- Home
- News
- India News
- India Latest New Live: ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?
LIVE NOW
India Latest New Live: ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?

ಸಾರಾಂಶ
ಪಾಟ್ನಾ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ ಎನ್ನುವುದಕ್ಕೆ ಸದ್ಯ ಬಿಹಾರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. 2023ರಲ್ಲಿ ಎನ್ಡಿಎ ಕೂಟ ತೊರೆದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಾಂಗ್ರೆಸ್ ಸಾರಥ್ಯದ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದರು. ಇದು ಬಿಜೆಪಿಯಲ್ಲಿದ್ದ ಸಾಮ್ರಾಟ್ ಚೌಧರಿಗೆ ಹಿಡಿಸಿರಲಿಲ್ಲ. ಆಗ ಅವರು ''ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ. ಅಲ್ಲಿಯ ತನಕ ಪೇಟ ಧರಿಸಿಯೇ ಇರುತ್ತೇನೆ'' ಎಂದು ಪ್ರತಿಜ್ಞೆ ಮಾಡಿದರು. ಅದರಂತೆ ಸದಾ ಪೇಟ ಧರಿಸಿಯೇ ಇರುತ್ತಿದ್ದರು.
ಇಂಡಿ ಕೂಟಕ್ಕೆ ಹಾರಿದ ವರ್ಷಗಳ ಬಳಿಕ ನಿತೀಶ್ ಮತ್ತೆ ಎನ್ಡಿಎಗೆ ಸೇರಿದರು. ಆಗ ಸಾಮ್ರಾಟ್ ಅಯೋಧ್ಯೆಗೆ ತೆರಳಿ ರಾಮನ ಸಮ್ಮುಖದಲ್ಲಿ ತಮ್ಮ ಪೇಟ ಕಳಚಿದರು. '' ನಿತೀಶ್ ಕೂಟಕ್ಕೆ ಮರಳಿದ್ದಾರೆ. ಹೀಗಾಗಿ ಪೇಟ ಬಿಚ್ಚಿ ರಾಮನಿಗೆ ಸಮರ್ಪಿಸುತ್ತಿದ್ದೇನೆ '' ಎಂದಿದ್ದರು.
08:42 AM (IST) Apr 15
India Latest New Live 15 April 2026ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?
ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಆರ್ಸಿಬಿ, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆರ್ಸಿಬಿಗೆ, ಉತ್ತಮ ಫಾರ್ಮ್ನಲ್ಲಿರುವ ಲಖನೌ ವೇಗಿ ಮೊಹಮ್ಮದ್ ಶಮಿ ಪ್ರಮುಖ ಸವಾಲಾಗಲಿದ್ದಾರೆ.
Read Full Story 08:20 AM (IST) Apr 15
India Latest New Live 15 April 2026IPL 2026 - ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 32 ರನ್ಗಳ ಜಯ ಸಾಧಿಸಿದೆ. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಮುಂದುವರಿದಿದ್ದು, ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Read Full Story