ಐಐಟಿ ಹೈದರಾಬಾದ್ ವಿದ್ಯಾರ್ಥಿ ದಾಖಲೆ, 2.5 ಕೋಟಿ ರೂ ಉದ್ಯೋಗ ಗಿಟ್ಟಿಸಿಕೊಂಡ ಎಂಜಿನಿಯರ್, ಕ್ಯಾಂಪಸ್ ಇಂಟರ್ವ್ಯೂನಲ್ಲಿ ನೆದರ್ಲೆಂಡ್ ಕಂಪನಿ ಈ ಆಫರ್ ನೀಡಿದೆ. ವಿಶೇಷ ಅಂದರೆ ಐಐಟಿ ಹೈದರಾಬಾದ್ ಇತಿಹಾಸದಲ್ಲಿ ಗರಿಷ್ಠ ಪ್ಯಾಕೇಜ್ ಆಫರ್
ಹೈದರಾಬಾದ್ (ಜ.01) ಐಐಟಿ ಹೈದರಾಬಾದ್ ವಿದ್ಯಾರ್ಥಿ ದಾಖಲೆ ಬರೆದಿದ್ದಾನೆ. ಬರೋಬ್ಬರಿ 2.5 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಉದ್ಯೋಗ ಗಿಟ್ಟಸಿಕೊಂಡಿದ್ದಾನೆ. ಇದು ಐಐಟಿ ಹೈದರಾಬಾದ್ ಇತಿಹಾಸದಲ್ಲೇ ವಿದ್ಯಾರ್ಥಿಯೊಬ್ಬ ಪಡೆದ ಗರಿಷ್ಠ ಪ್ಯಾಕೇಜ್ ಆಫರ್ ಆಗಿದೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ವಿದ್ಯಾರ್ಥಿ ಎಡ್ವರ್ಡ್ ನೇಥನ್ ವರ್ಗಿಸ್ ಈ ಸಾಧನೆ ಮಾಡಿದ್ದಾನೆ. ಇದೀಗ ನೇಥನ್ ವರ್ಗಿಸ್‌ಗೆ ಎಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಐಐಟಿಯಲ್ಲಿ ಫೈನಲ್ ಇಯರ್ ವಿದ್ಯಾರ್ಥಿ
ಎಡ್ವರ್ಡ್ ಐಐಟಿ ಹೈದರಾಬಾದ್‌ನಲ್ಲಿ ಫೈನಲ್ ಇಯರ್ ವಿದ್ಯಾರ್ಥಿ. ನೆದರ್ಲೆಂಡ್ ಮೂಲದ ಆಪ್ಟಿವರ್ ಟ್ರೇಡಿಂಗ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 21 ವರ್ಷದ ವಿದ್ಯಾರ್ಥಿ ಇತ್ತೀಚೆಗಷ್ಟೇ 2 ತಿಂಗಳ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದರು. ಮತ್ತೊಂದು ವಿಶೇಷ ಅಂದರೆ ಎಡ್ವರ್ಡ್ ಹಾಜರಾದ ಮೊದಲ ಇಂಟರ್ವ್ಯೂವ್‌ನಲ್ಲೇ 2.5 ಕೋಟಿ ರೂಪಾಯಿ ವಾರ್ಷಿಕ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಿದೆ ಬೆಂಗಳೂರು ನಂಟು
ಎಡ್ವರ್ಡ್ ನೇಥನ್ ವರ್ಗಿಸ್ ಹುಟ್ಟಿದ್ದು, ಬೆಳೆದಿದ್ದು ಹೈದರಾಬಾದ್‌ನಲ್ಲೇ. ಆದರೆ 7ನೇ ತರಗತಿಯಿಂದ ಪಿಯುಸಿ ವರೆಗೆ ಎಡ್ವರ್ಡ್ ನೇಥನ್ ವರ್ಗಿಸ್ ಓದಿರುವುದು ಬೆಂಗಳೂರಿನಲ್ಲಿ. ಪಿಯಿಸು ವಿದ್ಯಾಭ್ಯಾಸ ಮುಗಿಸಿ ಮತ್ತೆ ಹೈದರಾಬಾದ್‌ಗೆ ಮರಳಿದ ಎಡ್ವರ್ಡ್ ಕಂಪ್ಯೂಟರ್ ಸೈನ್ಸ್ ಮೂಲಕ ಉನ್ನತ ವ್ಯಾಸಾಂಗ ಮಾಡಲು ಆರಂಭಿಸಿದ್ರು. ಐಐಟಿ ಹೈದರಾಬಾದ್‌ನಲ್ಲಿ ಸೀಟು ಗಿಟ್ಟಿಸಿಕೊಂಡ ಎಡ್ವರ್ಡ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಎಡ್ವರ್ಡ್ ನೇಥನ್ ಸಾಧನೆಗೆ ಕಾಲೇಜು, ಪೋಷಕರು ಹೆಮ್ಮೆ ಪಟ್ಟಿದ್ದಾರೆ.
2.5 ಕೋಟಿ ರೂಪಾಯಿ ವೇತನದ ಉದ್ಯೋಗ ಆಫರ್ ಗಿಟ್ಟಿಸಿಕೊಂಡ ಎಡ್ವರ್ಡ್ ಸಂತಸ ಹಂಚಿಕೊಂಡಿದ್ದಾರೆ. ಮೊದಲ ಸಂದರ್ಶನದಲ್ಲಿ ನನಗೆ ಈ ಆಫರ್ ಸಿಕ್ಕಿದೆ. ಐಐಟಿ ಹೈದರಾಬಾದ್ ಕಾಲೇಜು, ಪ್ರೊಫೆಸರ್, ಪೋಷಕರು ನನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದಿದ್ದಾನೆ.


