ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ.

ಸಲ್ಮಾನ್ ಖಾನ್ ಸೀಕ್ರೆಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್‌ನ 'ಟೈಗರ್' ಸಲ್ಮಾನ್ ಖಾನ್ (Salman Khan) ಅಂದ್ರೆ ಸಾಕು, ಅಭಿಮಾನಿಗಳಲ್ಲಿ ಒಂದು ರೀತಿಯ ಸಂಚಲನ ಶುರುವಾಗುತ್ತದೆ. ಸದ್ಯ ಸಲ್ಮಾನ್ ಖಾನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಅದರಲ್ಲಿ ಅತ್ಯಂತ ನಿರೀಕ್ಷಿತ ಪ್ರಾಜೆಕ್ಟ್ ಎಂದರೆ ವಂಶಿ ಪೈಡಿಪಲ್ಲಿ ನಿರ್ದೇಶನದ, ದಿಲ್ ರಾಜು ನಿರ್ಮಾಣದ ಹೊಸ ಸಿನಿಮಾ. ಸದ್ಯಕ್ಕೆ 'SVC63' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿರುವ ಈ ಚಿತ್ರದ ಬಗ್ಗೆ ಈಗ ಒಂದು ಲೇಟೆಸ್ಟ್ ಮತ್ತು ಬಿಗ್ ಅಪ್‌ಡೇಟ್ ಹೊರಬಿದ್ದಿದೆ.

ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ಬೆಳ್ಳಿತೆರೆಯ ಮೇಲೆ ಹಿಂದೆಂದೂ ಕಾಣದ ರೌದ್ರಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಲ್ಮಾನ್ ಖಾನ್ ಫ್ಯಾನ್ಸ್ ಖುಷಿ ಊರತುಂಬಾ ಹಬ್ಬಿದೆ.

ಸಲ್ಮಾನ್ ಲುಕ್ ಬದಲಿಸಲಿದ್ದಾರೆ ಪ್ರೀತಿಶೀಲ್ ಸಿಂಗ್:

ಈ ಸಿನಿಮಾದ ಹೈಪ್ ಹೆಚ್ಚಾಗಲು ಮುಖ್ಯ ಕಾರಣವೆಂದರೆ, ಬಾಲಿವುಡ್‌ನ ಖ್ಯಾತ ಮೇಕಪ್ ಮತ್ತು ಪ್ರಾಸ್ಥೆಟಿಕ್ ಡಿಸೈನರ್ ಪ್ರೀತಿಶೀಲ್ ಸಿಂಗ್ ಈ ತಂಡಕ್ಕೆ ಸೇರ್ಪಡೆಯಾಗಿರುವುದು. ಸಲ್ಮಾನ್ ಖಾನ್ ಅವರಿಗೆ ಒಂದು ವಿಶಿಷ್ಟ ಮತ್ತು ಪವರ್‌ಫುಲ್ ಲುಕ್ ನೀಡಲು ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಪ್ರೀತಿಶೀಲ್ ಅವರ ಕೈಚಳಕದಲ್ಲಿ ಸಲ್ಮಾನ್ ಅವರ ಅವತಾರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಕೊರಿಯನ್ ಆಕ್ಷನ್ ತಂಡದ ಎಂಟ್ರಿ:

ಈ ಚಿತ್ರದ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ಆಕ್ಷನ್ ಸೀಕ್ವೆನ್ಸ್‌ಗಳು. 'ಬಾಲಿವುಡ್ ಹಂಗಾಮಾ' ವರದಿಯ ಪ್ರಕಾರ, ಈ ಸಿನಿಮಾಗಾಗಿ ಜಗತ್ಪ್ರಸಿದ್ಧ ಕೊರಿಯನ್ ಆಕ್ಷನ್ ತಂಡವನ್ನು ಕರೆತರಲಾಗಿದೆ. 'ಧುರಂಧರ್' (Dhurandhar), 'ಕಿಲ್ ಅಂಡ್ ವಾರ್' (Kill and War) ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ 'ಮಿ. ಓ' (Sea Young Oh) ನೇತೃತ್ವದ ತಂಡ ಸಲ್ಮಾನ್ ಖಾನ್‌ಗೆ ಅದ್ಧೂರಿ ಆಕ್ಷನ್ ದೃಶ್ಯಗಳನ್ನು ಡಿಸೈನ್ ಮಾಡುತ್ತಿದೆ. ಪ್ರೇಕ್ಷಕರಿಗೆ ಹೊಸ ರೀತಿಯ ಆಕ್ಷನ್ ಎಕ್ಸ್‌ಪೀರಿಯನ್ಸ್ ನೀಡಲು ಸಲ್ಮಾನ್ ಮತ್ತು ವಂಶಿ ಪೈಡಿಪಲ್ಲಿ ಈ ತಂಡದೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ವಿಶೇಷವಾಗಿ ಚಿತ್ರದ ಒಂದು ದೊಡ್ಡ ಆಕ್ಷನ್ ಸೀಕ್ವೆನ್ಸ್ ಸಲ್ಮಾನ್ ಖಾನ್ ಅವರನ್ನು ಅತ್ಯಂತ ಉಗ್ರವಾದ ಮತ್ತು ಆಕ್ರಮಣಕಾರಿ (Angry Avatar) ರೂಪದಲ್ಲಿ ಪ್ರಸ್ತುತಪಡಿಸಲಿದೆ. ಚಿತ್ರಮಂದಿರಗಳಲ್ಲಿ ಈ ದೃಶ್ಯಕ್ಕೆ ಸೀಟಿ ಮತ್ತು ಚಪ್ಪಾಳೆಗಳ ಮಳೆ ಸುರಿಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದು ಸಲ್ಮಾನ್ ಖಾನ್ ಅವರ 'ಗ್ರ್ಯಾಂಡ್ ಕಮ್‌ಬ್ಯಾಕ್' ಸಿನಿಮಾ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಈ ಸುದ್ದಿ ಕೇಳಿ ಸಲ್ಲೂ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಈದ್ 2027ಕ್ಕೆ ಬಿಡುಗಡೆ:

ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ. ಯಾವಾಗ ಈ ಶುಭಸುದ್ದಿ ಬರಬಹುದು ಅಂತ ಕಾಯಲಾಗುತ್ತಿದೆ.

ಮತ್ತೊಂದು ಭರ್ಜರಿ ಪ್ರಾಜೆಕ್ಟ್ 'ಮಾತೃಭೂಮಿ':

ಸಲ್ಮಾನ್ ಖಾನ್ ಕೇವಲ ವಂಶಿ ಸಿನಿಮಾದಲ್ಲಷ್ಟೇ ಅಲ್ಲ, ಅಪೂರ್ವ ಲಖಿಯಾ ನಿರ್ದೇಶನದ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' (Maatrubhumi: May War Rest in Peace) ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಚಿತ್ರಾಂಗದ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂದಿನ ಕೆಲವು ವರ್ಷಗಳು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಹಬ್ಬದಂತಿರಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗುವುದು ಖಚಿತ ಎನ್ನಲಾಗುತ್ತಿದೆ.