Salman Khan: ಕಳೆದ 51 ವರ್ಷಗಳಿಂದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ, ಶೀಘ್ರದಲ್ಲೇ ಹೊಸ ಸಮುದ್ರಕ್ಕೆ ಮುಖ ಮಾಡಿರುವ ಬಂಗಲೆಗೆ ಶಿಫ್ಟ್ ಆಗಬಹುದು. ಈ ನಿರ್ಧಾರದ ಹಿಂದಿನ ಕಾರಣ ಏನು ಅನ್ನೋದು ವರದಿಗಳಿಂದ ತಿಳಿದುಬಂದಿದೆ.
ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಅಂದ್ರೆ ಎಲ್ಲರಿಗೂ ಸಲ್ಮಾನ್ ಖಾನ್ ನೆನಪಾಗ್ತಾರೆ. ಕಳೆದ ಐದು ದಶಕಗಳಿಂದ ಇದೇ ಖಾನ್ ಕುಟುಂಬದ ಪರ್ಮನೆಂಟ್ ವಿಳಾಸ. ಆದ್ರೆ, ಈಗ ಸಲ್ಮಾನ್ ಖಾನ್ ಮತ್ತು ಅವರ ಫ್ಯಾಮಿಲಿ ಈ ಐಕಾನಿಕ್ ವಿಳಾಸಕ್ಕೆ ಗುಡ್‌ಬೈ ಹೇಳಬಹುದು ಅಂತ ವರದಿಗಳು ಹೇಳ್ತಿವೆ. ಬಾಂದ್ರಾದ ಚಿಂಬೈ ಏರಿಯಾದಲ್ಲಿ ಕುಟುಂಬ ಆರು ಅಂತಸ್ತಿನ, ಸಮುದ್ರಕ್ಕೆ ಮುಖ ಮಾಡಿರುವ ಹೊಸ ಬಂಗಲೆಯೊಂದನ್ನು ಕಟ್ಟಿಸುತ್ತಿದೆ ಎನ್ನಲಾಗಿದೆ. ಈ ಪ್ರಾಜೆಕ್ಟ್‌ಗೆ ಇತ್ತೀಚೆಗೆ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಅನುಮೋದನೆ ನೀಡಿದೆ. ಆದರೂ, ಈ ಬಗ್ಗೆ ಸಲ್ಮಾನ್ ಖಾನ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
51 ವರ್ಷಗಳ ನಂತರ ಬದಲಾಗಲಿದೆಯೇ ಸಲ್ಮಾನ್ ಖಾನ್ ವಿಳಾಸ?
ವರದಿಗಳ ಪ್ರಕಾರ, 1974ರಿಂದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಖ್ಯಾತ ಲೇಖಕ ಸಲೀಂ ಖಾನ್ ಕುಟುಂಬದ ಮನೆಯಾಗಿದೆ. ಕುಟುಂಬದ ಹೆಚ್ಚಿನ ಸದಸ್ಯರು ಈಗ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರೂ, ಸಲ್ಮಾನ್ ಇವತ್ತಿಗೂ ತಮ್ಮ ತಂದೆ-ತಾಯಿ ಜೊತೆ ಇಲ್ಲೇ ವಾಸಿಸುತ್ತಿದ್ದಾರೆ. ಈಗ ಇಡೀ ಕುಟುಂಬವೇ ಹೊಸ ಬಂಗಲೆಗೆ ಶಿಫ್ಟ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಜೂನ್ 16 ರಂದು ಬಾಂದ್ರಾದ ಚಿಂಬೈ ಪ್ರದೇಶದಲ್ಲಿ ಹೊಸ ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಜಾಗ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಸ್ವಲ್ಪ ದೂರದಲ್ಲೇ ಇದೆ. ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಖಾನ್ (ಸುಶೀಲಾ ಚರಕ್) ಈ ಜಾಗವನ್ನು 2011ರಲ್ಲಿ ಖರೀದಿಸಿದ್ದರು.
ಭದ್ರತಾ ಕಾರಣಗಳಿಗಾಗಿ ಸಲ್ಮಾನ್ ಈ ನಿರ್ಧಾರ ತೆಗೆದುಕೊಂಡ್ರಾ?
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಿರಂತರವಾಗಿ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಸುರಕ್ಷಿತವಾದ ಮನೆ ಕಟ್ಟಲು ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. 2024ರಲ್ಲಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಫೈರಿಂಗ್ ನಡೆದ ನಂತರ, ಭದ್ರತಾ ಕಾರಣಗಳಿಗಾಗಿ ಸಲ್ಮಾನ್ ಖಾನ್ ಅವರ ಫೇಮಸ್ ಬಾಲ್ಕನಿಯನ್ನು ಕೂಡ ಮುಚ್ಚಲಾಗಿತ್ತು. ಹೊಸ ಬಂಗಲೆಯಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ ಇರಲಿದೆ ಎನ್ನಲಾಗಿದೆ.
ಹೇಗಿರಲಿದೆ ಸಲ್ಮಾನ್ ಖಾನ್ ಅವರ ಹೊಸ ಮನೆ?
ಮಾಹಿತಿ ಪ್ರಕಾರ, ಈ ಜಾಗದಲ್ಲಿ ಮೊದಲು ಎರಡು ಅಂತಸ್ತಿನ ಹಳೆಯ ಬಂಗಲೆ ಇತ್ತು. ಅದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಕೆಡವಲಾಯಿತು. ಈಗ ಇಲ್ಲಿ ಗ್ರೌಂಡ್ ಪ್ಲಸ್ ಸ್ಟಿಲ್ಟ್ ಪ್ಲಸ್ ಆರು ಅಂತಸ್ತಿನ ವಸತಿ ಕಟ್ಟಡವನ್ನು ನಿರ್ಮಿಸಲಾಗುವುದು. ಈ ನಿರ್ಮಾಣವು ಡೆವಲಪ್‌ಮೆಂಟ್ ಕಂಟ್ರೋಲ್ ಮತ್ತು ಪ್ರೊಮೋಷನಲ್ ರೆಗ್ಯುಲೇಶನ್ 2034ರ ಅಡಿಯಲ್ಲಿ ನಡೆಯಲಿದೆ. ವರದಿಗಳ ಪ್ರಕಾರ, ಸಚ್ ಡೆವಲಪರ್ಸ್ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲಿದ್ದಾರೆ. ಸುಮಾರು 1014.11 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಗೆ, ಬಿಎಂಸಿ ಅಕ್ಟೋಬರ್ 2025 ರಲ್ಲಿಯೇ ಪ್ರಾಥಮಿಕ ಅನುಮೋದನೆ (IOD) ನೀಡಿತ್ತು.
ಮರಗಳಿಗೆ ಹಾನಿ ಮಾಡಲ್ಲ: ಖಾನ್ ಕುಟುಂಬದ ಭರವಸೆ
ಕಟ್ಟಡ ನಿರ್ಮಾಣದ ಸಮಯದಲ್ಲಿ ಯಾವುದೇ ಮರಗಳಿಗೆ ಹಾನಿ ಮಾಡುವುದಿಲ್ಲ ಎಂದು ಕುಟುಂಬ ಭರವಸೆ ನೀಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರಾಜೆಕ್ಟ್ ಸೈಟ್ ಮತ್ತು ರಿಕ್ರಿಯೇಷನ್ ಏರಿಯಾದಲ್ಲಿ ಸ್ಥಳೀಯ ಜಾತಿಯ ಹೊಸ ಮರಗಳನ್ನು ನೆಡಲಾಗುವುದು. ಸದ್ಯಕ್ಕೆ, ಹೊಸ ಬಂಗಲೆ ಅಥವಾ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ತೊರೆಯುವ ಬಗ್ಗೆ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಈ ವರದಿಗಳನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಬೇಕಿದೆ. ಇನ್ನು ವರ್ಕ್ ಫ್ರಂಟ್ ಬಗ್ಗೆ ಹೇಳುವುದಾದರೆ, ಸಲ್ಮಾನ್ ಖಾನ್ ತಮ್ಮ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇದಲ್ಲದೆ, ಅವರು ಸದ್ಯ ನಯನತಾರಾ ಜೊತೆ SVC 63 ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.


