ಐಐಟಿ ಹೈದರಾಬಾದ್ ವಿದ್ಯಾರ್ಥಿ ದಾಖಲೆ, 2.5 ಕೋಟಿ ರೂ ಉದ್ಯೋಗ ಗಿಟ್ಟಿಸಿಕೊಂಡ ಎಂಜಿನಿಯರ್, ಕ್ಯಾಂಪಸ್ ಇಂಟರ್ವ್ಯೂನಲ್ಲಿ ನೆದರ್ಲೆಂಡ್ ಕಂಪನಿ ಈ ಆಫರ್ ನೀಡಿದೆ. ವಿಶೇಷ ಅಂದರೆ ಐಐಟಿ ಹೈದರಾಬಾದ್ ಇತಿಹಾಸದಲ್ಲಿ ಗರಿಷ್ಠ ಪ್ಯಾಕೇಜ್ ಆಫರ್
- Home
- News
- India News
- India Latest News Live: 2.5 ಕೋಟಿ ರೂ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಂಡು ದಾಖಲೆ ಬರೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ
India Latest News Live: 2.5 ಕೋಟಿ ರೂ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಂಡು ದಾಖಲೆ ಬರೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ

ನವದೆಹಲಿ: 'ಭಾರತ ಮತ್ತು ಪಾಕಿಸ್ತಾನದ ಯುದ್ಧ ಸ್ಥಗಿತಕ್ಕೆ ಮಧ್ಯಸ್ಥಿಕೆ ವಹಿಸಿದ್ದು ತಾನೇ ಎಂಬ ಚೀನಾ ಹೇಳಿಕೆ ಕಳವಳಕಾರಿ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಸ್ಪಷ್ಟನೆ ನೀಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಆಪರೇಷನ್ ಸಿಂದೂರವನ್ನು ನಿಲ್ಲಿಸಲು ತಾನು ಮಧ್ಯಪ್ರ ವೇಶಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 65ಕ್ಕೂ ಹೆಚ್ಚು ಸಲ ಹೇಳಿಕೊಂಡಿದ್ದಾರೆ. ಈಗ ಚೀನಾದ ವಿದೇಶಾಂಗ ಸಚಿವರು, ಚೀನಾ ಕೂಡ ಮಧ್ಯಸ್ಥಿಕೆ ವಹಿಸಿದೆ ಎಂದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದು, ಭಾರತೀ ಯರಿಗೆ ಸ್ಪಷ್ಟನೆ ನೀಡಬೇಕು' ಎಂದಿದ್ದಾರೆ.
India Latest News Live 1January 2026 2.5 ಕೋಟಿ ರೂ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಂಡು ದಾಖಲೆ ಬರೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ
India Latest News Live 1January 2026 ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥ
ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥವಾಗಿದೆ. ಕರಳು ಹಿಂಡುವ ಈ ಘಟನೆಗೆ ದೇಶವೇ ಮರುಗಿದೆ. ಸುಂದರ ಕುಟುಂಬ ತಿಂಗಳುಗಳ ಅಂತರದಲ್ಲಿ ಆಘಾತದ ಮೇಲೆ ಆಘಾತ ಅನುಭವಿಸಿದೆ
India Latest News Live 1January 2026 ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು
ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು, ಗೋವಾ ಪ್ರವಾಸದಲ್ಲಿ ಸಾರಾ ತೆಂಡೂಲ್ಕರ್ ಬಿಯರ್ ಬಾಟಲಿ ಹಿಡಿದು ರಸ್ತೆಯಲ್ಲಿ ತೆರಳುತ್ತಿರುವ ವಿಡಿಯೋಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ.
India Latest News Live 1January 2026 '2 ಕೆಜಿ ನಿಂಬೆಹಣ್ಣು ಮತ್ತು 3 ಕೆಜಿ ಜೇನುತುಪ್ಪ ಕಳೆದುಕೊಂಡೆ..' ತೂಕ ಇಳಿಸುವ ಟಿಪ್ಸ್‌ಗೆ ಉದ್ಯಮಿ ಹರ್ಷ್ ಗೋಯೆಂಕಾ ಜೋಕ್!
ಉದ್ಯಮಿ ಹರ್ಷ್ ಗೋಯೆಂಕಾ ಅವರು ನಿಂಬೆ-ಜೇನುತುಪ್ಪದ ಮನೆಮದ್ದಿನಿಂದ ತೂಕ ಇಳಿಸುವ ಪ್ರಯತ್ನದ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
India Latest News Live 1January 2026 ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಸಚಿವರ ಕಾರು ಅಪಘಾತ, ಹೆದ್ದಾರಿಯಲ್ಲಿ ಘಟನೆ
ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಸಚಿವರ ಕಾರು ಅಪಘಾತ, ಹೆದ್ದಾರಿಯಲ್ಲಿ ಘಟನೆ, ಸಚಿವರು ಕಾರಿನಲ್ಲಿ ಸಂಚರಿಸುತ್ತಿರುವಾಗ ಈ ಅಪಘಾತ ನಡೆದಿದೆ. ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಅಪಘಾತ ಸಂಭವಿಸಿದೆ.
India Latest News Live 1January 2026 ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್ ದಿಗ್ಗಜ ಕ್ರಿಕೆಟರ್ ಡೇಮಿಯನ್ ಮಾರ್ಟಿನ್, ಅಪ್‌ಡೇಟ್ ನೀಡಿದ ಗಿಲ್‌ಕ್ರಿಸ್ಟ್!
ಖ್ಯಾತ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರು ಮೆನಿಂಜೈಟಿಸ್‌ನಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಮಾಗೆ ಜಾರಿದ್ದ ಅವರ ಆರೋಗ್ಯದಲ್ಲಿ ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತಿವೆ ಎಂದು ಮಾಜಿ ಸಹ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಮಾಹಿತಿ ನೀಡಿದ್ದಾರೆ.
India Latest News Live 1January 2026 ಟ್ರೆಂಡ್ ಆದ ಬಿಜೆಪಿ ಸಂಸದನ ಹೊಸವರ್ಷ ಶುಭಾಶಯ,ಗ್ರೆಗೋರಿಯನ್ ಕ್ಯಾಲೆಂಡರ್ ತೆರೆದಿಟ್ಟ ತ್ರಿವೇದಿ
ಟ್ರೆಂಡ್ ಆದ ಬಿಜೆಪಿ ಸಂಸದನ ಹೊಸವರ್ಷ ಶುಭಾಶಯ,ಗ್ರೆಗೋರಿಯನ್ ಕ್ಯಾಲೆಂಡರ್ ತೆರೆದಿಟ್ಟ ತ್ರಿವೇದಿ, ರೋಮ್ ದೇವರು ಜನೂಸ್ ಹೆಸರಿನಲ್ಲಿ ಆರಂಭಗೊಂಡ ಈ ಗ್ರೆಗೋರಿಯನ್ ಕ್ಯಾಲೆಂಡರ್ ಇತಿಹಾಸವನ್ನು ಶುಭಾಶಯದ ಮೂಲಕ ತೆರೆದಿಟ್ಟಿದ್ದಾರೆ.
India Latest News Live 1January 2026 ಕೂದಲು ನೇರವಾಗಿಸುವ ಮಷಿನ್ನಿಂದ ಹೆಚ್ಚುತ್ತಿದೆ ಕಿಡ್ನಿ ಡ್ಯಾಮೇಜ್! ತಜ್ಞರು ನೀಡಿರುವ ಎಚ್ಚರಿಕೆ ಏನು? ಏಕೆ ಹೀಗೆ?
ಹೇರ್ ಸ್ಟ್ರೇಟನಿಂಗ್ ಮಾಡಿಸಿಕೊಂಡ 17 ವರ್ಷದ ಬಾಲಕಿ ಸೇರಿದಂತೆ 26 ಮಹಿಳೆಯರು ತೀವ್ರ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದರು. ಸಂಶೋಧನೆಯಿಂದ, ಕೂದಲು ನೇರಗೊಳಿಸುವ ಉತ್ಪನ್ನಗಳಲ್ಲಿರುವ 'ಗ್ಲೈಆಕ್ಸಿಲಿಕ್ ಆಮ್ಲ'ವೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ.
India Latest News Live 1January 2026 2025ರಲ್ಲಿ ಸಂಪತ್ತು ಡಬಲ್ ಮಾಡಿದ ಟಾಪ್-10 ಷೇರುಗಳು, ಇದರಲ್ಲಿ ನಿಮ್ಮ ಹೂಡಿಕೆ ಇದ್ಯಾ?
2025ರಲ್ಲಿ ಭಾರತೀಯ ಷೇರು ಮಾರುಕಟ್ಟೆಯು ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಸಿಂಗಲ್-ಡಿಜಿಟ್ ಲಾಭವನ್ನು ಕಂಡರೂ, ಕೆಲವು ಷೇರುಗಳು ಹೂಡಿಕೆದಾರರಿಗೆ ಅದ್ಭುತ ಲಾಭವನ್ನು ನೀಡಿವೆ. ಫೋರ್ಸ್ ಮೋಟಾರ್ಸ್, ಎಲ್&ಟಿ ಫೈನಾನ್ಸ್, ಮತ್ತು ಹಿಂದೂಸ್ತಾನ್ ಕಾಪರ್ ಸೇರಿದಂತೆ 10 ಕಂಪನಿಗಳು ಭರ್ಜರಿ ರಿಟರ್ನ್ಸ್ ನೀಡಿವೆ.
India Latest News Live 1January 2026 ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂಗೆ ಥಳಿಸಿ ಬೆಂಕಿ ಹಚ್ಚಿದ ಗುಂಪು, ಭಾರತದಲ್ಲಿ ಕೆಕೆಆರ್ ವಿರುದ್ಧ ಆಕ್ರೋಶ
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂಗೆ ಥಳಿಸಿ ಬೆಂಕಿ ಹಚ್ಚಿದ ಗುಂಪು, ಭಾರತದಲ್ಲಿ ಕೆಕೆಆರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಮೇಲೆ ದಾಳಿಯಾಗುತ್ತಿದ್ದರೆ ಇತ್ತ ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ಧವೂ ಸ್ವಾಮೀಜಿಗಳು ಆಕ್ರೋಶ ಹೊರಹಾಕಿದ್ದೇಕೆ?
India Latest News Live 1January 2026 ಘಾನಾ ಪ್ರವಾದಿಯ ಅಸಲಿ ಮುಖ ಬಯಲು - ಪ್ರವಾಹ ಆಗುತ್ತೆ ಅಂತ ಜನರ ದಾರಿ ತಪ್ಪಿಸಿದ ಪ್ರವಾದಿಯ ಬಂಧನ
2025ರಲ್ಲಿ ಪ್ರಳಯವಾಗುವುದೆಂದು ಜನರಲ್ಲಿ ಭೀತಿ ಹುಟ್ಟಿಸಿ, ಸಂಪತ್ತನ್ನು ದಾನ ಮಾಡಲು ಹೇಳಿದ ಘಾನಾದ ಸ್ವಯಂ ಘೋಷಿತ ಪ್ರವಾದಿ ಇವಾನ್ಸ್ ಎಶುನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರವಾಹದಿಂದ ರಕ್ಷಿಸಲು ನಾವೆಗಳನ್ನು ನಿರ್ಮಿಸಿರುವುದಾಗಿ ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದ.
India Latest News Live 1January 2026 ದೊಡ್ಡ ಮರುಭೂಮಿಯನ್ನೇ ಹೊಂದಿದ್ದರೂ ಈ ಮುಸ್ಲಿಂ ದೇಶಗಳು ಮರಳನ್ನು ವಿದೇಶದಿಂದ ಆಮದು ಮಾಡಿಕೊಳ್ಳೋದೇಕೆ?
Why Desert Countries Like Saudi Arabia & UAE Import Sand ಗಲ್ಫ್ ಪ್ರದೇಶದ ಮುಸ್ಲಿಂ ದೇಶಗಳಲ್ಲಿ ಅಷ್ಟೊಂದು ಮರಳಿದ್ದರೂ, ಈ ದೇಶಗಳು ಮಾತ್ರ ವಿದೇಶದಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಈ ದೇಶಗಳಿಗೆ ಮರಳಿನ ಅಗತ್ಯವೇಕೆ ಅನ್ನೋದರ ವಿವರ ಇಲ್ಲಿದೆ.
India Latest News Live 1January 2026 ಓಲಾ, ಉಬರ್ ಪ್ರಾಬಲ್ಯಕ್ಕೆ ಅಂತ್ಯ; ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ ಇಂದಿನಿಂದ ಆರಂಭ!
ದೇಶದ ಮೊದಲ ಸರ್ಕಾರಿ ಸಬ್ಸಿಡಿ, ಕಮಿಷನ್ ರಹಿತ ಕ್ಯಾಬ್ ಸೇವೆ ಭಾರತ್ ಟ್ಯಾಕ್ಸಿ ದೆಹಲಿಯಲ್ಲಿ ಕಾರ್ಯಾರಂಭ ಮಾಡಿದೆ. ಓಲಾ, ಉಬರ್‌ಗೆ ಪರ್ಯಾಯವಾಗಿ ಪರಿಚಯಿಸಲಾದ ಈ ಆ್ಯಪ್ ಆಧಾರಿತ ಸೇವೆಯು ಕಡಿಮೆ ದರದಲ್ಲಿ ಸುರಕ್ಷಿತ ಪ್ರಯಾಣವನ್ನು ನೀಡುತ್ತದೆ.
India Latest News Live 1January 2026 3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ
ಶ್ರೀಮಂತ ಉದ್ಯಮಿಯ 3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ, ಫ್ಲ್ಯಾಟ್, ಐಷಾರಾಮಿ ಕಾರು ಸೇರಿದಂತೆ ಲಕ್ಷುರಿ ಲೈಫ್‌ಸ್ಟೈಲ್‌ನಲ್ಲಿ ಜೀವನ ಆಫರ್ ನೀಡಲಾಗಿತ್ತು. ಯಾರು ಆ ನಟಿ?
India Latest News Live 1January 2026 ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರಾದ ಮೇಘನಾ ರಾಣಿ ಮತ್ತು ಭಾವನಾ ಕಂಡಿಯಲಾ ಸಾವನ್ನಪ್ಪಿದ್ದಾರೆ. ಇವರು ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಅರಸುತ್ತಿದ್ದ
India Latest News Live 1January 2026 ಮುಂದಿನ ವರ್ಷದ ಆಗಸ್ಟ್ 15ಕ್ಕೆ ಓಡಾಡಲಿದೆ ದೇಶದ ಮೊದಲ ಬುಲೆಟ್ ಟ್ರೇನ್!
India's First Bullet Train to Start on August 15, 2027: Ashwini Vaishnaw ಅಹಮದಾಬಾದ್‌ನ ಸಬರಮತಿ ಮತ್ತು ಮುಂಬೈ ನಡುವೆ ನಿರ್ಮಿಸಲಾಗುತ್ತಿರುವ 508 ಕಿಮೀ ಹೈಸ್ಪೀಡ್ ರೈಲು ಕಾರಿಡಾರ್, ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿದೆ.
India Latest News Live 1January 2026 ಹೆಣ್ಮಕ್ಕಳೇ ಎಚ್ಚರ ಎಚ್ಚರ - ನಿಮ್ಮ ಫೋಟೋದ ಮೇಲಿನ ಬಟ್ಟೆಗಳನ್ನು ಕಳಚಿ ಶೇರ್ ಮಾಡ್ತಿದೆ ಈ AI ಟೂಲ್!
ಕೃತಕ ಬುದ್ಧಿಮತ್ತೆ (AI) ಟೂಲ್‌ಗಳು, ವಿಶೇಷವಾಗಿ ಎಲಾನ್ ಮಸ್ಕ್ ಅವರ ಗ್ರಾಕ್, ಈಗ ದುರ್ಬಳಕೆಯಾಗುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹೆಣ್ಣುಮಕ್ಕಳ ಫೋಟೋಗಳನ್ನು ವಿವಸ್ತ್ರಗೊಳಿಸಿ, ನಗ್ನ ಚಿತ್ರಗಳನ್ನು ರಚಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
India Latest News Live 1January 2026 ಫೆಬ್ರವರಿಯಿಂದ 15 ರೂಪಾಯಿ ಸಿಗರೇಟ್ 18ಕ್ಕೆ ಏರಿಕೆ!
ಫೆಬ್ರವರಿ 2026 ರಿಂದ ಜಾರಿಗೆ ಬರುವ ಹೊಸ ಅಬಕಾರಿ ಸುಂಕದಿಂದಾಗಿ ಸಿಗರೇಟ್ ಬೆಲೆಗಳು ಶೇ. 20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ತೆರಿಗೆ ಹೆಚ್ಚಳವು 'ತೆರಿಗೆಯ ಮೇಲೆ ತೆರಿಗೆ' ಪರಿಣಾಮವನ್ನು ಸೃಷ್ಟಿಸಿ, ಅಂತಿಮ ಬೆಲೆಯನ್ನು ಹೆಚ್ಚಿಸಲಿದೆ.
India Latest News Live 1January 2026 ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ, ಪ್ರವಾಸಿಗರ ಗುರಿಯಾಗಿಸಿ ನಡೆಯಿತಾ ಬಾಂಬ್ ದಾಳಿ?
ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ, ಪ್ರವಾಸಿಗರ ಗುರಿಯಾಗಿಸಿ ನಡೆಯಿತಾ ಬಾಂಬ್ ದಾಳಿ?, ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಕಟ್ಟಡ, ಅಕ್ಕ ಪಕ್ಕದ ಕಟ್ಟಡಗಳು ಬಿರುಗು ಬಿಟ್ಟಿದೆ, ಗಾಜುಗಳು ಪುಡಿ ಪುಡಿಯಾಗಿದೆ.
India Latest News Live 1January 2026 ದೇಶದ ಅತ್ಯಂತ ಕ್ಲೀನ್ ಸಿಟಿಯಲ್ಲಿ ಮಲಿನ ನೀರಿನಿಂದಾಗಿ 6 ತಿಂಗಳ ಮಗು ಸಾವು
ಭಾರತದ ಅತ್ಯಂತ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಆರು ತಿಂಗಳ ಶಿಶು ಸಾವನ್ನಪ್ಪಿದೆ. ಈ ಜಲ ಮಾಲಿನ್ಯ ಬಿಕ್ಕಟ್ಟಿನಿಂದಾಗಿ ಭಾಗೀರಥಪುರದಲ್ಲಿ ಸುಮಾರು 150 ಜನರು ಅಸ್ವಸ್ಥರಾಗಿದ್ದು, ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರಿದ್ದೇ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದೆ.