- Home
- Entertainment
- TV Talk
- Amruthadhaare: ಜೈದೇವನ ಹುಡುಕಲು ಯುವತಿಯ ಎಂಟ್ರಿ! ಸತ್ಯ ಹೇಳೇಬಿಟ್ಟಳು ಮಿಂಚು- ಭೂಮಿಕಾ ಕಥೆ ಫಿನಿಷ್
Amruthadhaare: ಜೈದೇವನ ಹುಡುಕಲು ಯುವತಿಯ ಎಂಟ್ರಿ! ಸತ್ಯ ಹೇಳೇಬಿಟ್ಟಳು ಮಿಂಚು- ಭೂಮಿಕಾ ಕಥೆ ಫಿನಿಷ್
ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚುವನ್ನು ರಕ್ಷಿಸಲು ಹೋದ ಜೀವ, ಜೈದೇವನನ್ನು ಕೊಲೆ ಮಾಡಿದ್ದಾನೆ. ಈ ಸತ್ಯವನ್ನು ಮಿಂಚು ಶಕುಂತಲಾ ಬಳಿ ಬಾಯಿಬಿಟ್ಟಿದ್ದು, ಆಕೆ ಪರೋಕ್ಷವಾಗಿ ದೂರು ದಾಖಲಿಸಿದ್ದಾಳೆ. ಈ ದೂರಿನ ಅನ್ವಯ ಪೊಲೀಸರು ಜೀವನನ್ನು ವಿಚಾರಣೆಗೆ ಕರೆದಿದ್ದಾರೆ.

ಜೈದೇವನ ಕೊಲೆ
ಅಮೃತಧಾರೆಯಲ್ಲಿ (Amruthadhaare Serial)ನಲ್ಲಿ ಜೈದೇವನ ಕೊಲೆಯಾಗಿದೆ. ಮಿಂಚುವನ್ನು ಕಿಡ್ನ್ಯಾಪ್ ಮಾಡಿದಾಗ, ಆಕೆಯನ್ನು ಬಚಾವ್ ಮಾಡಲು ಹೋಗುವ ಭರದಲ್ಲಿ ಜೀವ ಜೈದೇವನನ್ನು ಸಾಯಿಸಿದಂತೆ ತೋರಿಸಲಾಗಿದೆ. ಆತನನ್ನು ಮಣ್ಣುಕೂಡ ಮಾಡಲಾಗಿದೆ.
ಶಕುಂತಲಾ ಎಂಟ್ರಿ
ಅದೇ ಇನ್ನೊಂದೆಡೆ, ಹೆದರಿಕೊಂಡಿರುವ ಮಿಂಚು ಈ ಬಗ್ಗೆ ಭೂಮಿಕಾಳ ಬಳಿ ಹೇಳುತ್ತಿರುವಾಗಲೇ ಶಕುಂತಲಾ ಎಂಟ್ರಿಯಾಗಿದೆ. ಇದರಿಂದ ಅಲ್ಲಿಯೇ ಮಾತನ್ನು ಮುಗಿಸಿದ್ದಾಳೆ ಭೂಮಿಕಾ. ಇದನ್ನು ಶಕುಂತಲಾ ಗಮನಿಸಿದ್ದಾಳೆ. ಅವಳಿಗೆ ಡೌಟ್ ಬಂದಿದೆ.
ಸತ್ಯ ನುಡಿದ ಮಿಂಚು
ಈ ಬಗ್ಗೆ ಮಿಂಚುವಲ್ಲಿ ನಿಧಾನವಾಗಿ ವಿಷ್ಯ ಕೇಳಿದ್ದಾಳೆ. ಜೈ ಅಂಕಲ್ ನಿನಗೇನಾದ್ರೂ ತೊಂದರೆ ಮಾಡಿದ್ನಾ ಎಂದು ಪ್ರಶ್ನಿಸಿದಾಗ, ಏನೂ ಅರಿಯದ ಮಿಂಚು ಎಲ್ಲವನ್ನೂ ಹೇಳಿಬಿಟ್ಟಿದ್ದಾಳೆ. ಆತ ಕಿಡ್ನ್ಯಾಪ್ ಮಾಡಿದ್ದು, ತನ್ನನ್ನು ಬಿಡಿಸಲು ಜೀವ, ಭೂಮಿಕಾ ಬಂದಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ.
ಯುವತಿಯೊಬ್ಬಳ ಕೈಯಿಂದ ಕಂಪ್ಲೇಂಟ್
ಇಷ್ಟಾಗುತ್ತಿದ್ದಂತೆಯೇ ಶಕುಂತಲಾ ಡೌಟ್ ಕ್ಲಿಯರ್ ಆಗಿದೆ. ಇದೀಗ ಜೈದೇವನ ಕಾಣೆಯಾಗಿದ್ದಾನೆ ಎನ್ನುವ ಕಂಪ್ಲೇಂಟ್ ತಾನೇ ಕೊಟ್ಟರೆ ಮನೆಯವರಿಗೆ ತಾನು ಜೈದೇವನ ಪರ ಇರುವುದು ತಿಳಿಯುತ್ತದೆ ಎಂದುಕೊಂಡಿರುವ ಶಕುಂತಲಾ ಯುವತಿಯೊಬ್ಬಳ ಕೈಯಿಂದ ಕಂಪ್ಲೇಂಟ್ ಕೊಡಿಸಿದ್ದಾಳೆ.
ಜೀವನಿಗೆ ಬುಲಾವ್
ಆ ಕಂಪ್ಲೇಂಟ್ ಆಧಾರದ ಮೇಲೆ ತನಿಖೆ ನಡೆಸಿರುವ ಪೊಲೀಸರಿಗೆ ಜೈದೇವ, ಜೀವನಿಗೆ ಕೊನೆಯ ಬಾರಿ ಕಾಲ್ ಮಾಡಿರುವುದು ತಿಳಿದು, ಪೊಲೀಸ್ ಸ್ಟೇಷನ್ಗೆ ಕರೆಸಿದ್ದಾರೆ.
ಸತ್ಯ ಬಯಲಾಗತ್ತಾ?
ಇದೀಗ, ಆ ಯುವತಿಯಿಂದ ಸತ್ಯ ಬಯಲಾಗತ್ತಾ? ಭೂಮಿಕಾಳನ್ನು ಜೀವ ರಕ್ಷಿಸ್ತಾನಾ ಅಥ್ವಾ ಜೈದೇವ ಸತ್ತೇ ಇಲ್ವಾ? ಎಲ್ಲವೂ ಕುತೂಹಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

