25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ, ಯಎಇಗೆ 3.5 ಬಿಲಿಯನ್ ಡಾಲರ್ ಸಾರ ಮರುಪಾವತಿ ಸಂಕಷ್ಟದಲ್ಲಿರುವ ಪಾಕಿಸ್ತಾನದ ಪರಿಸ್ಥಿತಿ ಶೋಚನೀಯವಾಗಿದೆ.

ಇಸ್ಲಾಮಾಬಾದ್ (ಏ.15) ಅಮೆರಿಕ ಹಾಗೂ ಇರಾನ್ ನಡುವೆ ಸಂಧಾನ ಮಧ್ಯಸ್ಥಿತಿಕೆ ವಹಿಸಿರುವ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ತನ್ನ ಆಪ್ತ ದೇಶಗಳಿಂದ ಸಾಲ ಪಡೆದು ಮುಗಿಸಿರುವ ಪಾಕಿಸ್ತಾನ ಇದೀಗ ಸಾಲ ಮರುಪಾವತಿಸಲು ದುಡ್ಡಿಲ್ಲ. ಸಾಲ ಮನ್ನ ಆಗಲಿದೆ ಎಂದು ಆಸೆಗಣ್ಣಿನಿಂದ ಪಾಕ್ ಎದುರುನೋಡುತ್ತಿದೆ. ಇದರ ನಡುವೆ ಸೌದಿ ಅರೇಬಿಯಾ 3 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಸಾಲ ನೀಡಿ ಪಾಕಿಸ್ತಾನದ ನೆರವಿಗೆ ಬಂದಿದೆ. ಇದರ ಜೊತೆಗೆ ಸಾಲದ ವಿಸ್ತರಣೆ ಸೌಲಭ್ಯ ನೀಡಿದೆ. ಇದರಿಂದ ಯುಎಇಗೆ ಮರುಪಾವತಿ ಮಾಡಬೇಕಿದ್ದ 3.5 ಮಿಲಿಯನ್ ಡಾಲರ್ ಮೊತ್ತದ ಸಂಕಷ್ಟ ಸದ್ಯಕ್ಕೆ ದೂರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೌದಿ ಕಾಲಿಗೆ ಬಿದ್ದ ಪಾಕಿಸ್ತಾನ

ಸೌದಿ ಅರೆಬಿಯಾ ಬಳಿ 3 ಬಿಲಿಯನ್ ಡಾಲರ್ ಮೊತ್ತ ಸಾಲದ ಭರವಸೆ ಸಿಕ್ಕ ಬಳಿಕ ಮತ್ತೆ ಭಿಕ್ಷೆ ಪಾತ್ರ ಹಿಡಿದು ಪಾಕಿಸ್ತಾನ ಕುಳಿತಿತ್ತು. ಇದರ ಪರಿಣಾಮ ಸೌದಿ ಅರೆಬಿಯಾ 5 ಬಿಲಿಯನ್ ಅಮೆರಿಕನ್ ಡಾಲರ್ ಸೌಲ ಮೊತ್ತದ ಅವದಿಯನ್ನು ವಿಸ್ತರಣೆ ಮಾಡಿದೆ. ಪ್ರತಿ ವರ್ಷ ಸೌದಿ ಅರೆಬಿಯಾ ಪಾಕಿಸ್ತಾನದ ಬ್ಯಾಂಕ್‌ನಲ್ಲಿ 500 ಕೋಟಿ ಡಾಲರ್ ಮೊತ್ತವನ್ನು ಸಾಲದ ರೂಪದಲ್ಲಿ ಇಡುತ್ತದೆ. ಇದನ್ನು ಪಾಕಿಸ್ತಾನ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಆದರೆ ಕಂಡೀಷನ್ ಪ್ರಕಾರ ಪ್ರತಿ ವರ್ಷ 500 ಕೋಟಿ ಡಾಲರ್ ಮೊತ್ತವನ್ನು ನವೀಕರಣ ಮಾಡಬೇಕು. ಅಂದರೆ 500 ಕೋಟಿ ರೂಪಾಯಿ ಬಳಸಿಕೊಂಡರೆ ಮತ್ತೆ 500 ಕೋಟಿ ರೂಪಾಯಿ ಬ್ಯಾಂಕ್‌ಗೆ ಜಮೆ ಮಾಡಿ ನವೀಕರಣ ಮಾಡಿಕೊಳ್ಳಬೇಕು. ಇದಕ್ಕೂ ದುಡ್ಡಿಲ್ಲದ ಕಾರಣ ಇದೀಗ ಒಂದು ವರ್ಷದ ನವೀಕರಣ ಒಪ್ಪಂದವನ್ನು ಇದೀಗ 5 ವರ್ಷಕ್ಕೆ ಮುಂದೂಡಿದೆ. ಹೀಗಾಗಿ ಪಾಕಿಸ್ತಾನ ಪ್ರತಿ ವರ್ಷ ಸೌದಿ ಅರೆಬಿಯಾದಿಂದ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.

ಯುನೈಟೆಡ್ ಅರಬ್ ಎಮಿರೈಟ್ಸ್ ನೀಡಿದ್ದ ಸಾಲದ ಮರುಪಾವತಿ ಅವಧಿ ಸಮೀಪಿಸುತ್ತಿದ್ದಂತೆ ಯುದ್ಧ ತೀವ್ರಗೊಂಡು ಇರುವ ಆರ್ಥಿಕತೆಯೂ ಕುಸಿದು ಬಿದ್ದಿತ್ತು. ಇಂಧನ ಬೆಲೆ ಗಗನಕ್ಕೇರಿತ್ತು, ಗ್ಯಾಸ್ ಪೂರೈಕೆ ಸ್ಥಗಿತಗೊಂಡಿತ್ತು. ಅಗತ್ಯ ವಸ್ತುಗಳ ಬೆಲೆ ಮೊದಲೇ ಗಗನಕ್ಕೇರಿತ್ತು. ಹೀಗಾಗಿ ಈ ತಿಂಗಳು ಯುಎಇಗೆ 3.5 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ತೀರಿಸಲು ಹೆಣಗಾಡುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ಸೌದಿ ಅರೆಬಿಯಾ ಸಾಲ ನೆರವಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದಲೂ ಸಾಲ ಪಡೆದಿರುವ ಪಾಕಿಸ್ತಾನ ಮರುಪಾವತಿಸಲು ಪರದಾಡುತ್ತಿದೆ. ಪಾಕಿಸ್ತಾನಕ್ಕೆ ಈಗಾಗಲೇ ಹಲವು ಸಾಲ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿರ್ಬಂಧಿಸಿದೆ. ಇತ್ತ ಆರ್ಥಿಕತೆ ಸುಧಾರಿಸಲು ಸೌದಿ ಅರೆಬಿಯಾ ಖಡಕ್ ಎಚ್ಚರಿಕೆಯನ್ನೂ ನೀಡಿದೆ.