ಐರ್ಲೆಂಡ್ ಎದುರು ಟಿ20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಈ ಪ್ರವಾಸದಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ಏಷ್ಯನ್ ಗೇಮ್ಸ್‌ಗೂ ಮುನ್ನ ತಂಡದ ಬಲಾಬಲ ಪರೀಕ್ಷಿಸಲು ಹಾಗೂ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಗಮನವಿದೆ.

ಬೆಂಗಳೂರು: ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 0-2 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಐದು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿ ಯಾವಾಗಿಂದ ಆರಂಭ, ಎಲ್ಲಿ ಪಂದ್ಯವನ್ನು ವೀಕ್ಷಿಸಬಹುದು? ಉಭಯ ತಂಡಗಳು ಹೇಗಿವೆ ಎನ್ನುವುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರವಾಸಿ ಭಾರತ ತಂಡವು ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಮುನ್ನ ತನ್ನ ಟಿ20 ತಂಡದ ಬಲಾಬಲಗಳನ್ನು ಪರೀಕ್ಷಿಸಿಕೊಳ್ಳಲು ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಇದಷ್ಟೇ ಅಲ್ಲದೇ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದ್ದು, ಎಲ್ಲರ ಚಿತ್ತ 15 ವರ್ಷದ ಆಟಗಾರನ ಮೇಲಿದೆ.

ಭಾರತ ತಂಡವು ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ

ಜುಲೈ-1: ಮೊದಲ ಟಿ20 ಮ್ಯಾಚ್: ರಾತ್ರಿ 10 ಗಂಟೆ: ಚೆಸ್ಟರ್‌ ಲೀ ಸ್ಟ್ರೀಟ್

ಜುಲೈ-4: ಎರಡನೇ ಟಿ20 ಮ್ಯಾಚ್: ಸಂಜೆ 7 ಗಂಟೆ: ಮ್ಯಾಂಚೆಸ್ಟರ್

ಜುಲೈ-7: ಮೂರನೇ ಟಿ20 ಮ್ಯಾಚ್: ರಾತ್ರಿ 10 ಗಂಟೆ: ನಾಟಿಂಗ್‌ಹ್ಯಾಮ್

ಜುಲೈ-9: ನಾಲ್ಕನೇ ಟಿ20 ಮ್ಯಾಚ್: ರಾತ್ರಿ 10 ಗಂಟೆ: ಬ್ರಿಸ್ಟಾಲ್

ಜುಲೈ-11: ಐದನೇ ಟಿ20 ಮ್ಯಾಚ್: ಸಂಜೆ 7 ಗಂಟೆ: ಸೌಥಾಂಪ್ಟನ್

ಜುಲೈ-14: ಮೊದಲ ಏಕದಿನ ಮ್ಯಾಚ್: ಮಧ್ಯಾಹ್ನ 3.30: ಸೌಥಾಂಪ್ಟನ್

ಜುಲೈ-16: ಎರಡನೇ ಏಕದಿನ ಮ್ಯಾಚ್: ಸಂಜೆ 5.30: ಕಾರ್ಡಿಫ್

ಜುಲೈ-19: ಮೂರನೇ ಏಕದಿನ ಮ್ಯಾಚ್: ಮಧ್ಯಾಹ್ನ 3.30: ಲಾರ್ಡ್ಸ್‌

ಎಲ್ಲಿ ನೇರ ಪ್ರಸಾರ:

ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಿರುವ ಎಲ್ಲಾ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೇ ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಈ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಟಿ20 ಸರಣಿಗೆ ಭಾರತ ತಂಡ:

ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಅರ್ಶದೀಪ್ ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಪ್ರಸಿದ್ದ್ ಕೃಷ್ಣ, ಪ್ರಿನ್ಸ್ ಯಾದವ್, ರವಿ ಬಿಷ್ಣೋಯಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಸುಯಾನ್ಶ್‌ ಶೆಡ್ಗೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್.

ಟಿ20 ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ:

ಹ್ಯಾರಿ ಬ್ರೂಕ್(ಕ್ಯಾಪ್ಟನ್), ರೆಹಾನ್ ಅಹಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕ್ಲೋಸ್, ಜೋರ್ಡನ್ ಕಾಕ್ಸ್, ಸ್ಯಾಮ್ ಕರ್ರನ್, ಲಿಯಮ್ ಡಾಸನ್, ವಿಲ್ ಜ್ಯಾಕ್ಸ್, ಸಕೀಬ್ ಮೊಹಮೂದ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್

ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡ:

ಶುಭ್‌ಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್(ಉಪನಾಯಕ), ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಸೂರ್ಯಾನ್ಶ್‌ ಶೆಡ್ಗೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ದ್ ಕೃಷ್ಣ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಗುರ್ನೂರ್ ಬ್ರಾರ್.

ಏಕದಿನ ಸರಣಿಗೆ ಇನ್ನೂ ಇಂಗ್ಲೆಂಡ್ ತಂಡ ಪ್ರಕಟವಾಗಿಲ್ಲ.