2025ರಲ್ಲಿ ಪ್ರಳಯವಾಗುವುದೆಂದು ಜನರಲ್ಲಿ ಭೀತಿ ಹುಟ್ಟಿಸಿ, ಸಂಪತ್ತನ್ನು ದಾನ ಮಾಡಲು ಹೇಳಿದ ಘಾನಾದ ಸ್ವಯಂ ಘೋಷಿತ ಪ್ರವಾದಿ ಇವಾನ್ಸ್ ಎಶುನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರವಾಹದಿಂದ ರಕ್ಷಿಸಲು ನಾವೆಗಳನ್ನು ನಿರ್ಮಿಸಿರುವುದಾಗಿ ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದ.

ಅಕ್ರಾ: 2025ರಲ್ಲಿ ಪ್ರಳಯ ಆಗುತ್ತೆ ತಮ್ಮ ಬಳಿ ಇರುವ ಶ್ರೀಮಂತಿಕೆಯನ್ನೆಲ್ಲಾ ದಾನ ಮಾಡಿ ಎಂದು ಜನರ ದಾರಿ ತಪ್ಪಿಸಿದ ದಕ್ಷಿಣ ಆಫ್ರಿಕಾದ ಘಾನಾದ ಸ್ವಯಂ ಘೋಷಿತ ದೇವ ಮಾನವ ಪ್ರವಾದಿ ಇವಾನ್ಸ್ ಎಶುನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 2025ರ ಡಿಸೆಂಬರ್‌ 25ರಂದು ಪ್ರವಾಹ ಆಗುತ್ತದೆ ಎಂದು ಹೇಳಿ ಜನರಲ್ಲಿ ಭೀತಿ ಹುಟ್ಟಿಸಿದ್ದ. ಹೀಗಾ ನೋಹ್ ಅವರನ್ನು ಘಾನಾ ಪೊಲೀಸ್ ಸೇವೆಯ ವಿಶೇಷ ಸೈಬರ್ ಪರಿಶೀಲನಾ ತಂಡವು ಬುಧವಾರ ಬಂಧಿಸಿದೆ ಎಂದು ವರದಿಯಾಗಿದೆ.

ಸ್ವಯಂ ಘೋಷಿತ ಪ್ರವಾದಿ ಇವಾನ್ಸ್ ಎಶುನ್ ಕೈಕೋಳ ಹಿಡಿದು ಪೊಲೀಸ್ ಕಸ್ಟಡಿಯಲ್ಲಿರುವ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂದ್ದು, ವೈರಲ್ ಆಗಿದೆ. ಆಧುನಿಕ ನೋಹ ನಾವೆಯನ್ನು ನಿರ್ಮಿಸಿದ ಕಾರಣ ನೋಹ ಸಾಕಷ್ಟು ಸುದ್ದಿಯಾಗಿದ್ದ. ತಾನು ದೇವರು ಕಳುಹಿಸಿದ ಪ್ರವಾದಿ ಎಂದು ಅವನು ಹೇಳಿಕೊಂಡಿದ್ದ.

ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನೋಹ್, ಡಿಸೆಂಬರ್ 25 ರಂದು ಜಗತ್ತು ಅಂತ್ಯಗೊಳ್ಳುತ್ತದೆ ಎಂದು ದೇವರು ತನಗೆ ಎಚ್ಚರಿಕೆ ನೀಡಿದ್ದಾನೆ ಎಂದು ಹೇಳಿಕೊಂಡಿದ್ದ. ತನ್ನ ಭವಿಷ್ಯವಾಣಿಯನ್ನು ವಿವರಿಸುತ್ತಾ ಆತ ಭಾರೀ ಮಳೆ ಮತ್ತು ಪ್ರವಾಹದಿಂದ ವಿನಾಶ ಉಂಟಾಗುತ್ತದೆ ಎಂದು ಹೇಳಿದ್ದ. ಜನರನ್ನು ರಕ್ಷಿಸಲು ದೋಣಿಗಳನ್ನು ನಿರ್ಮಿಸಲು ದೇವರು ತನಗೆ ಸೂಚಿಸಿದ್ದಾನೆಗಿ ಮತ್ತು ತಾನು ಅಂತಹ 10 ದೋಣಿಗಳನ್ನು ನಿರ್ಮಿಸಿರುವುದಾಗಿಯೂ ಆತ ಹೇಳಿಕೊಂಡಿದ್ದ.

ನೋವ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 32,000 ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ. ತನ್ನನ್ನು ತಾನು ಎಬೋ ಜೀಸಸ್ ಎಂದು ಆತ ಕರೆದುಕೊಂಡಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಆತ ಯೂಟ್ಯೂಬ್‌ನಲ್ಲಿ ವಾಟ್ ವಿಲ್ ಹ್ಯಾಪನ್ ಅಂಡ್ ಹೌ ಇಟ್ ವಿಲ್ ಹ್ಯಾಪನ್ ಎಂಬ ಶೀರ್ಷಿಕೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಜೊತೆಗೆ ಅದೇ ರೀತಿಯ ಹೇಳಿಕೆಗಳನ್ನು ನೀಡಿದ್ದ. ಅಲ್ಲದೇ ಪ್ರವಾಹದ ಸಮಯದಲ್ಲಿ ತಾನೇ ನಿರ್ಮಿಸಿದ ನಾವೆಯ ಮೇಲೆ ವಾಸಿಸಲು ಆತ ಪ್ಲಾನ್ ಮಾಡಿದ್ದ. ಆದರೆ ನಂತರ, ನೋಹ ತಾನು ನಿರ್ಮಿಸಿದನೆಂದು ಹೇಳಿಕೊಂಡ ನಾವೆ ಅವನಿಗೆ ಸೇರಿಲ್ಲ ಎಂಬುದು ತಿಳಿದು ಬಂತು. ನಂತರ್ ಈ ಸ್ವಯಂ ಘೋಷಿತ ಪ್ರವಾದಿ ನೋಹ್ ದೇವರಲ್ಲಿ ಮಾನವೀಯತೆಗೆ ಹೆಚ್ಚಿನ ಸಮಯ ನೀಡಬೇಕೆಂದು ಬೇಡಿಕೊಂಡೆ ಎಂದು ಹೇಳಿಕೊಂಡಿದ್ದನು.

ಇದನ್ನೂ ಓದಿ: ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು

ವೈರಲ್ ಆದ ಮತ್ತೊಂದು ವೀಡಿಯೊದಲ್ಲಿ ಮೂರು ವಾರಗಳ ಉಪವಾಸದ ಮೂಲಕ ತಾನು ಮಧ್ಯಪ್ರವೇಶಿಸಿ ದೇವರನ್ನು ವಿನಾಶ ಮುಂದೂಡುವಂತೆ ಒತ್ತಾಯಿಸಿದೆ ಎಂದು ಹೇಳಿಕೊಂಡಿದ್ದರು. ನಂತರ ಅವರು ರ‍್ಯಾಪರ್ ಸರ್ಕೋಡಿಯ ಅವರ ರ‍್ಯಾಪರ್‌ಹೋಲಿಕ್ 2025 ಸಂಗೀತ ಕಚೇರಿಯಲ್ಲಿ ತಮ್ಮ ಟ್ರೇಡ್‌ಮಾರ್ಕ್ ಸೆಣಬಿನ ಬಟ್ಟೆಯಲ್ಲಿ ಕಾಣಿಸಿಕೊಂಡಿಡು , ಪ್ರಳಯ ಆಗೋದು ವಿಳಂಬವಾಗಿದೆ ಎಂದು ಹೇಳಿಕೊಂಡು ಜನರನ್ನು ಪಾರ್ಟಿ ಮಾಡುವಂತೆ ಕೇಳಿಕೊಂಡರು.

ಇದನ್ನೂ ಓದಿ: ಮದ್ಯದ ವಾಸನೆ: ವ್ಯಾಂಕೋವರ್‌ನಿಂದ ದೆಹಲಿಗೆ ವಿಮಾನ ಹಾರಿಸುವ ಮೊದಲು ಏರ್ ಇಂಡಿಯಾ ಪೈಲಟ್‌ನ ಬಂಧನ

ನೋಹ್ ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದವು. ಅನೇಕರು ನೋಹ್ ಅವರನ್ನು ಮೋಸಗಾರ ಎಂದೂ ಕರೆದರು. ಘಾನಾ ಅಧಿಕಾರಿಗಳು ನಾಗರಿಕರಲ್ಲಿ ಭೀತಿಯನ್ನು ಉಂಟು ಮಾಡುವ ಇಂತಹ ನಕಲಿ ಜ್ಯೋತಿಷಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ..

Scroll to load tweet…

Scroll to load tweet…