- Home
- Entertainment
- TV Talk
- "ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
Kavitha Gowda comeback: ಕಿರುತೆರೆಯ ಜನಪ್ರಿಯ ನಟಿ, ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ ಗೌಡ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ತಮ್ಮ ಈ ಹೊಸ ಪಯಣ ಹಾಗೂ ಕಳೆದ ಕೆಲವು ತಿಂಗಳುಗಳ ಬದಲಾವಣೆಯ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ತಾಯ್ತನದ ಜವಾಬ್ದಾರಿ ಮತ್ತು ಸಿನಿಮಾದಿಂದ ಆಫರ್
ತಾಯ್ತನದ ಜವಾಬ್ದಾರಿ ಮತ್ತು ಸಿನಿಮಾದಿಂದ ಆಫರ್|
ಕಿರುತೆರೆಯ ಮೂಲಕ ಮನೆಮಾತಾಗಿದ್ದ ನಟಿ ಕವಿತಾ ಗೌಡ ಸುದೀರ್ಘ ವಿರಾಮದ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಾಯ್ತನದ ಜವಾಬ್ದಾರಿಯ ನಡುವೆಯೂ ತಮಗೆ ಬಂದ ಆಫರ್‌ಗಳು ಹಾಗೂ ತಮ್ಮಲ್ಲಾದ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಗುವಿಗಾಗಿ ಕಳೆದ ಎಂಟು ತಿಂಗಳು ಮೀಸಲು
ಮಗುವಿಗಾಗಿ ಕಳೆದ ಎಂಟು ತಿಂಗಳು ಮೀಸಲು
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ಕಳೆದ ಎಂಟು ತಿಂಗಳುಗಳಿಂದ ನನಗೆ ಸಿನಿಮಾ ಮತ್ತು ಸೀರಿಯಲ್ ಸೇರಿದಂತೆ ಪರಭಾಷೆಗಳಿಂದಲೂ ಸಾಕಷ್ಟು ಆಫರ್‌ಗಳು ಬರುತ್ತಿದ್ದವು. ಆದರೆ ಅದೆಲ್ಲವನ್ನೂ ನಾನು ನಿರಾಕರಿಸಿದ್ದೆ. ಆಗ ನನಗೆ ನನ್ನ ಮಗು ಮತ್ತು ಮಗುವಿನ ಜೊತೆ ಕಳೆಯುವ ಸಮಯವೇ ಮುಖ್ಯವಾಗಿತ್ತು. ಮಗುವಿಗೆ ಒಂದು ವರ್ಷ ತುಂಬುವವರೆಗೂ ನಾನು ಯಾವುದನ್ನೂ ಒಪ್ಪಿಕೊಳ್ಳಬಾರದು ಎಂದು ನಿರ್ಧರಿಸಿದ್ದೆ" ಎಂದಿದ್ದಾರೆ.
ನನ್ನಲ್ಲಾದ ಬದಲಾವಣೆಗೆ ಗೆಳತಿಯೇ ಪ್ರೇರಣೆ
ನನ್ನಲ್ಲಾದ ಬದಲಾವಣೆಗೆ ಗೆಳತಿಯೇ ಪ್ರೇರಣೆ
ತಮ್ಮಲ್ಲಾದ ರೂಪಾಂತರದ ಬಗ್ಗೆ ಮಾತನಾಡಿದ ಅವರು, "ನನ್ನ ಮಗುವಿಗೆ ಒಂದು ವರ್ಷವಾದಾಗ ಇದ್ದ ನನಗೂ, ಈಗಿನ ನನಗೂ ಸಾಕಷ್ಟು ವ್ಯತ್ಯಾಸವಿದೆ. ಈ ಸಮಯದಲ್ಲಿ ನಾನು ನನ್ನ ಮೇಲೆ ಕೆಲಸ ಮಾಡಿದೆ. ನನ್ನ ಫ್ರೆಂಡ್ ಒಬ್ಬಳ ಜೊತೆ ಸ್ಪೋರ್ಟ್ಸ್ ಇವೆಂಟ್‌ನಲ್ಲಿ ಭಾಗವಹಿಸಿದ್ದೆ. ಅವಳಿಂದ ನಾನು ಸಾಕಷ್ಟು ಪ್ರೇರಿತಳಾದೆ. ಡಯಟ್ ಇರಬಹುದು, ವರ್ಕೌಟ್ ಇರಬಹುದು ಅಥವಾ ಫಿಟ್ನೆಸ್ ಕಾಪಾಡಿಕೊಳ್ಳುವುದಿರಬಹುದು, ಅವಳ ಪ್ರಭಾವ ನನ್ನ ಮೇಲಿದೆ. ಯಾವುದೇ ಅನ್-ಹೆಲ್ದಿ ದಾರಿ ಹಿಡಿಯದೆ ನಾನು ನನ್ನನ್ನು ಬದಲಾಯಿಸಿಕೊಂಡೆ" ಎಂದು ತಮ್ಮ ಫಿಟ್ನೆಸ್ ರಹಸ್ಯ ಹಂಚಿಕೊಂಡಿದ್ದಾರೆ.
ಈ ಪಾತ್ರ ನನಗಾಗಿಯೇ ಮೀಸಲಾಗಿತ್ತು
ಈ ಪಾತ್ರ ನನಗಾಗಿಯೇ ಮೀಸಲಾಗಿತ್ತು
ಹೊಸ ಸೀರಿಯಲ್ 'ಜಗದ್ಧಾತ್ರಿ' ಒಪ್ಪಿಕೊಂಡ ಬಗ್ಗೆ ವಿವರಿಸುತ್ತಾ, "ಸರಿಯಾದ ಸಮಯಕ್ಕೆ ಈ ತಂಡದವರು ನನಗೆ ಕರೆ ಮಾಡಿದರು. ಅವರು ಕೂಡ ಕಳೆದ ಹತ್ತು ತಿಂಗಳುಗಳಿಂದ ಈ ಸೀರಿಯಲ್ ಮೇಲೆ ಕೆಲಸ ಮಾಡುತ್ತಿದ್ದರು. ನಾನು ಫಿಟ್ ಆಗಿ ಸಿದ್ಧವಾದಾಗಲೇ ಈ ಆಫರ್ ಬಂದಿದ್ದನ್ನು ನೋಡಿದರೆ, ಈ ಪಾತ್ರ ನನಗಾಗಿಯೇ ಕಾದಿತ್ತು ಎಂದು ಅನ್ನಿಸುತ್ತದೆ. ಈ ಕೆಲಸ ಬೇರೆಯವರಿಗಲ್ಲ, ನನಗೇ ಮೀಸಲಾಗಿತ್ತು ಎಂಬ ಭಾವನೆ ನನ್ನಲ್ಲಿದೆ" ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿ ಬಾರಮ್ಮ ಸೀರಿಯಲ್‌ಗೆ ಕೃತಜ್ಞತೆ
ಲಕ್ಷ್ಮಿ ಬಾರಮ್ಮ ಸೀರಿಯಲ್‌ಗೆ ಕೃತಜ್ಞತೆ
ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನೆದ ನಟಿ, "ನನ್ನ ಜೀವನದಲ್ಲಿ ಕಿರುತೆರೆ ಬಹಳ ದೊಡ್ಡ ಪಾತ್ರ ವಹಿಸಿದೆ. ಅದರಲ್ಲೂ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ನನಗೆ ಒಂದು ಶಾಲೆಯಂತೆ. ಅಲ್ಲಿನ ನಟನೆ, ಎಕ್ಸ್‌ಪೋಜರ್ ಹಾಗೂ ಕಲಿಕೆ ನನ್ನ ಕರಿಯರ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಆ ಸೀರಿಯಲ್‌ನ ಪ್ರತಿಯೊಬ್ಬರಿಗೂ ನಾನು ಯಾವಾಗಲೂ ಚಿರಋಣಿ" ಎಂದು ಹೇಳುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

