Shahzad Bhatti ಪಾಕಿಸ್ತಾನದಿಂದಲ್ಲಿ ಕುಳಿತು ದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಶಹಜಾದ್ ಭಟ್ಟಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೇರ ಎಚ್ಚರಿಕೆ ನೀಡಿದ್ದಾರೆ.ಭಾರತದಲ್ಲಿ ಭಯೋತ್ಪಾದನೆ, ಡ್ರಗ್ಸ್ ದಂಧೆ ಮತ್ತು ಯುವಕರನ್ನು ಬ್ರೇನ್‌ವಾಶ್ ಮಾಡುತ್ತಿರುವ ಭಟ್ಟಿ. ಅವನ ಶಾಕಿಂಗ್ ಕೃತ್ಯಗಳು ಏನು?

ಜಮ್ಮು ಕಾಶ್ಮೀರ (ಮೇ.26) ಶ್ರೀನಗರದಲ್ಲಿಉಗ್ರರಿಗೆ ದೊಡ್ಡ ಶಾಕ್ ಕೊಟ್ಟಿರುವ ಜಮ್ಮು ಕಾಶ್ಮೀರ ಪೊಲೀಸರು, ಇದೀಗ ಪಾಕಿಸ್ತಾನದಲ್ಲಿ ಕೂತು ಭಾರತದಲ್ಲಿ ಭಯೋತ್ಪಾದನೆ, ಡ್ರಗ್ಸ್ ದಂಧೆ ಮತ್ತು ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಕೆಲಸ ಮಾಡ್ತಿದ್ದಾನೆ ಅನ್ನೋ ಆರೋಪದ ಮೇಲೆ ಶಹಜಾದ್ ಭಟ್ಟಿಯನ್ನು ಟಾರ್ಗೆಟ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಡಿಜಿಪಿ ನಳಿನ್ ಪ್ರಭಾತ್ ನೇರ ಎಚ್ಚರಿಕೆ

ಜಮ್ಮು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಶಹಬಾಜ್ ಭಟ್ಟಿಗೆ ನೇರ ವಾರ್ನಿಂಗ್ ಮಾಡಿದ್ದ,'ನೀನು ಎಲ್ಲಿದ್ರೂ ಸರಿ, ನಾವು ಹುಡುಕಿ ಹೊಡಿತೀವಿ'ಉಗ್ರನಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆ ಮತ್ತೆ ಹುಟ್ಟಿಸಲು ಈತನ ತಂಡ ಕೆಲಸ ಮಾಡ್ತಿದೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಶಹಬಾಜ್ ಭಟ್ಟಿ ದೇಶ ವಿರೋಧಿ ಕೃತ್ಯಗಳೇನು?

ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಇಟ್ಟುಕೊಂಡಿರುವ ಶಹಬಾಜ್ ಭಟ್ಟಿ ಅಲ್ಲಿಂದಲೇ ಭಾರತದಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡ್ತಿದ್ದಾನೆ ಅನ್ನೋ ಗಂಭೀರ ಆರೋಪ ಇದೆ. ದುಬೈ ಮತ್ತು ಪಾಕ್‌ನಿಂದ ಈ ನೆಟ್ವರ್ಕ್ ಆಕ್ಟಿವ್ ಆಗಿದೆ ಅನ್ನೋದು ತನಿಖಾ ಸಂಸ್ಥೆಗಳು ಬಯಲಿಗೆಳೆದಿವೆ. ದೇಶಕ್ಕೆ ಕಂಟಕನಾಗ್ತಿರೋ ಶಹಬಾಜ್ ಭಟ್ಟಿ ಕೃತ್ಯಗಳ ಮಾಹಿತಿ ಬಯಲಾಗ್ತಿದ್ದಂತೆ ಕಾಶ್ಮೀರ ಪೊಲೀಸರು ಈಗ ಭಟ್ಟಿ ಅವನ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಹುಡುಕಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯುವಕರಿಗೆ ಬ್ರೇನ್‌ವಾಶ್?

ಇನ್‌ಸ್ಟಾಗ್ರಾಂ, ವಾಟ್ಸಾಪ್ ಮೂಲಕವೇ ದೇಶದಲ್ಲಿನ ಯುವಕರನ್ನು ಸಂಪರ್ಕಿಸಿ ಮೂಲಭೂತವಾದಿಗಳನ್ನಾಗಿ ಬ್ರೇನ್ ವಾಶ್ ಮಾಡುವ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್, ದೆಹಲಿ, ರಾಜಸ್ಥಾನ, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ಈ ನೆಟ್ವರ್ಕ್ ಕಾರ್ಯಚರಿಸುತ್ತಿರುವ ಇರೋ ಶಂಕೆ ಇದೆ.

ದೆಹಲಿ ಭಾಗದಲ್ಲಿ ದಾಳಿಗೆ ಉಗ್ರನ ಪ್ಲ್ಯಾನ್?

ದೆಹಲಿ-ಎನ್‌ಸಿಆರ್‌ನಲ್ಲಿ ಗ್ರೆನೇಡ್ ದಾಳಿ, ಟಾರ್ಗೆಟ್ ಮರ್ಡರ್ ಪ್ಲ್ಯಾನ್ ನಡೆದಿತ್ತು ಅನ್ನೋ ಶಾಕ್ ಮಾಹಿತಿ ಕೂಡ ಹೊರಬಂದಿದೆ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ‘ತೆಹ್ರೀಕ್-ಇ-ತಾಲಿಬಾನ್ ಹಿಂದೂಸ್ತಾನ್’ ಅನ್ನೋ ಹೊಸ ಸಂಘಟನೆಯ ಜೊತೆ ಭಟ್ಟಿಗೆ ಸಂಪರ್ಕ ಇರಬಹುದು ಅಂತ ಭದ್ರತಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.