ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಸಚಿವರ ಕಾರು ಅಪಘಾತ, ಹೆದ್ದಾರಿಯಲ್ಲಿ ಘಟನೆ, ಸಚಿವರು ಕಾರಿನಲ್ಲಿ ಸಂಚರಿಸುತ್ತಿರುವಾಗ ಈ ಅಪಘಾತ ನಡೆದಿದೆ. ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಅಪಘಾತ ಸಂಭವಿಸಿದೆ. 

ಲಖನೌ (ಜ.01) ಕಾರ್ಯಕ್ರಮ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ಸಚಿವರ ಕಾರಿಗೆ ನಾಯಿ ಅಡ್ಡ ಬಂದಿದೆ. ನಾಯಿ ಉಳಿಸಲು ಹೋದ ಕಾರಣ ಸಚಿವರ ಅಪಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಫತೇಬಾದ್ ರಸ್ತೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಸರ್ಕಾರದ ಸಚಿವ ಸಂಜಯ್ ನಿಶಾದ್ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಸಂಜಯ್ ನಿಶಾದ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅಡ್ಡ ಬಂದ ನಾಯಿ ಜೀವ ಉಳಿಸಲು ಸಚಿವರ ಕಾರು ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾರೆ. ಆದರೆ ವೇಗವಾಗಿ ಸಚಿವರ ಕಾರು ಹಾಗೂ ಬೆಂಗಾವಲು ಕಾರುಗಳು ಸಾಗುತ್ತಿದ್ದ ಕಾರಣ ಸಚಿವರ ಕಾರಿಗೆ ಹಿಂಬದಿಯಿಂದ ಬೇರೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಕಾರು ನಜ್ಜು ಗುಜ್ಜು

ಸಂಜಯ್ ನಿಶಾದ್ ಸಂಚರಿಸುತ್ತಿದ್ದ ಕಾರು ನಾಯಿಗಾಗಿ ದಿಢೀರ್ ಬ್ರೇಕ್ ಹಾಕಿದ್ದರೆ. ಆದರೆ ನಿಶಾದ್ ಹಿಂದಿದ್ದ ಬೆಂಗಾವಲು ಕಾರುಗಳು ಸಚಿವರ ಕಾರಿನ ಹಿಂಬದಿಗೆ ಡಿಕ್ಕಿಯಾಗಿದೆ. ಅತೀ ವೇಗದಲ್ಲಿದ್ದ ಕಾರಣ ಸಚಿವರ ಕಾರಿನ ಹಿಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಬೆಂಗಾವಲು ಕಾರಿನ ಮುಂಭಾಗವೂ ಪುಡಿ ಪುಡಿಯಾಗಿದೆ. ಈ ಅಪಘಾತದಲ್ಲಿ ಸಚಿವರ ಸಂಜಯ್ ನಿಶಾದ್ ಹಾಗೂ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮುವಿನಿಂದ ಶೌರ್ಯ ಪ್ರಶಸ್ತಿ ಪಡೆದ ಅಜಯ್ ರಾವ್ ಜೊತೆ ಸಚಿವ ಸಂಜಯ್ ರಾವ್ ಫತೇಬಾದ್‌ನಿಂದ ಆಗ್ರಾ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಿಂದ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಅಪಘಾತದಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಸಂಭವಿಸಿದೆ.

ಸೆಪ್ಟೆಂಬರ್‌ನಲ್ಲಿ ಅಪಾಯದಿಂದ ಪಾರಾಗಿದ್ದ ಸಂಜಯ್ ನಿಶಾದ್

2025ರ ಸೆಪ್ಟೆಂಬರ್ ತಿಂಗಳಲ್ಲಿ ಸಚಿವರು ಸಂಜಯ್ ನಿಶಾದ್ ಕಾರ್ಯಕ್ರಮ ನಿಮಿತ್ತ ತೆರಳುವಾಗ ಕಾರು ಅಪಘಾತಕ್ಕೀಡಾಗಿತ್ತು. ಬಲ್ಲಿಯಾ ಜಿಲ್ಲೆಯ ಫೆಫ್ನಾ -ರಾಸ್ರಾ ರಸ್ತೆಯಲ್ಲಿ ಈ ಅಪಘಾತ ನಡೆದಿತ್ತು. ಸಚಿವ ನಿಶಾದ್ ಸೇರಿದಂತೆ ಮೂವರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಠವಶಾತ್ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು.