MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • TV Talk
  • ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಶಾಕ್; ಕಣ್ಮುಂದೆ ಬಂದ ರಾಜೇಂದ್ರ ಪೊನ್ನಪ್ಪ!

ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಶಾಕ್; ಕಣ್ಮುಂದೆ ಬಂದ ರಾಜೇಂದ್ರ ಪೊನ್ನಪ್ಪ!

Amruthadhaare: ಜೈದೇವ್ ಕೊ*ಲೆ ಪ್ರಕರಣದಲ್ಲಿ ತಾನೇ ಶರಣಾಗಲು ನಿರ್ಧರಿಸಿದ್ದ ಭೂಮಿಕಾಗೆ ಆಘಾತ ಎದುರಾಗಿದೆ. ಜೈದೇವ್‌ನನ್ನು ಹೂತಿಟ್ಟ ಜಾಗದಲ್ಲಿ ಹೆಣವೇ ಮಾಯವಾಗಿದ್ದು, ಈ ಅನಿರೀಕ್ಷಿತ ತಿರುವು ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.

1 Min read
Author : Mahmad Rafik
Published : Sep 15 2026, 07:41 AM IST
Share this Photo Gallery
  • FB
  • TW
  • Linkdin
  • Whatsapp
15
ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಶಾಕ್
Image Credit : Zee Kannada

ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಶಾಕ್

ಜೈದೇವ್ ಪ್ರಕರಣದಲ್ಲಿ ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಬಿಗ್‌ಶಾಕ್ ಎದುರಾಗಿದೆ. ವೀಕ್ಷಕರ ಊಹೆಗೂ ನಿಲುಕದ ಹಾಗದೇ ನಿರ್ದೇಶಕರು ಕಥೆಗೆ ರೋಚಕ ತಿರುವು ನೀಡಿದ್ದಾರೆ. ಭೂಮಿಕಾ ಶಾಕ್‌ಗೆ ಕಾರಣವಾಗಿರುವ ವಿಷಯ ಕೇಳಿ ಐಪಿಎಸ್ ಮಲ್ಲಿಗೂ ದಿಗ್ಭ್ರಮೆಯುಂಟಾಗಿದೆ. ಹಾಗಾದ್ರೆ ಸೀರಿಯಲ್‌ನಲ್ಲಾದ ಟ್ವಿಸ್ಟ್ ಏನು ಎಂದು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇಲ್ಲಿವರೆಗೆ ಆಗಿದ್ದೇನು?
Image Credit : Zee Kannada

ಇಲ್ಲಿವರೆಗೆ ಆಗಿದ್ದೇನು?

ಹೌದು, ಕಳೆದ ಎರಡು ವಾರಗಳಿಂದ ಅಮೃತಧಾರೆ ಸೀರಿಯಲ್ ಜೈದೇವ್ ಸಾವಿನ ಸುತ್ತ ಸಾಗುತ್ತಿದೆ. ಇಲ್ಲಿವರೆಗಿನ ಕಥೆ ಪ್ರಕಾರ, ಜೀವ ಹೊಡೆದ ಏಟಿನಿಂದ ಜೈದೇವ್ ಪ್ರಾಣ ಹೋಗಿತ್ತು. ಈ ವಿಷಯವನ್ನು ಎಲ್ಲರಿಂದಲೂ ಮುಚ್ಚಿಡಲಾಗಿತ್ತು. ಪೊಲೀಸ್ ವಿಚಾರಣೆ ಶುರುವಾಗುತ್ತಿದ್ದಂತೆ ಕೊ-ಲೆ ಬಗ್ಗೆ ಮಲ್ಲಿ ಮುಂದೆ ಹೇಳಲಾಗಿತ್ತು. ಸದ್ಯ ಜೀವಾ ಮತ್ತು ಭೂಮಿಕಾ ಪೊಲೀಸ್ ವಿಚಾರಣೆಯನ್ನು ಎದುರಿಸಿದ್ದಾರೆ.

Related Articles

Related image1
Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ
Related image2
Amruthadhaare: ಜೈದೇವನ ಹುಡುಕಲು ಯುವತಿಯ ಎಂಟ್ರಿ! ಸತ್ಯ ಹೇಳೇಬಿಟ್ಟಳು ಮಿಂಚು- ಭೂಮಿಕಾ ಕಥೆ ಫಿನಿಷ್​
35
ಹೆಣವೇ ಇಲ್ಲ
Image Credit : Zee Kannada

ಹೆಣವೇ ಇಲ್ಲ

ಮತ್ತೊಂದೆಡೆ ಜೀವಾ ತಂದೆಯಾಗುತ್ತಿರುವ ವಿಷಯ ತಿಳಿದು ಭೂಮಿಕಾ ತಾನೇ ಪೊಲೀಸರ ಮುಂದೆ ಶರಣಾಗುವ ಬಗ್ಗೆ ಚಿಂತನೆ ನಡೆಸಿದ್ದಳು. ಇದಕ್ಕಾಗಿ ಜೈದೇವ್ ಹೆಣವನ್ನು ಬೇರೊಂದೆಡೆಗೆ ಸ್ಥಳಾಂತರಿಸಲು ಹೋದ ಭೂಮಿಕಾಗೆ ಬಿಗ್‌ಶಾಕ್ ಎದುರಾಗಿದೆ. ಜೀವಾ, ಮಧುರಾ ಹೂತಿಟ್ಟಿದ್ದ ಜಾಗದಿಂದ ಜೈದೇವ್ ಹೆಣವೇ ಮಾಯವಾಗಿದೆ. ಇದರಿಂದ ಭೂಮಿಕಾಳಲ್ಲಿ ಆತಂಕದ ಜೊತೆ ಭಯ ಹೆಚ್ಚಾಗಿದೆ.

45
ಕಣ್ಮುಂದೆ ಬಂದ ರಾಜೇಂದ್ರ ಪೊನ್ನಪ್ಪ
Image Credit : Zee Kannada

ಕಣ್ಮುಂದೆ ಬಂದ ರಾಜೇಂದ್ರ ಪೊನ್ನಪ್ಪ

ಜೈದೇವ್ ಹೆಣ ಮಾಯವಾಗಿರೋದರಿಂದ ಮಲ್ಲಿಯ ಲೆಕ್ಕಾಚಾರ ತೆಲಕೆಳಗಾಗಿದೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರಿಗೆ ದೃಶ್ಯ ಸಿನಿಮಾದ ರಾಜೇಂದ್ರ ಪೊನ್ನಪ್ಪ ಕಣ್ಣೆದುರು ಬರುತ್ತಿದ್ದಾನೆ. ಈ ಸಿನಿಮಾದಲ್ಲಿ ಹೆಂಡತಿ ಮತ್ತು ಮಗಳಿಂದಾದ ಕೊ*ಲೆಯನ್ನು ಮುಚ್ಚಲು ರಾಜೇಂದ್ರ ಪೊನ್ನಪ್ಪ ಹೂತಿಟ್ಟಿದ್ದ ಜಾಗದಿಂದ ಹೆಣವನ್ನು ಬೇರೊಂದು ಕಡೆ ಶಿಫ್ಟ್ ಮಾಡುತ್ತಾನೆ.

55
ವೀಕ್ಷಕರಲ್ಲಿ ಸಾಲು ಸಾಲು ಪ್ರಶ್ನೆಗಳು
Image Credit : Zee Kannada

ವೀಕ್ಷಕರಲ್ಲಿ ಸಾಲು ಸಾಲು ಪ್ರಶ್ನೆಗಳು

ಇದೀಗ ದೃಶ್ಯ ಸಿನಿಮಾದ ರೀತಿಯಲ್ಲಿಯೇ ಜೈದೇವ್ ಹೆಣ ಶಿಫ್ಟ್ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ಆದ್ರೆ ಇಲ್ಲಿ ರಾಜೇಂದ್ರ ಪೊನ್ನಪ್ಪನಾಗ ಬೇಕಿದ್ದ ಗೌತಮ್ ದಿವಾನ್ ವಿದೇಶ ಪ್ರವಾಸದಲ್ಲಿದ್ದಾನೆ. ಹಾಗಾದ್ರೆ ಇಲ್ಲಿ ಆ ರಾಜೇಂದ್ರ ಪೊನ್ನಪ್ಪ ಯಾರು? ಹೆಣ ಶಿಫ್ಟ್ ಆಗಿದ್ದು ಹೇಗೆ? ಜೈದೇವ್ ಸತ್ತಿಲ್ಲವಾ? ಬದುಕಿದ್ರೆ ಜೈದೇವ್ ಎಲ್ಲಿ? ಇದೇನಾ ಹೊಸ ಅಧ್ಯಾಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
Recommended image2
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Recommended image3
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!
Related Stories
Recommended image1
Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ
Recommended image2
Amruthadhaare: ಜೈದೇವನ ಹುಡುಕಲು ಯುವತಿಯ ಎಂಟ್ರಿ! ಸತ್ಯ ಹೇಳೇಬಿಟ್ಟಳು ಮಿಂಚು- ಭೂಮಿಕಾ ಕಥೆ ಫಿನಿಷ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved