11:40 PM (IST) Oct 26

India Latest News Live 26 October 2026 Anushka Sharma - ನಟಿ ಅನುಷ್ಕಾ ಶರ್ಮಾ 3ನೇ ಮಗುವಿಗೆ ಗರ್ಭಿಣಿಯಾಗಿದ್ದಾರಾ? ವೈರಲ್ ವಿಡಿಯೋ

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಅವರ ನಡಿಗೆ ಮತ್ತು ರೂಪವನ್ನು ಗಮನಿಸಿದ ಅಭಿಮಾನಿಗಳು ಅವರು ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story
11:11 PM (IST) Oct 26

India Latest News Live 26 October 2026 ಯಶ್ 'ರಾಮಾಯಣ'ಕ್ಕೆ ಅಕ್ಷಯ್ ಕುಮಾರ್ ಟಕ್ಕರ್, 32 ವರ್ಷಗಳ ಹಳೆಯ ಸಿನಿಮಾ ಮತ್ತೆ ರಿಲೀಸ್‌ಗೆ ಪ್ಲಾನ್

ನವೆಂಬರ್ 5ರಂದು ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಬಿಡುಗಡೆಯಾಗುತ್ತಿದೆ. ಈ ಮೆಗಾ ಬಜೆಟ್ ಚಿತ್ರಕ್ಕೆ ಪೈಪೋಟಿ ನೀಡಲು ಅಕ್ಷಯ್ ಕುಮಾರ್ ಅವರ 1994ರ ಬ್ಲಾಕ್‌ಬಸ್ಟರ್ 'ಮೊಹ್ರಾ' ನವೆಂಬರ್ 6ರಂದು ಮರುಬಿಡುಗಡೆಯಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ಚಿತ್ರಗಳ ನಡುವಿನ ಹಣಾಹಣಿ ತೀವ್ರ ಕುತೂಹಲ ಮೂಡಿಸಿದೆ.
Read Full Story
10:46 PM (IST) Oct 26

India Latest News Live 26 October 2026 Delhi North Block Fire - ಭಾರತ-ಚೀನಾ ಗಡಿ ಸಂಘರ್ಷದ ನಡುವೆ ಇತ್ತ ರಾಷ್ಟ್ರಪತಿ ಭವನದ ಸಮೀಪ ಬೆಂಕಿ ಅವಘಡ! ಆಗಿದ್ದೇನು?

Delhi North Block Fire ದೆಹಲಿಯ ರಾಷ್ಟ್ರಪತಿ ಭವನದ ಸಮೀಪವಿರುವ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಕಟ್ಟಡದ ಛಾವಣಿಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಎಸಿ ಬಾಯ್ಲರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ.

Read Full Story
10:25 PM (IST) Oct 26

India Latest News Live 26 October 2026 ಬಜೆಟ್‌ಗೂ ಮುನ್ನವೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಸಿಗಲಿದೆಯೇ ಬಿಗ್ ರಿಲೀಫ್? LTCG ತೆರಿಗೆ ಪರಿಷ್ಕರಣೆಗೆ ಕೇಂದ್ರದ ಸಿದ್ಧತೆ!

ವಿದೇಶಿ ಮತ್ತು ದೇಶೀಯ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರವು ಷೇರು ಮಾರುಕಟ್ಟೆಯ ದೀರ್ಘಾವಧಿ ಬಂಡವಾಳ ಲಾಭ (LTCG) ತೆರಿಗೆಯನ್ನು ಪುನರ್‌ರಚಿಸಲು ಚಿಂತನೆ ನಡೆಸಿದೆ. ವಿದೇಶಿ ಬಂಡವಾಳ ಹೊರಹೋಗುತ್ತಿರುವುದನ್ನು ತಡೆಯಲು ಡಾಲರ್ ಮೌಲ್ಯದಲ್ಲಿ ತೆರಿಗೆ ಲೆಕ್ಕಹಾಕುವ ಹೊಸ ಸೂತ್ರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
Read Full Story
10:19 PM (IST) Oct 26

India Latest News Live 26 October 2026 ಅಲ್ಲು ಅರ್ಜುನ್ ‘ರಾಕ’ದಲ್ಲಿ ರಶ್ಮಿಕಾ ಪಾತ್ರ ಇದೇನಾ? ಆಕಸ್ಮಾತ್ ಊಹಿಸಿದ್ರೆ ತಪ್ಪಾಗೊ ಚಾನ್ಸೇ ಜಾಸ್ತಿ!

‘ರಾಕ’ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರದ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ನಟ ಅಲ್ಲು ಅರ್ಜುನ್‌ಗೆ ಎದುರಾಳಿಯಾಗಿ ನಟಿಸಲಿದ್ದಾರೆ ಎನ್ನಲಾಗಿದ್ದು, ಅಧಿಕೃತ ಘೋಷಣೆ ಇನ್ನಷ್ಟೇ ಬಾಕಿಯಿದೆ.

Read Full Story
10:07 PM (IST) Oct 26

India Latest News Live 26 October 2026 ಹೆಸರು 'ಕಾಶಿ', ಮೆನ್ಯೂನಲ್ಲಿ ಬೀಫ್, ಗೋಡೆ ಮೇಲೆ ಜಿನ್ನಾ ಫೋಟೋ - ಕೇರಳದ ಕೆಫೆ ಸುತ್ತ ಭುಗಿಲೆದ್ದ ಭಾರಿ ರಾಜಕೀಯ ದಂಗಲ್!

ಕೊಚ್ಚಿಯ ಪ್ರಸಿದ್ಧ 'ಕಾಶಿ ಆರ್ಟ್ ಕೆಫೆ'ಯಲ್ಲಿ ಬೀಫ್ ನೀಡಲಾಗುತ್ತಿದೆ ಮತ್ತು ಜಿನ್ನಾ ಚಿತ್ರವಿದೆ ಎಂದು ಯುಪಿ ಮೂಲದ ವ್ಲಾಗರ್ ವಿಡಿಯೋ ಹಂಚಿಕೊಂಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಕೇರಳದಲ್ಲಿ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.

Read Full Story
09:56 PM (IST) Oct 26

India Latest News Live 26 October 2026 ಒಂದು ಅಡಿ ಜಾಗಕ್ಕಾಗಿ 1781 ರಿಂದ ವಿವಾದ, ಕೋರ್ಟ್ ನೆನಪಿಸಿದ 'ಪುರಾತನ ಕತೆ' ಕೇಳಿ 240 ವರ್ಷಗಳ ಹಗೆತನ ಮರೆತ 2 ಕುಟುಂಬಗಳು

ಚೀನಾದಲ್ಲಿ ಎರಡು ಕುಟುಂಬಗಳ ನಡುವೆ ಕೇವಲ ಕೆಲವೇ ಅಡಿ ಜಾಗಕ್ಕಾಗಿ 1781ರಿಂದ ನಡೆಯುತ್ತಿದ್ದ ಭೂವಿವಾದವನ್ನು ನ್ಯಾಯಾಲಯವು ಇತ್ಯರ್ಥಪಡಿಸಿದೆ. ನ್ಯಾಯಾಧೀಶರು ಇತಿಹಾಸದ ಪ್ರಸಿದ್ಧ ಕಥೆಯೊಂದನ್ನು ನೆನಪಿಸುವ ಮೂಲಕ 240 ವರ್ಷಗಳ ಹಳೆಯ ದ್ವೇಷವನ್ನು ಕೊನೆಗೊಳಿಸಿದ್ದಾರೆ. ಇದರಿಂದ ಉಭಯ ಕುಟುಂಬಗಳು ತಮ್ಮ ಅಹಂಕಾರ ಬಿಟ್ಟು ಸೌಹಾರ್ದತೆಯಿಂದ ರಾಜಿ ಮಾಡಿಕೊಂಡಿವೆ.
Read Full Story
09:23 PM (IST) Oct 26

India Latest News Live 26 October 2026 ಕಥೆ ಶುರುವಾದ ಐದೇ ನಿಮಿಷಕ್ಕೆ ನಗು ತಡೆಯೋಕೆ ಆಗ್ಲಿಲ್ಲ - ದುಬೈನಲ್ಲಿ 'ಸೀನ್' ಬಗ್ಗೆ ನಟ ಸೂರ್ಯ ಮಾತು

ಸೂರ್ಯ ನಟನೆಯ 'ಸೀನ್' ಸಿನಿಮಾ ದೀಪಾವಳಿಗೆ ರಿಲೀಸ್ ಆಗ್ತಿದೆ. ಇದರ ಪ್ರೀ-ರಿಲೀಸ್ ಇವೆಂಟ್ ದುಬೈನಲ್ಲಿ ನಡೀತು. ಈ ಕಾರ್ಯಕ್ರಮದಲ್ಲಿ ಸೂರ್ಯ ಏನೆಲ್ಲಾ ಮಾತನಾಡಿದ್ರು ಅನ್ನೋದರ ಹೈಲೈಟ್ಸ್ ಇಲ್ಲಿದೆ.
Read Full Story
09:03 PM (IST) Oct 26

India Latest News Live 26 October 2026 ಸೋಶಿಯಲ್ ಮೀಡಿಯಾದಲ್ಲಿ 21 ಲಕ್ಷ ಫಾಲೋವರ್ಸ್‌, ಚುನಾವಣೆಯಲ್ಲಿ ಪಡೆದಿದ್ದು 33 ಮತಗಳು, ಆ 33 ಮಂದಿ ಯಾರು ಗೊತ್ತೇ?

ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ 21 ಲಕ್ಷ ಫಾಲೋವರ್ಸ್ ಹೊಂದಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಓಂ ಪ್ರಕಾಶ್ ಬಿಷ್ಣೋಯ್ ಕೇವಲ 33 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ. ಇವರ ಸೋಲಿಗೆ ಕಾರಣ ಏನು ಗೊತ್ತಾ?

Read Full Story
08:33 PM (IST) Oct 26

India Latest News Live 26 October 2026 'ಟಕ್ ಟಕ್' ಎಂದು ಸೈಬರ್ ಕ್ರೈಂ ಬಾಗಿಲು ಬಡಿದ ರಶ್ಮಿಕಾ-ವಿಜಯ್ ಜೋಡಿ.. ಯಾರಿಗೆಲ್ಲಾ ಈಗ ಎದೆಯಲ್ಲಿ ಗಡಗಡ ನಡುಕ?

ಟಾಲಿವುಡ್ ಜನಪ್ರಿಯ ಜೋಡಿ ಕನ್ನಡತಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಇದೀಗ ಹೈದರಾಬಾದ್‌ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಈ ಜೋಡಿ ವಿರುದ್ಧ ಆನ್‌ಲೈನ್‌ನಲ್ಲಿ ಕೆಲವು ಸುದ್ದಿಗಳು ಓಡಾಡುತ್ತಿದ್ದವು. ಅದಕ್ಕೇನಾ ಈ ಕಂಪ್ಲೇಂಟ್? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ..

Read Full Story
07:47 PM (IST) Oct 26

India Latest News Live 26 October 2026 High Protein Diet - ದೇಹದಲ್ಲಿ ಪ್ರೋಟೀನ್ ಹೆಚ್ಚಾದರೆ ಏನಾಗುತ್ತೆ? ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?

ನಮ್ಮ ದೇಹ ಸರಿಯಾಗಿ ಕೆಲಸ ಮಾಡಲು ಪ್ರೋಟೀನ್ ತುಂಬಾ ಮುಖ್ಯ. ಆದರೆ, ಇದು ಮಿತಿಯಲ್ಲಿದ್ದರೆ ಮಾತ್ರ ಒಳ್ಳೆಯದು. ಪ್ರೋಟೀನ್ ಪ್ರಮಾಣ ಹೆಚ್ಚಾದರೆ ದೇಹದ ಸಮತೋಲನ ತಪ್ಪುತ್ತದೆ. ಅಷ್ಟೇ ಅಲ್ಲ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ದಿನಕ್ಕೆ ಎಷ್ಟು ಪ್ರೋಟೀನ್ ತಿನ್ನಬೇಕು ಎಂದು ತಿಳಿದುಕೊಳ್ಳಿ!

Read Full Story
07:29 PM (IST) Oct 26

India Latest News Live 26 October 2026 ಸನಾತನ ಧರ್ಮ ಸ್ವೀಕರಿಸಿದ 'ಸುಪ್ರೀಂ' ವಕೀಲೆ ನಾಜಿಯಾ - ವಿಷಯ ತಿಳಿಯುತ್ತಲೇ ಪಾಕ್​ನಿಂದ ಪ್ರಾಣ ಬೆದರಿಕೆ

ಸುಪ್ರೀಂ ಕೋರ್ಟ್ ವಕೀಲೆ ಹಾಗೂ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ಅವರು ಇತ್ತೀಚೆಗೆ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ತಮ್ಮ ಪೂರ್ವಜರ ಧರ್ಮಕ್ಕೆ ಮರಳಿದ್ದಾಗಿ ಘೋಷಿಸಿದ ಬೆನ್ನಲ್ಲೇ ಅವರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆಗಳು ಬಂದಿವೆ. ಈ ಹಿಂದೆ ಲೆನ್ಸ್‌ಕಾರ್ಟ್ ವಿವಾದ ಹಾಗೂ ತ್ರಿವಳಿ ತಲಾಖ್ ಪ್ರಕರಣದಲ್ಲೂ ಇವರು ದಿಟ್ಟ ಹೋರಾಟ ನಡೆಸಿದ್ದರು.
Read Full Story
07:21 PM (IST) Oct 26

India Latest News Live 26 October 2026 ಪತ್ನಿಗೆ ಕಾಡಿದ ತೀವ್ರ ಅನಾರೋಗ್ಯ, ಶಸ್ತ್ರಚಿಕಿತ್ಸೆ ವೇಳೆ ದುಃಖ ತಡೆಯಲಾಗದೇ ಕಣ್ಣೀರಿಟ್ಟ ಖ್ಯಾತ ಹಿರಿಯ ನಟ

ಖ್ಯಾತ ಹಾಸ್ಯ ನಟ ಅಲಿ ಅವರ ಪತ್ನಿ ಜುಬೇದಾ ಸುಲ್ತಾನಾ ಬೇಗಂ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪತ್ನಿಯ ಸ್ಥಿತಿ ಕಂಡು ಅಲಿ ಕಣ್ಣೀರಿಟ್ಟಿದ್ದಾರೆ. ಅವರು ಅಳುತ್ತಿರುವ ದೃಶ್ಯ ವೈರಲ್ ಆಗಿದೆ.

Read Full Story
06:40 PM (IST) Oct 26

India Latest News Live 26 October 2026 Elon Musk AI Warning - ಎಐ ಕಂಪನಿಗಳು ಮುಚ್ಚಿಹೋಗುತ್ತಾ? ಇಲಾನ್ ಮಸ್ಕ್ ಅಚ್ಚರಿ ಭವಿಷ್ಯ!

ಎಐ ಚಿಪ್‌ಗಳನ್ನು ಬಾಡಿಗೆಗೆ ನೀಡುವ ಸಣ್ಣ ಕ್ಲೌಡ್ ಕಂಪನಿಗಳು ಶೀಘ್ರದಲ್ಲೇ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿವೆ ಎಂದು ಇಲಾನ್ ಮಸ್ಕ್ ಎಚ್ಚರಿಸಿದ್ದಾರೆ. ಡೇಟಾ ಸೆಂಟರ್‌ಗಳ ನಿರ್ಮಾಣಕ್ಕೆ ಭಾರಿ ಬಂಡವಾಳದ ಅಗತ್ಯವಿದ್ದು, ಸ್ಥಿರ ಆದಾಯವಿಲ್ಲದ ಕಂಪನಿಗಳಿಗೆ ಸಾಲ ಸಿಗುವುದು ಕಷ್ಟವಾಗಲಿದೆ. ಇದೇ ವೇಳೆ, ಜಿಪಿಯು ಖರೀದಿಸಲು ಸ್ಪೇಸ್ ಎಕ್ಸ್ 40 ಬಿಲಿಯನ್ ಡಾಲರ್ ಸಾಲ ಪಡೆದಿದೆ.
Read Full Story
06:37 PM (IST) Oct 26

India Latest News Live 26 October 2026 ‘ಮಿಷನ್ ಇಂಪಾಸಿಬಲ್’ನಂತೆ 64ರಲ್ಲೂ ಸಖತ್ ಫಿಟ್ - ಈ ಹಾಲಿವುಡ್ ನಟನ ಫಿಟ್‌ನೆಸ್ ಸೀಕ್ರೆಟ್ ಏನು?

ಹಾಲಿವುಡ್ ನಟ ಟಾಮ್ ಕ್ರೂಸ್ ತಮ್ಮ ಫಿಟ್‌ನೆಸ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ವೆಟ್ ಟ್ರೈನಿಂಗ್, ಕಾರ್ಡಿಯೋ, ಓಟ, ಸಾಹಸ ಕ್ರೀಡೆಗಳು ಮತ್ತು ಆಹಾರ ಪದ್ಧತಿಯ ಬಗ್ಗೆ ಹಲವು ವರದಿಗಳು ಪ್ರಕಟವಾಗಿವೆ.

Read Full Story
06:07 PM (IST) Oct 26

India Latest News Live 26 October 2026 ಅಪ್ಪನ ಜೊತೆ 6 ತಿಂಗಳು ಮಾತೇ ಆಡಿರಲಿಲ್ಲ - ಕ್ರೇಜಿಸ್ಟಾರ್‌ ನಟಿ ರಂಭಾ ಅವರಲ್ಲಿ ಇಷ್ಟೊಂದು ಹಠ ಯಾಕೆ?

ನಟಿ ರಂಭಾ ತಮ್ಮ ಹಳೆಯ ಸಂದರ್ಶನದಲ್ಲಿ ಬಾಲ್ಯದ ಹಠ, ತಂದೆಯ ಜೊತೆ ಆರು ತಿಂಗಳು ಮಾತನಾಡದ ಘಟನೆ, ಸೌಂದರ್ಯ ಮತ್ತು ಚಿತ್ರರಂಗದ ಅನುಭವಗಳ ಬಗ್ಗೆ ಹಂಚಿಕೊಂಡ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

Read Full Story
05:48 PM (IST) Oct 26

India Latest News Live 26 October 2026 Jobs - ವರ್ಷಕ್ಕೆ ₹1 ಕೋಟಿ ಸಂಬಳ! AI ಯುಗದಲ್ಲಿ ಎಂಜಿನಿಯರ್‌ಗಳಿಗೆ ಬಂಪರ್‌ ಬೇಡಿಕೆ, ಯಾವುದು ಈ ಹೈ-ಪೇಯಿಂಗ್‌ ಕೆಲಸ?

ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ 'ಫಾರ್ವರ್ಡ್ ಡಿಪ್ಲಾಯ್ಡ್ ಎಂಜಿನಿಯರಿಂಗ್' ಎಂಬ ಹೊಸ ವೃತ್ತಿ ಅವಕಾಶ ತೆರೆದುಕೊಂಡಿದೆ. ಈ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಿದರೆ ವರ್ಷಕ್ಕೆ ₹40 ಲಕ್ಷದಿಂದ ₹1 ಕೋಟಿವರೆಗೆ ವೇತನ ಪಡೆಯಬಹುದು. 2030ರ ವೇಳೆಗೆ ಈ ಉದ್ಯೋಗಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ ಎಂದು ವರದಿಗಳು ತಿಳಿಸಿವೆ.
Read Full Story
05:30 PM (IST) Oct 26

India Latest News Live 26 October 2026 Bihar Labourer Viral Video - ತಿಂಗಳೆಲ್ಲಾ ದುಡಿದ ಸಂಬಳವನ್ನು ಖರ್ಚು ಮಾಡಿ ಮೊದಲ ಸಲ ವಿಮಾನದಲ್ಲಿ ಊರಿಗೆ ಹೋದ ಕಾರ್ಮಿಕ..! ವಿಡಿಯೋ ವೈರಲ್

ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ಯುವ ಕಾರ್ಮಿಕನೊಬ್ಬ ಛತ್ ಪೂಜೆಗೆ ಊರಿಗೆ ಹೋಗಲು ತನ್ನ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಖರ್ಚು ಮಾಡಿ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಈತನ ವಿಮಾನ ಪ್ರಯಾಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಷ್ಟಪಟ್ಟು ದುಡಿದ ಹಣದಲ್ಲಿ ತನ್ನ ಆಸೆ ಈಡೇರಿಸಿಕೊಂಡಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story
05:07 PM (IST) Oct 26

India Latest News Live 26 October 2026 ಟರ್ಕಿ ಸಮುದ್ರದಾಳದಲ್ಲಿ 2100 ವರ್ಷಗಳ ಪ್ರಾಚೀನ ರೋಮನ್ ಹಡಗು ಪತ್ತೆ, ಪ್ಯಾಕಿಂಗ್ ಟೆಕ್ನಿಕ್‌ಗೆ ವಿಜ್ಞಾನಿಗಳೇ ಫಿದಾ!

ಟರ್ಕಿಯ ಅದ್ರಾಸನ್ ಕರಾವಳಿಯಲ್ಲಿ 2,100 ವರ್ಷಗಳ ಹಿಂದಿನ ಪ್ರಾಚೀನ ರೋಮನ್ ಸರಕು ಹಡಗಿನ ಅವಶೇಷಗಳು ಪತ್ತೆಯಾಗಿವೆ. ಈ ಹಡಗಿನಲ್ಲಿ ರೋಮನ್ ಗಣ್ಯರು ಬಳಸುತ್ತಿದ್ದ 122 ವಿಭಿನ್ನ ವಿನ್ಯಾಸದ ಸಾವಿರಾರು ಸೆರಾಮಿಕ್ ಪಾತ್ರೆಗಳು ಸುರಕ್ಷಿತವಾಗಿ ಸಿಕ್ಕಿವೆ. ಪ್ರಾಚೀನ ಪ್ಯಾಕಿಂಗ್ ತಂತ್ರಜ್ಞಾನ ಮತ್ತು ಸಿಸೆರೊ ಪತ್ರದ ಉಲ್ಲೇಖಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.
Read Full Story
04:51 PM (IST) Oct 26

India Latest News Live 26 October 2026 IND vs NZ - ಮೂರನೇ ಟಿ20 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ; ಓಪನ್ನಿಂಗ್ ಕಾಂಬಿನೇಷನ್ ಬದಲು?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಗಾಯದ ಸಮಸ್ಯೆಯಿಂದ ಇಶಾನ್ ಕಿಶನ್ ಹೊರಗುಳಿದಿದ್ದು, ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ಒಲಿದುಬಂದಿದೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
Read Full Story