?
Recommended image2
ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್‌ ಮಹೇಂದರ್‌ ಮುಕ್ತ ಮಾತು
Recommended image3
ಡಿವೋರ್ಸ್ ಸುದ್ದಿಗೆ ಉತ್ತರ ಸಿಕ್ತು ಬಿಡಿ.. ಮೌನ ಮುರಿದು ಪತ್ನಿ-ಮಗಳ ಬಗ್ಗೆ 'ಜೂನಿಯರ್ ಬಿ' ಬಿಚ್ಚಿಟ್ಟ ಸತ್ಯಗಳಿವು!
Related Stories
Recommended image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Recommended image2
ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved