Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ
ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್ ಜೈದೇವ್ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೈದೇವ್ ಕೊನೆಯದಾಗಿ ಭೂಮಿಕಾ ಮತ್ತು ಜೀವಾಗೆ ಕರೆ ಮಾಡಿದ್ದರಿಂದ ಅವರಿಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್ ಇದೀಗ ವಿಲನ್ ಕೆಡಿ ಜೈದೇವ್ ಸಾವಿನ ಸುತ್ತ ಸಾಗುತ್ತಿದೆ. ಜೈದೇವ್ ಮಿಸ್ಸಿಂಗ್ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೈದೇವ್ ಕೊನೆಯ ಬಾರಿಗೆ ಜೀವಾ ಮತ್ತು ಭೂಮಿಕಾಗೆ ಕಾಲ್ ಮಾಡಿದ್ದನು. ಹಾಗಾಗಿ ಇಬ್ಬರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಭಯಗೊಂಡಿರುವ ಭೂಮಿಕಾ
ಪೊಲೀಸರಿಂದ ಕಾಲ್ ಬರುತ್ತಿದ್ದಂತೆ ಭಯಗೊಂಡಿರುವ ಭೂಮಿಕಾ, ಎಲ್ಲಾ ವಿಷಯಗಳನ್ನು ಮಲ್ಲಿ ಮುಂದೆ ಹೇಳಿಕೊಂಡಿದ್ದಾರೆ. ಓರ್ವ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಆರೋಪಿಗಳನ್ನು ಬಂಧಿಸಬೇಕಿತ್ತು. ಆದ್ರೆ ಭೂಮಿಕಾ ಮತ್ತು ಜೀವಾನನ್ನು ಕಾಪಾಡೋಕೆ ಮುಂದಾಗಿದ್ದಾಳೆ. ಮೊಬೈಲ್ ಲೋಕೇಶನ್‌ನಿಂದ ತನಿಖೆ ಅರಂಭವಾಗಿದೆ. ಹಾಗಾಗಿ ಟವರ್ ಲೋಕೇಶನ್ ರಿಶಫಲ್ ಮಾಡೋದಾಗಿ ಮಲ್ಲಿ ಹೇಳಿದ್ದಾಳೆ.
ಜೈದೇವ್ ವಿರುದ್ಧ ಹನಿಟ್ರ್ಯಾಪ್ ಪ್ಲಾನ್
ಜೈದೇವ್ ವಿರುದ್ಧ ಹನಿಟ್ರ್ಯಾಪ್ ಪ್ಲಾನ್ ಮಾಡಿದ್ದ ಮಲ್ಲಿ, ತನ್ನ ಸಹೋದ್ಯೋಗಿ ಮಧುರಾಳನ್ನು ನೇಮಿಸಿದ್ದಳು. ಇದೀಗ ಮಧುರಾ ಸಹ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೈದೇವ್ ಮಿಸ್ಸಿಂಗ್ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಶಕುಂತಲಾ ಹುಡುಕಾಟ ಆರಂಭಿಸಿದ್ದಾಳೆ. ಭೂಮಿಕಾಳನ್ನು ವಿಚಾರಣೆಗೆ ಕರೆದಿರೋದನ್ನು ತಿಳಿದು ಶಕುಂತಲಾ ಸಹ ಶಾಕ್ ಆಗಿದ್ದಾಳೆ.
ಏನು ಮಾತುಕತೆ?
ಪೊಲೀಸರಿಗೆ ಕರೆ ಮಾಡಿರುವ ಶಕುಂತಲಾ, ನನ್ನ ಸೊಸೆಯನ್ನು ಯಾಕೆ ಕರೆಸುತ್ತಿದ್ದೀರಿ ಎಂದು ಕೇಳಿದಾಗ, ಜೈದೇವ್ ಕೊನೆಗೆ ಭೂಮಿಕಾಗೆ ಕಾಲ್ ಮಾಡಿದ್ದಾನೆ. ಹಾಗಾಗಿ ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂದು ತಿಳಿದುಕೊಳ್ಳಲು ಭೂಮಿಕಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭೂಮಿಕಾ ಜೊತೆ ಹೊರಟ ಮಲ್ಲಿ
ಈಗಾಗಲೇ ಪೊಲೀಸರ ವಿಚಾರಣೆಯನ್ನು ಎದುರಿಸಿ ಜೀವಾ ಮನೆಗೆ ಹಿಂದಿರುಗಿದ್ದಾನೆ. ಜೀವಾ ಸಹ ಭಯಗೊಂಡಿದ್ದಾನೆ. ವಿಚಾರಣೆಗೆ ಹೊರಟಿರುವ ಭೂಮಿಕಾಗೆ ಮಲ್ಲಿ ಸಾಥ್ ನೀಡಿದ್ದಾಳೆ. ನಾನು ನಿಮ್ಮ ಜೊತೆಯಲ್ಲಿದ್ದರೆ ಸ್ವಲ್ಪ ಧೈರ್ಯವಿರುತ್ತೆ. ನಾನು ಪೊಲೀಸ್ ಠಾಣೆಯ ಹೊರಗೆ ನಿಮಗಾಗಿ ಕಾಯುತ್ತಿರುತ್ತೇನೆ ಎಂದು ಮಲ್ಲಿ ಹೇಳಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

