- Home
- Entertainment
- Sandalwood
- ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್ ಮಾಡಿದ ಯಶ್! ನಟ ಹೇಳಿದ್ದೇನು?
ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್ ಮಾಡಿದ ಯಶ್! ನಟ ಹೇಳಿದ್ದೇನು?
ಅಮೆರಿಕದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ಗ್ಯಾಂಗ್‌ಸ್ಟರ್ ಸಿನಿಮಾದಂತೆ ಕಂಡರೂ, ಇದು ವಾಸ್ತವದಲ್ಲಿ ಹಲವು ಪದರಗಳನ್ನು ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

ಟಾಕ್ಸಿಕ್ ಚಿತ್ರ ಹವಾ
ಯಶ್ ಅವರ ಟಾಕ್ಸಿಕ್ ಚಿತ್ರ ಇದಾಗಲೇ ಸಾಕಷ್ಟು ಹವಾ ಸೃಷ್ಟಿಸಿದೆ. ಇದರ ಟ್ರೈಲರ್ ಬಿಡುಗಡೆಯಾಗುತ್ತಲೇ ನೆಗೆಟಿವ್ ಕಮೆಂಟ್ ಮೂಲಕ ಸಾಕಷ್ಟು ಹಲ್‌ಚಲ್ ಸೃಷ್ಟಿಸಿತ್ತು. ಇದಾಗಲೇ ಈ ಚಿತ್ರ ಬಿಡುಗಡೆಯಾಬೇಕಿತ್ತು. ಆದರೆ ವಿಶ್ವಾದ್ಯಂತ ಇದನ್ನು ಬಿಡುಗಡೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಯುದ್ಧದ ಭೀತಿ ಇರುವ ಕಾರಣ ಇದರ ಬಿಡುಗಡೆ ಮಾಡಿಲ್ಲ ಎನ್ನುತ್ತಿದೆಯಾದರೂ, ದುರಂಧರ್-2 ನಿಂದಾಗಿ ಇದರ ಬಿಡುಗಡೆ ಮಾಡಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಸದ್ಯ ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.
ಅಮೆರಿಕದಲ್ಲಿ ಸಂದರ್ಶನ
ಅದೇನೇ ಇದ್ದರೂ, ಸದ್ಯ ಯಶ್ ನಟನೆಯ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಾಸ್ ಏಂಜಲ್ಸ್ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ ‘ರಾಮಾಯಣ’ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದಾಗ ಟಾಕ್ಸಿಕ್ ಸಿನಿಮಾದ ಕುತೂಹಲದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಮಹಾತ್ವಾಕಾಂಕ್ಷೆಯ ಸಿನಿಮಾ
‘ಟಾಕ್ಸಿಕ್’ ಬಹಳ ಮಹಾತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಆ ಸಿನಿಮಾವನ್ನು ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ನಲ್ಲೂ ಚಿತ್ರೀಕರಣ ಮಾಡಿದ್ದೇವೆ’ ಎಂದಿರುವ ಯಶ್, ಈ ಚಿತ್ರವು ಹಲವು ಪದರಗಳನ್ನು ಒಳಗೊಂಡ ಸೂಕ್ಷ್ಮವಾದ ಕತೆಯನ್ನು ಹೊಂದಿದೆ. ಮೇಲ್ನೋಟಕ್ಕೆ ಬೇರೆ ರೀತಿಯಾಗಿದ್ದು, ಅದರ ಆಳ ಹೊಕ್ಕಾಗಿ ಅದು ಬೇರೆಯದ್ದೇ ಅನುಭವ ಕೊಡುತ್ತದೆ ಎಂದಿದ್ದಾರೆ.
ಮೇಲ್ನೋಟಕ್ಕೆ ಬೇರೆ
ಈ ಬಗ್ಗೆ ವಿವರಣೆ ನೀಡಿರುವ ನಟ, ಮೇಲ್ನೋಟಕ್ಕೆ ಈ ಚಿತ್ರವು ಗ್ಯಾಂಗ್‌ಸ್ಟರ್ ಎನಿಸಬಹುದಾದರೂ ಅದರಲ್ಲಿ ಇರುವ ಅಂಶಗಳು ಬೇರೆ. ಅದೇ ರೀತಿ, ಹಿಂಸಾತ್ಮಕ, ಆಕ್ಷನ್ ಚಿತ್ರ ಎಂದು ನೋಡಿದಾಗ ಅನ್ನಿಸಿದರೂ, ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಆಗಿದೆ ಎಂದಿದ್ದಾರೆ.
ಮಾನವೀಯ ಅಂಶಗಳು
ಈ ಚಿತ್ರದಲ್ಲಿ, ಮಾನವೀಯ ಅಂಶಗಳನ್ನು ಸಾರುವ ಅಂಶಗಳೂ ಇವೆ ಎಂದು ಯಶ್ ಹೇಳಿದ್ದಾರೆ. ಈ ಸಿನಿಮಾ, ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುತ್ತದೆ. ಹಿಂಸಾಚಾರ, ಲೈಂಗಿಕತೆಗೆ ಹೆಚ್ಚು ಒತ್ತು ನೀಡಿದಂತೆ ಕಾಣಿಸುತ್ತಿದೆ. ಆದರೆ, ಈ ಚಿತ್ರಕ್ಕಾಗಿ ತಂತ್ರಜ್ಞರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದ್ದಾರೆ, ಒಳಗೆ ತಿರುಳೇ ಬೇರೆ ಇದೆ ಎಂದಿದ್ದಾರೆ.
ಎಂಜಾಯ್ ಮಾಡಿದ್ದೇನೆ
ಇದೇ ವೇಳೆ ಚಿತ್ರದ ನಿರ್ದೇಶಕರನ್ನೂ ಶ್ಲಾಘಿಸಿರುವ ಯಶ್, ಗೀತು ಮೋಹನ್ದಾಸ್, ಗ್ಯಾಂಗ್‌ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ. ನಾನಂತೂ ಆ ಸಿನಿಮಾನಲ್ಲಿ ನಟಿಸುವುದನ್ನು ಎಂಜಾಯ್ ಮಾಡಿದ್ದೇನೆ. ಸಿನಿಮಾ ಕಣ್ಣಿಗೆ ಹಬ್ಬವೇ ಆಗಲಿದೆ. ಜೊತೆಗೆ ಸಿನಿಮಾ ನೋಡುವ ಪ್ರೇಕ್ಷಕರ ಮನಸ್ಸಿನ ಮೇಲೂ ಸಹ ಗಾಢ ಪರಿಣಾಮವನ್ನು ಆ ಸಿನಿಮಾ ಬೀರಲಿದೆ’ಎಂದಿದ್ದಾರೆ ಯಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

