ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ಧರಣಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್, ಸಿಜಪಿ ಸಂಸ್ಥಾಪಕನಿಗೆ ಧೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ಟ್ರೋಲ್‌ಗೆ ಗುರಿಯಾಗಿದೆ.
ನವದೆಹಲಿ (ಜೂ.29) ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಧರಣಿ ತೀವ್ರಗೊಳಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರವು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ನೀಡಿದ್ದಾರೆ. ಖುದ್ದು ಧರಣಿಯಲ್ಲಿ ಕುಳಿತಿದ್ದಾರೆ.ಇತ್ತ ನಟ ಪ್ರಕಾಶ್ ರಾಜ್ ಇದೀಗ ಟ್ವೀಟ್ ಮೂಲಕ ಅಭಿಜಿತ್ ದೀಪ್ಕೆಗೆ ಧೈರ್ಯ ತುಂಬಿದ್ದಾರೆ. ಹೋರಾಟ ಮಂದುವರಿಸಲು ಸೂಚಿಸಿರುವ ಪ್ರಕಾಶ್ ರಾಜ್, ನಾವೆಲ್ಲರು ನಿಮ್ಮ ಹಿಂದೆ ಇದ್ದೇವೆ ಎಂದಿದ್ದಾರೆ. ಆದರೆ ಈ ಧೈರ್ಯ ತುಂಬಿದ ಮಾತುಗಳ ಟ್ವೀಟ್ ಟ್ರೋಲ್‌ಗೆ ಗುರಿಯಾಗಿದೆ.
ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಏನು
ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ನಮಗೆ ಚಹಾ ಸರಬರಾಜು ಮಾಡುತ್ತಿದ್ದ ಸಣ್ಣ ವ್ಯಾಪಾರಿಯನ್ನು ದೆಹಲಿ ಪೊಲೀಸರು ಬೆದರಿಸಿದ್ದಾರೆ. ಆತನ ಮನೆಗೆ ತೆರಳಿ ಪ್ರಶ್ನಿಸಿದ್ದಾರೆ. ದೆಹಲಿ ಪೊಲೀಸರು ಯಾಕೆ ಈ ಚಹಾ ವ್ಯಾಪಾರಿ ಮೇಲೆ ಇಷ್ಟೊಂದು ಆಸಕ್ತಿ ವಹಿಸುತ್ತಿದ್ದಾರೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ಈ ಸಣ್ಣ ಚಹಾ ಮಾರಾಟಗಾರ ದೇಶದ ಸುಪ್ರೀಂ ಚಾಯ್‌ವಾಲಾಗೆ ಅಪಾಯ ತಂದಿಡುವ ಸಾಧ್ಯತೆ ಇದೆ. ಅಭಿಜಿತ್ ದೀಪ್ಕೆ ನೀವು ನಿಮ್ಮ ಹೋರಾಟ ಮುಂದುವರಿಸಿದೆ. ಹಿಂದೆ ನಾವಿದ್ದೇವೆ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ.
ಚಹಾ ಮಾರಾಟಗಾರನ ಬಳಿಯೂ ನಾಲ್ಕು ವೋಟರ್ ಐಡಿ ಇದೆಯಾ?
ಪ್ರಕಾಶ್ ರಾಜ್ ಮಾಡಿದ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರಾಜ್ ಪರ, ಕಾಕ್ರೋಚ್ ಜನತಾ ಪಾರ್ಟಿ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಇದರ ನಡುವೆ ಕೆಲವರು ಚಾಯ್ ಮಾರಾಟಗಾರ ಸುಪ್ರೀಂ ಚಾಯ್‌ವಾಲಾಗೆ ಹೇಗೆ ಅಪಾಯಕಾರಿಯಾಗುತ್ತಾರೆ, ಅವರ ಬಳಿ ನಾಲ್ಕು ವೋಟರ್ ಐಡಿ ಇದೆಯಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮೊದಲು ನಿಮ್ಮ ಮೇಲಿರುವ ಥ್ರೆಟ್ ಕ್ಲಿಯರ್ ಮಾಡಿ. ನಿಮ್ಮ ಮೇಲಿನ ವಾರೆಂಟ್ ಒಮ್ಮೆ ಚೆಕ್ ಮಾಡಿ ಎಂದು ಕೆಲವರು ಸೂಚಿಸಿದ್ದಾರೆ. ಮನುಷ್ಯನಿಗೆ ಕಾಕ್ರೋಚ್ ಯಾವುತ್ತೂ ಅಪಾಯಕಾರಿಯಲ್ಲ ಎಂದು ಕೆಲವರು ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿಜ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಪಾಲ್ಗೊಂಡಿದ್ದರು. ಅಭಿಜಿತ್ ದೀಪ್ಕೆ, ಸೋನಂ ವಾಂಗ್ಚುಕ್ ಜೊತೆ ವೇದಿಕೆ ಹಂಚಿಕೊಂಡ ಪ್ರಕಾಶ್ ರಾಜ್, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಈ ದೇಶ ಆಳುತ್ತಿರುವ ಅಂಕಲ್ ಹಾಗೂ ಆಂಟಿಗಳೇ ಇದೀಗ ನೀವು ನಿವೃತ್ತಿಯಾಗುವ ಸಮಯ ಬಂದಿದೆ. ಈಗನ ಯುವ ಜನತೆ ಈ ದೇಶ ಮುನ್ನಡೆಸಲು ಸಮರ್ಥರಾಗಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಇನ್ನು ದೆಹಲಿಯಲ್ಲಿ ಆಯೋಜಿಸಿದ ಪ್ರತಿಭಟನೆಯಲ್ಲಿ ತನಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ, ಪೂರ್ವ ನಿಯೋಜಿತ ಕೆಲಸ ಇರುವ ಕಾರಣ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಾಶ್ ರಾಜ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಕಾಕ್ರೋಚ್ ಜನತಾ ಪಾರ್ಟಿ ಹೋರಾಟ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ. ಹೀಗಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ ಹೇಳಿದೆ. ಜಂತರ್ ಮಂತರ್‌ನಲ್ಲಿ ಹೋರಾಟ ತೀವ್ರಗೊಳಿಸಿದೆ. ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿ ಇದೀಗ ಹೋರಾಟ ತೀವ್ರಗೊಳಿಸಿದೆ.


