ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್, ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ನನ್ನು 'ತಾಯಿ ಹೃದಯ'ಕ್ಕೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅವರ  ರಾಜಕೀಯ ನಡೆ, ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.22): ತಮಿಳುನಾಡು ಮುಖ್ಯಮಂತ್ರಿ, ದಳಪತಿ ಜೋಸೆಫ್ ವಿಜಯ್ ಕೈಗೊಂಡಿರುವ ರಾಜಕೀಯ ನಡೆ ದ್ರಾವಿಡ ನೆಲದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದ ಎಲ್‌ಟಿಟಿಇ (LTTE) ಸಂಘಟನೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್‌ನನ್ನು ಸ್ಮರಿಸಿರುವ ವಿಜಯ್, ಆತನನ್ನು 'ತಾಯಿ ಹೃದಯಕ್ಕೆ' ಹೋಲಿಸಿದ್ದಾರೆ.

ಮುಲ್ಲಿವೈಕಲ್ ಹತ್ಯಾಕಾಂಡದ ಇತಿಹಾಸ ಕೆದಕಿ ವಿವಾದ ಮೈಮೇಲೆ ಎಳೆದುಕೊಂಡಿರುವ ಅವರು, 2008ರ ಶ್ರೀಲಂಕಾ ಯುದ್ಧದ ಸಮಯದಲ್ಲೇ ತಮಿಳರ ಬೆಂಬಲಕ್ಕೆ ಉಪವಾಸ ಕೂತು 'ನಾವು ಹುಲಿ ಮರಿಗಳು' ಎಂದು ಅಬ್ಬರಿಸಿದ್ದನ್ನು ನೆನಪಿಸಿದ್ದಾರೆ.

ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್‌, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!

'ದ್ರಾವಿಡ ಸಿದ್ಧಾಂತ ಮತ್ತು ತಮಿಳು ರಾಷ್ಟ್ರೀಯತೆ'ಯ ಈ ವಿಭಿನ್ನ ಕಾಕ್‌ಟೇಲ್ ದಾಳ ಉರುಳಿಸಿರುವ ವಿಜಯ್ ನಡೆ, ತಮಿಳುನಾಡು ಸರ್ಕಾರದಲ್ಲಿ ಪಾಲುದಾರನಾಗಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಇದನ್ನು ವಿರೋಧಿಸಲೂ ಆಗದೆ, ಸಹಿಸಲೂ ಆಗದೆ ಅಡಗತ್ತರಿಯಲ್ಲಿ ಸಿಲುಕುವಂತಾಗಿದ್ದು, ವಿರೋಧ ಪಕ್ಷಗಳಿಗೆ ದೊಡ್ಡ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ.

Related Video