11:14 PM (IST) Jun 29

India Latest News Live 29 June 2026 ಸರಳಾ ಭಟ್ ಅಪಹರಣ, ಅತ್ಯಾ**, ಕೊಲೆ ಕೇಸ್, 36 ವರ್ಷ ಬಳಿಕ ಉಗ್ರ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್‌ಶೀಟ್

ಕಾಶ್ಮೀರಿ ಪಂಡಿತ್ ಸರಳಾ ಭಟ್ ಪ್ರಕರಣ 36 ವರ್ಷ ಬಳಿಕ ಸದ್ದು ಮಾಡುತ್ತಿದೆ. ಕಾಶ್ಮೀರ ಕಣಿವೆಯಿಂದ ಪಂಡಿತರ ಓಡಿಸಲು ಉಗ್ರರು ನಡೆಸಿದ ನರಮೇಧಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಭಟ್ ದಾರುಣವಾಗಿ ಅಂತ್ಯವಾಗಿದ್ದಳು. ಏನಿದು ಪ್ರಕರಣ, ಈಗಿನ ಬೆಳವಣಿಗೆ ಏನು?

Read Full Story
09:14 PM (IST) Jun 29

India Latest News Live 29 June 2026 Salman Khan - 51 ವರ್ಷಗಳ ಬಳಿಕ ಮನೆ ಖಾಲಿ ಮಾಡ್ತಾರಂತೆ ಸಲ್ಮಾನ್ ಖಾನ್? - ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ!

Salman Khan: ಕಳೆದ 51 ವರ್ಷಗಳಿಂದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ, ಶೀಘ್ರದಲ್ಲೇ ಹೊಸ ಸಮುದ್ರಕ್ಕೆ ಮುಖ ಮಾಡಿರುವ ಬಂಗಲೆಗೆ ಶಿಫ್ಟ್ ಆಗಬಹುದು. ಈ ನಿರ್ಧಾರದ ಹಿಂದಿನ ಕಾರಣ ಏನು ಅನ್ನೋದು ವರದಿಗಳಿಂದ ತಿಳಿದುಬಂದಿದೆ.

Read Full Story
08:40 PM (IST) Jun 29

India Latest News Live 29 June 2026 ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಕೇಂದ್ರದ ತೀವ್ರ ಎಚ್ಚರಿಕೆ, ನೇಪಾಳದಲ್ಲಿ 52 ಭಾರತೀಯರು ತ್ರಿಶಂಕು ಸ್ಥಿತಿ!

ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯವು ತುರ್ತು ಎಚ್ಚರಿಕೆ ನೀಡಿದೆ. ಅನಧಿಕೃತ ಪ್ರವಾಸ ಆಯೋಜಕರ ವಂಚನೆಗೆ ಒಳಗಾಗಿ, ಸೂಕ್ತ ದಾಖಲೆಗಳಿಲ್ಲದೆ ನೇಪಾಳದಲ್ಲಿ ಸಿಲುಕಿರುವ 52 ಯಾತ್ರಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾತ್ರಿಕರು ಅಧಿಕೃತ ಮಾರ್ಗಗಳನ್ನೇ ಬಳಸುವಂತೆ ಮತ್ತು ಪ್ರಯಾಣದ ಮೊದಲು ಎಲ್ಲಾ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ಸೂಚಿಸಿದೆ.
Read Full Story
08:30 PM (IST) Jun 29

India Latest News Live 29 June 2026 Jr NTR-ತ್ರಿವಿಕ್ರಮ್ ಕಾಂಬೋದಲ್ಲಿ ಸೆನ್ಸೇಷನಲ್ ಸಿನಿಮಾ - ಮೈ ಜುಮ್ಮೆನ್ನಿಸೋ ಪೋಸ್ಟರ್‌ನಲ್ಲೇನಿದೆ?

'Aravinda Sametha' ಚಿತ್ರದ ಬಳಿಕ ಜೂ.ಎನ್‌ಟಿಆರ್‌ ಮತ್ತು ತ್ರಿವಿಕ್ರಮ್ ಜೋಡಿ ಮತ್ತೆ ಒಂದಾಗುತ್ತಿದೆ. ಈ ಸೆನ್ಸೇಷನಲ್ ಪ್ರಾಜೆಕ್ಟ್‌ನ ಘೋಷಣೆಯಾಗಿದ್ದು, ಬಿಡುಗಡೆಯಾದ ಪೋಸ್ಟರ್ ಸಖತ್ ಕುತೂಹಲ ಮೂಡಿಸಿದೆ.

Read Full Story
08:24 PM (IST) Jun 29

India Latest News Live 29 June 2026 ಕೇಂದ್ರದಿಂದ ಮಹತ್ವದ ನಿರ್ಧಾರ ಘೋಷಣೆ, ಜುಲೈ 1 ರಿಂದ ಪೆಟ್ರೋಲ್, ಡೀಸೆಲ್ ಮೇಲಿನ ನಿರ್ಬಂಧ ತೆರವು

ಕೇಂದ್ರ ಸರ್ಕಾರ ಇರಾನ್ ಯುದ್ಧದ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೆಲ ನಿರ್ಬಂಧ ವಿಧಿಸಿತ್ತು. ಇದೀಗ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ಜುಲೈ 1 ರಿಂದಲೇ ಇಂಧನ ಮೇಲಿನ ನಿರ್ಬಂಧ ತೆರೆವುಗೊಳಿಸಿದೆ.

 

Read Full Story
08:07 PM (IST) Jun 29

India Latest News Live 29 June 2026 Ravi Teja - 'ಇರುಮುಡಿ ಕಟ್ಟು' ಎನ್ನುತ್ತಾ ಅಯ್ಯಪ್ಪ ಭಕ್ತರಿಗೆ ವಿಶೇಷ ಸರ್ಪ್ರೈಸ್ ಕೊಟ್ಟ ರವಿತೇಜ - ಏನದು?

Ravi Teja ಮತ್ತು ಪ್ರಿಯಾ ಭವಾನಿ ಶಂಕರ್ ಅಭಿನಯದ 'ಇರುಮುಡಿ' ಸಿನಿಮಾದ ಮೊದಲ ಹಾಡು 'ಇರುಮುಡಿ ಕಟ್ಟು' ಬಿಡುಗಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಭಕ್ತಿಭಾವ ಸಾರುವ ಈ ಗೀತೆಯಲ್ಲಿ ರವಿತೇಜ ದೈವಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
07:36 PM (IST) Jun 29

India Latest News Live 29 June 2026 Salman Khan Secret Plan - 2027ರ 'ಈದ್'ಗೆ ಸುಲ್ತಾನ್ ಸಲ್ಮಾನ್ ಸೀಕ್ರೆಟ್ ಪ್ಲಾನ್; 'ಧುರಂಧರ್' ಟೀಮ್‌ ಜೊತೆಗೆ ಸಲ್ಲೂ ಮಾಡಲಿರೋದೇನು?

ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ.

Read Full Story
07:27 PM (IST) Jun 29

India Latest News Live 29 June 2026 Varanasi Epic War Scene - 3500 ಜನರೊಂದಿಗೆ ರಾಜಮೌಳಿ ಯುದ್ಧ! ಭಾರತೀಯ ಸಿನಿಮಾದಲ್ಲೇ ಅತಿದೊಡ್ಡ ದೃಶ್ಯ?

Rajamouli ಅವರ ಮುಂದಿನ ಬ್ರಹ್ಮಾಂಡ ಸಿನಿಮಾ 'ವಾರಣಾಸಿ' ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಹೊರಬೀಳುತ್ತಿದೆ. ಇದೀಗ ಚಿತ್ರದ ಯುದ್ಧದ ದೃಶ್ಯವೊಂದಕ್ಕೆ 3500 ಸಹ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.

Read Full Story
07:12 PM (IST) Jun 29

India Latest News Live 29 June 2026 19 ತಿಂಗಳ ಕಂದನ ಕಣ್ಣು ಕಸಿದ ವೈದ್ಯರು - ಮೂಗಿನ ಡ್ರಾಪ್ಸ್​ ಕಣ್ಣಿಗೆ ಹಾಕಿ ನಿರ್ಲಕ್ಷ್ಯ - ಮಗು ಶಾಶ್ವತ ಕುರುಡು

ಮಧ್ಯಪ್ರದೇಶದಲ್ಲಿ ವೈದ್ಯರೊಬ್ಬರ ನಿರ್ಲಕ್ಷ್ಯದಿಂದ 19 ತಿಂಗಳ ಮಗುವೊಂದು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದೆ. ಕೆಮ್ಮು, ನೆಗಡಿಗೆಂದು ಆಸ್ಪತ್ರೆಗೆ ದಾಖಲಾದ ಮಗುವಿನ ಕಣ್ಣಿಗೆ, ಮೂಗಿಗೆ ಹಾಕಬೇಕಿದ್ದ ಡ್ರಾಪ್ಸ್ ಹಾಕಿದ್ದೇ ಈ ದುರಂತಕ್ಕೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
Read Full Story
06:13 PM (IST) Jun 29

India Latest News Live 29 June 2026 Mithun Sridevi - ಗಂಡ-ಹೆಂಡತಿಯಂತೆ ಇದ್ದರು ಮಿಥುನ್-ಶ್ರೀದೇವಿ - ಇಡೀ ಇಂಡಸ್ಟ್ರಿಗೆ ಗೊತ್ತಿತ್ತು ಆ ಸತ್ಯ!

Mithun Sridevi ಸಂಬಂಧದ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸಿದ್ದರು ಎಂಬ ಹೇಳಿಕೆ ಇದೀಗ ಬಾಲಿವುಡ್‌ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

Read Full Story
06:12 PM (IST) Jun 29

India Latest News Live 29 June 2026 ಕಂಟಿನ್ಯೂ..ಕಂಟಿನ್ಯೂ..ಕಾಕ್ರೋಚ್ ಜನತಾ ಪಾರ್ಟಿ ದೀಪ್ಕೆಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಟ್ರೋಲ್

ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ಧರಣಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್, ಸಿಜಪಿ ಸಂಸ್ಥಾಪಕನಿಗೆ ಧೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ಟ್ರೋಲ್‌ಗೆ ಗುರಿಯಾಗಿದೆ.

Read Full Story
06:00 PM (IST) Jun 29

India Latest News Live 29 June 2026 ಮನೆ ಕೆಲಸ ಎಲ್ಲಾ ಮಾಡಿದ್ರೂ ಪತ್ನಿ ಕಿರುಕುಳ, ಥಳಿತ - ಶಾಕಿಂಗ್​ ವಿಡಿಯೋ ಮಾಡಿ ಜೀವ ಕಳೆದುಕೊಂಡ ಉದ್ಯಮಿ

ಹರಿಯಾಣದ ಫರಿದಾಬಾದ್‌ನಲ್ಲಿ 28 ವರ್ಷದ ಬಟ್ಟೆ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ, ತಮ್ಮ ಪತ್ನಿ ಮತ್ತು ಅತ್ತೆಯ ಕಡೆಯವರಿಂದ ತೀವ್ರ ಮಾನಸಿಕ ಹಿಂಸೆ ಅನುಭವಿಸಿರುವುದಾಗಿ ಆರೋಪಿಸಿದ್ದಾರೆ. ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
05:51 PM (IST) Jun 29

India Latest News Live 29 June 2026 ಭಾರತ vs ಇಂಗ್ಲೆಂಡ್ ನಡುವಿನ ಸರಣಿ ಯಾವಾಗ ಆರಂಭ? ತಂಡಗಳು ಹೇಗಿವೆ? ಎಲ್ಲಿ, ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಐರ್ಲೆಂಡ್ ಎದುರು ಟಿ20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಈ ಪ್ರವಾಸದಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ಏಷ್ಯನ್ ಗೇಮ್ಸ್‌ಗೂ ಮುನ್ನ ತಂಡದ ಬಲಾಬಲ ಪರೀಕ್ಷಿಸಲು ಹಾಗೂ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಗಮನವಿದೆ.
Read Full Story
05:34 PM (IST) Jun 29

India Latest News Live 29 June 2026 ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್‌ ಗವಾಸ್ಕರ್‌

Sunil Gavaskar on Vaibhav Suryavanshi:15 ವರ್ಷದ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ ಮುಂಬರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ಆಡುವ ಟೀಂಗೆ (Playing XI) ಸೇರಿಸಿಕೊಳ್ಳಬೇಕು ಮಾಜಿ ಕ್ರಿಕೆಟರ್ ಸುನಿಲ್ ಗಾವಸ್ಕರ್ ಅವರು ಹೇಳಿದ್ದಾರೆ.

Read Full Story
05:18 PM (IST) Jun 29

India Latest News Live 29 June 2026 ಆಸೀಸ್ ಎದುರಿನ ಸೋಲಿನ ಹೊರತಾಗಿಯೂ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ಜಗತ್ತಿನ ಮೊದಲ ಮಹಿಳಾ ಕ್ರಿಕೆಟರ್

ಲಾರ್ಡ್ಸ್‌: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಭಾರತದ ಅನುಭವಿ ಬೌಲಿಂಗ್ ಆಲ್ರೌಂಡರ್ ದೀಪ್ತಿ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

Read Full Story
04:54 PM (IST) Jun 29

India Latest News Live 29 June 2026 Actor Suriya Hombale Films movie - ತಮಿಳು ನಟ ಸೂರ್ಯ- ಹೊಂಬಾಳೆ ಫಿಲ್ಮ್ಸ್ ಸಿನಿಮಾ!‌ ನಾಯಕಿ ಯಾರು?

Tamil Actor Suriya And TJ Gnanavel Movie: ತಮಿಳು ನಟ ಸೂರ್ಯ ಹಾಗೂ ಹೊಂಬಾಳೆ ಫಿಲ್ಮ್ಸ್‌ ಸೇರಿ ಹೊಸ ಸಿನಿಮಾ ಮಾಡಲಿದೆ. ಇದಕ್ಕೆ ನಿರ್ದೇಶಕರು ಯಾರು? ನಾಯಕಿ ಯಾರು ಎಂದು ಕೂಡ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
04:39 PM (IST) Jun 29

India Latest News Live 29 June 2026 ರಾಮ ಮಂದಿರ ದೇಣಿಗೆ ಕಳ್ಳತನ - ವಕೀಲರ ನಿರ್ಧಾರಕ್ಕೆ ಸಿಕ್ಕಿ ಬಿದ್ದೋರು ಕಕ್ಕಾಬಿಕ್ಕಿ- ಇವ್ರನ್ನೆ ರಾಮನೇ ಕಾಪಾಡ್ಬೇಕು

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ. ಈ ನಿರ್ಧಾರವನ್ನು ಉಲ್ಲಂಘಿಸಿದರೆ ಐದು ಲಕ್ಷ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
Read Full Story
04:14 PM (IST) Jun 29

India Latest News Live 29 June 2026 Saif Ali Khan Shocking Statement - ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ - 'ಅಪ್ಪಾ, ನೀವು ಸಾಯುತ್ತೀರಾ?' ಎಂದಿದ್ದ ಮಗ, ಈಗ ಶಾಕಿಂಗ್ ಹೇಳಿಕೆ ಕೊಟ್ಟ ನಟ!

ಹಲವು ದಿನಗಳ ಚಿಕಿತ್ಸೆಯ ನಂತರ ಸೈಫ್ ಚೇತರಿಸಿಕೊಂಡರು. ಆದರೆ ಆ ದಾಳಿಕೋರನನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಸೈಫ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. "ಆತ ನನ್ನನ್ನು ಕೊಲ್ಲಲು ಬಂದಿದ್ದನ್ನು ನೆನಪಿಸಿಕೊಂಡಾಗ ಕ್ಷಮಿಸಲು ಸಾಧ್ಯವೇ ಇರಲಿಲ್ಲ. 

Read Full Story
03:58 PM (IST) Jun 29

India Latest News Live 29 June 2026 14ನೇ ವಯಸ್ಸಲ್ಲೇ AI ಸ್ಟಾರ್ಟ್​ಅಪ್​ - ದುಬೈ ಬುರ್ಜ್ ಖಲೀಫಾದಲ್ಲಿ ಕಚೇರಿ-ಭಾರತದ ಬಾಲಕನ ರೋಚಕ ಸ್ಟೋರಿ

14 ವರ್ಷದ ಜೈನಮ್ ಜೈನ್, ಮ್ಯಾಂಗೋ ಎಂಜಿನ್ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸ್ಥಾಪಕ. ಪುಣೆಯಲ್ಲಿ ಜನಿಸಿ ದುಬೈಗೆ ತೆರಳಿದ ಈ ಬಾಲಕ, ತನ್ನ ಛಲ ಮತ್ತು ಬುದ್ಧಿವಂತಿಕೆಯಿಂದ ವಿಶ್ವಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ಕಚೇರಿಯನ್ನು ಹೊಂದುವ ಮೂಲಕ ಯುವ ಉದ್ಯಮಿಯಾಗಿ ಹೊರಹೊಮ್ಮಿದ್ದಾನೆ. ಯಾವುದೇ ಔಪಚಾರಿಕ AI ಕೋರ್ಸ್​ ತೆಗೆದುಕೊಳ್ಳದೇ ಈತ ಈ ಸಾಧನೆ ಮಾಡಿರುವುದು ವಿಶೇಷ.
Read Full Story
02:23 PM (IST) Jun 29

India Latest News Live 29 June 2026 ಸೇಡು ತೀರಿಸಿಕೊಳ್ಳಲು ದನದ ಇಂಜೆಕ್ಷನ್‌ ಚುಚ್ಚಿ 7 ವರ್ಷದ ಬಾಲಕನ ಕೊಂದ 8ನೇ ಕ್ಲಾಸ್‌ ಹುಡುಗ!

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ, 14 ವರ್ಷದ ಬಾಲಕನೊಬ್ಬ ಸೇಡು ತೀರಿಸಿಕೊಳ್ಳಲು 7 ವರ್ಷದ ಮಗುವಿಗೆ ಜಾನುವಾರುಗಳಿಗೆ ಬಳಸುವ ಆಕ್ಸಿಟೋಸಿನ್ ಇಂಜೆಕ್ಷನ್ ಚುಚ್ಚಿ ಕೊಂದಿದ್ದಾನೆ. ದೌರ್ಜನ್ಯ ಯತ್ನವನ್ನು ತಡೆದಿದ್ದಕ್ಕೆ ಹಗೆತನ ಸಾಧಿಸಿ ಈ ಕೃತ್ಯ ಎಸಗಿದ್ದಾನೆ.

Read Full Story