ಇತ್ತೀಚೆಗೆ ಮುಂಬೈನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಅವರ ನಡಿಗೆ ಮತ್ತು ರೂಪವನ್ನು ಗಮನಿಸಿದ ಅಭಿಮಾನಿಗಳು ಅವರು ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ನಟಿ ಅನುಷ್ಕಾ ಶರ್ಮಾ-ವಿರಾಟ್ ಜೋಡಿ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಇತ್ತೀಚೆಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಅನುಷ್ಕಾ ಕಾಣುವ ರೀತಿ, ನಡೆಯುವ ಶೈಲಿ ನೋಡಿ ಫ್ಯಾನ್ಸ್, 'ಅನುಷ್ಕಾ ಶರ್ಮಾ ಮೂರನೇ ಮಗುವಿಗೆ ತಾಯಿಯಾಗಲಿದ್ದಾರಾ?' ಎಂದು ಕುರಿತು ಬಿಸಿಬಿಸಿ ಚರ್ಚೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಅನುಷ್ಕಾ ಶರ್ಮಾ ಆಗಲಿ ಅಥವಾ ವಿರಾಟ್ ಕೊಹ್ಲಿ ಆಗಲಿ ಅಧಿಕೃತವಾಗಿ ಈ ವರೆಗೆ ಏನೂ ಮಾಹಿತಿ ನೀಡಿಲ್ಲ. ಆದರೆ ವಿಡಿಯೋ ನೋಡಿದ ಬಳಿಕ ಫ್ಯಾನ್ಸ್‌ಗೆ ಇಂತದ್ದೊಂದು ಅನುಮಾನ ಶುರುವಾಗಿದೆ.

ಅನುಷ್ಕಾ ಶರ್ಮಾ ಮತ್ತೆ ಗರ್ಭಾವತಿ?

ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮಗಳು ವಮಿಕಾ ಮತ್ತು ಮಗ ಅಕಾಯ್ ಜೊತೆ ಸಂತೋಷದ ಜೀವನ ಕಳೆಯುತ್ತಿದ್ದಾರೆ. ಇದೀಗ ಅನುಷ್ಕಾ ಅವರ ಇತ್ತೀಚಿನ ವಿಡಿಯೋ ನೋಡಿದ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರಾ ಎಂಬ ವದಂತಿಗೆ ಕಾರಣವಾಗಿದೆ. ಅನುಷ್ಕಾ-ವಿರಾಟ್ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಮೂರನೆ ಮಗುವಿಗೆ ಗರ್ಭಿಣಿಯಾದರೆ, ಹೆಣ್ಣು ಮಗು ಹುಟ್ಟಿದರೆ ಏನು ಹೆಸರಲಿಡಲಿದ್ದಾರೆ? ಗಂಡು ಹುಟ್ಟಿದಾರೆ ಏನು ನಾಮಕರಣ ಮಾಡಬಹುದು ಎಂಬ ಚರ್ಚೆಯೂ ನಡೆದಿದೆ.

ನಿಜಕ್ಕೂ ಅನುಷ್ಕಾ ಮತ್ತೆ ಗರ್ಭಿಣಿಯಾಗಿದ್ದಾರಾ?

ಅನುಷ್ಕಾ ಶರ್ಮಾ ವಿಡಿಯೋಗೆ ನೆಟಿಜನ್ ತರಹೇವಾರಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಯುವತಿಯೊಬ್ಬಳು, ನಿಜವಾಗಲೂ ಅನುಷ್ಕಾ ಮತ್ತೆ ಗರ್ಭಿಣಿಯಾಗಿದ್ದಾರಾ?' ಎಂದು ಪ್ರಶ್ನಿಸಿದರೆ, ಮತ್ತೊಬ್ಬ, 'ಅನುಷ್ಕಾ ಗರ್ಭಿಣಿಯಾಗಿದ್ದಾರೆ ಎಂದು ನನಗಷ್ಟೇ ಅನಿಸುತ್ತಿದೆಯೇ? ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟಿಜನ್ 'ಅನುಷ್ಕಾ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ 11-12 ಪೋಸ್ಟ್‌ಗಳನ್ನು ಈಗಷ್ಟೇ ನೋಡಿದೆ' ಎಂದು ಹೇಳಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, 'ತಾನು ಗರ್ಭಿಣಿಯಾಗಿರುವ ವಿಷಯ ಅನುಷ್ಕಾ ಅವರಿಗೂ ಟ್ವಿಟರ್‌ನಿಂದಲೇ ಗೊತ್ತಾಗಿರಬೇಕು' ಎಂದು ಕಾಮೆಂಟ್ ಮಾಡಿದ್ದಾರೆ.

ಅಷ್ಟಕ್ಕೂ ಅನುಷ್ಕಾ-ವಿರಾಟ್ ಎಲ್ಲಿ ಕಾಣಿಸಿಕೊಂಡಿದ್ರು?

ಅನುಷ್ಕಾ ಮತ್ತು ವಿರಾಟ್ ಅಕ್ಟೋಬರ್ 25, ಭಾನುವಾರದಂದು ಮುಂಬೈನ ವರ್ಲಿಯಲ್ಲಿರುವ ಡೋಮ್, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆದ ಅಮೆರಿಕದ ಭಕ್ತಿ ಸಂಗೀತ ಗಾಯಕ ಕೃಷ್ಣ ದಾಸ್ ಅವರ ಲೈವ್ ಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ಈ ಜೋಡಿ ಗೇಟ್‌ವೇ ಆಫ್ ಇಂಡಿಯಾ ಬಳಿ ಕಾಣಿಸಿಕೊಂಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅನುಷ್ಕಾ ಭಕ್ತಿಗೀತೆಗಳಿಗೆ ಚಪ್ಪಾಳೆ ತಟ್ಟುತ್ತಾಧ್ವನಿಗೂಡಿಸುತ್ತಿರುವುದು ಹಾಡುತ್ತಿದ್ದಾಳೆ. ಪಕ್ಕದಲ್ಲೇ ಕುಳಿತಿರುವ ವಿರಾಟ್ ಕೊಹ್ಲಿ ಸಂಗೀತ ಕೇಳುವಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ.

ಅನುಷ್ಕಾ-ವಿರಾಟ್ ಹಿಂದಿನಿಂದಲೂ ತಮ್ಮ ಪರ್ಸನಲ್ ಲೈಫ್ ಬಗ್ಗೆ ತುಂಬಾ ಕಾಳಜಿವಹಿಸಿದ್ದಾರೆ. ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಳ್ಳುವುದಿಲ್ಲ. ತಮ್ಮ ಜೀವನದ ಪ್ರಮುಖ ವಿಚಾರಗಳನ್ನು ತಾವೇ ಸೂಕ್ತ ಸಮಯದಲ್ಲಿ ಹಂಚಿಕೊಳ್ಳುವ ನಿರ್ಧಾರವನ್ನು ಈ ದಂಪತಿ ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ವಿರಾಟ್ ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ನೋಡಿ ಫ್ಯಾನ್ಸ್ ಗರ್ಭಿಣಿ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.

Scroll to load tweet…

ಅನುಷ್ಕಾ-ವಿರಾಟ್ ಕೊಹ್ಲಿ ಮದುವೆ ಹಿನ್ನೆಲೆ

2017ರ ಡಿಸೆಂಬರ್‌ನಲ್ಲಿ ವಿವಾಹವಾದ ಈ ಜೋಡಿಗೆ 2021ರ ಜನವರಿಯಲ್ಲಿ ಮಗಳು ವಮಿಕಾ ಜನಿಸಿದರೆ, 2024ರ ಫೆಬ್ರವರಿಯಲ್ಲಿ ಮಗ ಅಕಾಯ್ ಜನಿಸಿದ್ದಾನೆ. ಈ ಹಿಂದೆಯೂ ಅನುಷ್ಕಾ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. 2018ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆಗ ಪ್ರತಿಕ್ರಿಯಿಸಿದ್ದ ಅನುಷ್ಕಾ, ಮದುವೆಯಾದ ತಕ್ಷಣವೇ ಮಗು ಆಗಬೇಕು ಎಂದು ನಿರೀಕ್ಷಿಸುವುದು ಹಳೆಯ ಮನಸ್ಥಿತಿ ಎಂದು ಹೇಳಿದ್ದರು. ಅಲ್ಲದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಅನುಷ್ಕಾ, ವಿರಾಟ್ ಜೊತೆಗಿನ ಸಂಬಂಧವನ್ನು ತಾವು ಮುಚ್ಚಿಟ್ಟಿರಲಿಲ್ಲ. ಆದರೆ ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು ನಿರ್ಧರಿಸಿದ್ದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ಸದ್ಯ ಅನುಷ್ಕಾ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದರೂ, ಈ ಬಗ್ಗೆ ದಂಪತಿಯಿಂದ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಇದು ಅಭಿಮಾನಿಗಳ ಊಹಾಪೋಹವಾಗಿಯೇ ಉಳಿದಿದೆ.