ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ 'ಫಾರ್ವರ್ಡ್ ಡಿಪ್ಲಾಯ್ಡ್ ಎಂಜಿನಿಯರಿಂಗ್' ಎಂಬ ಹೊಸ ವೃತ್ತಿ ಅವಕಾಶ ತೆರೆದುಕೊಂಡಿದೆ. ಈ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಿದರೆ ವರ್ಷಕ್ಕೆ ₹40 ಲಕ್ಷದಿಂದ ₹1 ಕೋಟಿವರೆಗೆ ವೇತನ ಪಡೆಯಬಹುದು. 2030ರ ವೇಳೆಗೆ ಈ ಉದ್ಯೋಗಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ ಎಂದು ವರದಿಗಳು ತಿಳಿಸಿವೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಭಾವಿಸುವವರಿಗೆ ಕೃತಕ ಬುದ್ದಿಮತ್ತೆ ಹೊಸ ಅವಕಾಶಗಳನ್ನು ಮುಂದಿಟ್ಟಿದೆ. ಪ್ರಮುಖವಾಗಿ ಸ್ಟಾಫ್ಟ್ವೇರ್ ಎಂಜಿನಿಯರ್ಗಳಿಗೆ ಉತ್ತಮ ಸಂಬಳ ನೀಡುವ ವಿಶೇಷ ವೃತ್ತಿಜೀವನವನ್ನು ಆರಂಭಿಸುವ ಅವಕಾಶವನ್ನು ನೀಡುತ್ತಿದೆ. ಅದುವೇ ಫಾವರ್ಡ್ ಡಿಪ್ಲಾಯ್ಡ್ ಎಂಜಿನಿಯರಿಂಗ್. ಈ ಕ್ಷೇತ್ರದಲ್ಲಿ ಅಗತ್ಯ ನೈಪುಣ್ಯತೆಯನ್ನು ಪಡೆದರೆ, ವರ್ಷಕ್ಕೆ 40 ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗೂ ಸಂಬಳ ಪಡೆದುಕೊಳ್ಳಬಹುದು. ಅಸಲಿಗೆ ಈ ಉದ್ಯೋಗ ಏನು? ಇದರಲ್ಲಿ ಯಾವ ರೀತಿಯ ನೈಪುಣ್ಯತೆ ಪಡೆದುಕೊಳ್ಳಬೇಕು? ಉದ್ಯೋಗಿಗಳಿಗೆ ಡಿಮ್ಯಾಂಡ್ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ.
ಫಾವರ್ಡ್ ರಿಪ್ಲಾಯ್ಡ್ ಎಂಜಿನಿಯರಿಂಗ್ ಎಂದರೆ ಏನು?
ಫಾವರ್ಡ್ ರಿಪ್ಲಾಯ್ಡ್ ಎಂಜಿನಿಯರ್ಗಳು ಸಾಫ್ಟ್ವೇರ್, ಎಐ ಟೆಕ್ನಾಲಜಿಯನ್ನು ವ್ಯಾಪಾರದ ಅಗತ್ಯಕ್ಕೆ ಅನುಗುಣವಾಗಿ ಉಪಯೋಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಂಪನಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವುಗಳಿಗೆ ಸೂಕ್ತ ಪರಿಹಾರಗಳನ್ನು ರೂಪಿಸಬೇಕಾಗುತ್ತದೆ.
ಸಾಮಾನ್ಯವಾಗಿ ಕೋಡಿಂಗ್ ಮಾಡುವುದು ಮಾತ್ರವಲ್ಲದೇ, ಸಮಸ್ಯೆಗೆ ಪರಿಹಾರ ಕಂಡುಕೊಂಡು ಪರೀಕ್ಷಿಸುವುದು, ಅವುಗಳನ್ನು ಜಾರಿ ಮಾಡುವುದು, ವಾಸ್ತವ ಪರಿಸ್ಥಿತಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಈ ಕೆಲಸದ ಪ್ರಮುಖ ಭಾಗವಾಗಿದೆ. ಕಂಪನಿಯ ಗ್ರಾಹಕರೊಂದಿಗೆ ನೇರವಾಗಿ ಮಾತನಾಡಿ, ಅವರ ಅಗತ್ಯಗಳನ್ನು ತಿಳಿದುಕೊಂಡು ಪರಿಹಾರ ನೀಡುವುದನ್ನು ತಿಳಿದುಕೊಳ್ಳಬೇಕಿದೆ.
2030ರ ವೇಳೆಗೆ ಭಾರೀ ಬೇಡಿಕೆ ಇರುವ ಜಾಬ್
ಸ್ಕೆಲರ್, ಸೈಬರ್ ಮೀಡಿಯಾ ರಿಸರ್ಚ್ ಒಟ್ಟಿಗೆ ಸೇರಿ ಇಂಡಿಯಾಸ್ ಎಫ್ಡಿಇ ಆಪರ್ಚುನಿಟಿ ಹೆಸರಿನಲ್ಲಿ ಒಂದು ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ವರದಿಯಲ್ಲಿ ಉದ್ಯೋಗ ಅವಕಾಶ, ಸಂಬಳ, ನೈಪುಣ್ಯಗಳನ್ನು ವಿಶ್ಲೇಷಣೆ ಮಾಡಿದೆ. ಈ ಅಧ್ಯಯನಕ್ಕಾಗಿ ಒಂದು ಸಾವಿರ ಸ್ಟಾಫ್ಟ್ ವೇರ್ ಎಂಜಿನಿಯರ್ ಗಳು, 200 ಸಂಸ್ಥೆಗಳ ಟೆಕ್ನಾಲಜಿ ನಿರ್ಣಯಿಸುವವರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಎಂಟು ಪ್ರಮುಖ ನಗರಗಳೊಂದಿಗೆ ಕೆಲವು ಟೈರ್ ಟು ಸಿಟಿಗಳಲ್ಲಿಯೂ ಮಾಹಿತಿ ಸಂಗ್ರಹಿ ಪರಿಶೀಲನೆ ನಡೆಸಲಾಗಿದೆ.
ಈ ವರದಿಯ ಅನ್ವಯ, 2030ರ ವೇಳೆಗೆ ಫಾವರ್ಡ್ ಡಿಪ್ಲಾಯ್ಡ್ ಎಂಜಿನಿಯರಿಂಗ್ ಸ್ಕಿಲ್ಸ್ ಹೊಂದಿರುವ ಉದ್ಯೋಗಿಗಳಿಗೆ ಭಾರೀ ಬೇಡಿಕೆ ಹೆಚ್ಚಾಗಲಿದೆ. ಆದರೆ ಸದ್ಯ ಈ ಅಧಿಕೃತವಾಗಿ ಕೇವಲ ಒಂದು ರಷ್ಟು ಎಂಜಿನಿಯರ್ಗಳು ಮಾತ್ರ ಈ ಕೆಲಸವನ್ನು ಮಾಡುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಕೇವಲ ಕೋಡಿಂಗ್ ಬಂದರೆ ಸಾಕಾಗುವುದಿಲ್ಲ. ಸ್ಟಾಫ್ಟ್ ವೇರ್ಅನ್ನು ಕಾರ್ಯಗತಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲ್ಯಗಳನ್ನು ಉದ್ಯೋಗಿಗಳು ಹೊಂದಿರಬೇಕು. ಎಐ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ, ರಿಯಲ್ ಟೈಮ್ನಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ.







