ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಮತ್ತೇನು ಹೇಳಿದ್ರು ನೋಡಿ…
ಜಗತ್ತಿನ ಮೊಟ್ಟಮೊದಲ ಐತಿಹಾಸಿಕ ಮಹಾನ್ ಕಥೆಯನ್ನು ಜಗತ್ತಿಗೆ ಪ್ರದರ್ಶಿಸಲಿದ್ದೇವೆ: ನಮಿತ್ ಮಲ್ಹೋತ್ರಾ
ಧುರಂಧರ್ ಸಿನಿಮಾ ಬಳಿಕ ಭಾರತ ಸೇರಿದಂತೆ ಜಗತ್ತು ನಿರೀಕ್ಷಿಸುತ್ತಿರುವ ಸಿನಿಮಾಳೆಂದರೆ ಅವು ಟಾಕ್ಸಿಕ್ ಹಾಗೂ ರಾಮಾಯಣ. ಕೋ ಇನ್ಸಿಡೆಂಟ್ ಎಂಬಂತೆ, ಈ ಎರಡೂ ಸಿನಿಮಾಗಳಲ್ಲಿ ಯಶ್ ನಟಿಸಿದ್ದಾರೆ. ಕನ್ನಡ, ಹಾಲಿವುಡ್ ಸೇರಿದಂತೆ ಬಹುಭಾಷಾ ಚಿತ್ರವಾದ ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರೇ ನಾಯಕರಾಗಿದ್ದಾರೆ. ಆದರೆ, ಬಾಲಿವುಡ್ ಮೂಲದ ರಾಮಾಯಣ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ನಾಯಕ ರಾಮನ ಪತ್ರದಲ್ಲಿ ನಟಿಸಿದ್ದು, ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಮತ್ತೂ ಒಂದು ವಿಶೇಷ ಎಂದರೆ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಟ ಯಶ್ ಅವರು ನಮಿತ್ ಮಲ್ಹೋತ್ರಾ ಅವರ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕನ್ನಡದ ಹೆಮ್ಮೆಯ ನಟ ಯಶ್ ಅವರು ನಟನ ಜೊತೆಗೆ ನಿರ್ಮಾಪಕ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡಿಒದ್ದಾರೆ. ಇನ್ನು, ರಾಮಾಯಣದ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಟ ಯಶ್ ಅವರಿಬ್ಬರೂ ಇತ್ತೀಚೆಗೆ ಅಮೆರಿಕಾದಲ್ಲಿ 'ಸಿನಿಮಾಕಾನ್' ಸಂದರ್ಶನದಲ್ಲಿ ಭಾಗಿಯಾಗಿ ರಾಮಾಯನದ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ಅದೇನು ಹೇಳಿದ್ದಾರೆ ನೋಡಿ..
ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ
ನಮಿತ್ ಮಲ್ಹೋತ್ರಾ ಹೇಳಿರೋ ಮಾತು ಇದು.. 'ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ, ಇದು ಭಾರತದಲ್ಲಿ ಜನರೇಶನ್ ಟು ಜನರೇಶನ್ ಹರಿದುಬಂದಿರುವ, ಆರಾಧಿಸಲ್ಪಡುವ ಮಹಾನ್ ಕಥನ. ಇದು ಭಾರತೀಯ ಧಾರ್ಮಿಕ ಪರಂಪರೆಯ ಮಹಾ ಕೊಂಡಿ ಮಾತ್ರವಲ್ಲ, ಇಂದಿಗೂ ಜನರು ಪೂಜಿಸಿ ಆರಾಧಿಸುವ ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಪರಂಪರೆಯೂ ಹೌದು.
ನಾವು ಜಗತ್ತು ಇನ್ನೂ ಸರಿಯಾಗಿ ಅರ್ಥೈಸಿಕೊಂಡಿರದ ಜಗತ್ತಿನ ಮೊಟ್ಟಮೊದಲ ಮಹಾನ್ ಸ್ಟೋರಿಯನ್ನು ಜಗತ್ತಿನ ಮುಂದೆ ಹೊಸ ಶೈಲಿಯ ಮೂಲಕ ತೆರೆಯ ಮೇಲೆ ತೋರಿಸಲಿದ್ದೇವೆ.
ಜೊತೆಗೆ, ಇಂದಿನ ಜಗತ್ತಿಗೆ ಈಗ ನಾವು ತರಲಿರುವ ರಾಮಯಣದ ಕಥೆ ನಿಜವಾಗಿಯೂ ಕನೆಕ್ಟ್ ಆಗಲಿದೆ. ಕಾರಣ, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಹೊಡೆದಾಟ, ಯುದ್ಧದ ಮಾನಸಿಕ ಹಾಗೂ ಕಾರ್ಯರೂಪದ ಪರಿಸ್ಥಿತಿಯಲ್ಲಿ, ಇಂತಹ ಒಂದು ಸ್ಟೋರಿ ಜಗತ್ತಿಗೆ ಹೊಸ ದಾರಿಯನ್ನು, ಹೊಸ ಮೌಲ್ಯವನ್ನು ತಿಳಿಸಲು ಸಹಕಾರಿ ಆಗಲಿದೆ.
ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಕಾರಣ, ನಮ್ಮ ಬಹಳಷ್ಟು ಸಿನಿಮಾಗಳು 5000 ವರ್ಷಗಳ ಹಿಂದಿನ ಕಥೆ, ಪರಂಪರೆಯನ್ನು ಸಿನಿಮಾ ಮೂಲಕ ತಿಳಿಸಲು ಶಕ್ತವಾಗಿರುತ್ತವೆ..
ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು
ಜೊತೆಗೆ, ರಾಮಾಯಣ ಚಿತ್ರಕ್ಕೆ ಯಶ್ ಅವರಂತಹ ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು. ರಾಮಾಯಣದ ರಾವಣನ ಪಾತ್ರಕ್ಕೆ ಯಶ್ ಅವರಿಗಿಂತ ಸರಿಯಾದ ಆಯ್ಕೆ ಮತ್ತೊಬ್ಬರಿಲ್ಲ. ಈ ಪಾತ್ರದಲ್ಲಿ ಯಶ್ ಅವರು ಪರಕಾಯ ಪ್ರವೇಶ ಮಾಡಿದ್ದು ಮಾತ್ರವಲ್ಲ, ಈ ಸಿನಿಮಾದ ಪ್ರಚಾರಕಾರ್ಯದಲ್ಲೂ ಮುಖ್ಯ ಪಾತ್ರ ವಹಿಸಲಿದ್ದಾರೆ' ಎಂದಿದ್ದಾರೆ ರಾಮಾಯಣ ಚಿತ್ರದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ.


