- Home
- Entertainment
- TV Talk
- Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda
Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್‌ನೆಸ್ ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಮಗನ ಆರೈಕೆಗೆ ಮನೆಯವ್ರು ಇದ್ದಾರೆ
ಕಳೆದ ಎಂಟು ತಿಂಗಳಿನಿಂದ ಅವರು ಡಯೆಟ್, ಫಿಟ್‌ನೆಸ್ ಕಡೆಗೆ ಇನ್ನಷ್ಟು ಗಮನ ಕೊಡುತ್ತಿದ್ದಾರೆ. ಈ ವೇಳೆ ಅವರು 8kg ತೂಕ ಇಳಿಸಿಕೊಂಡಿದ್ದಾರಂತೆ. ಫಿಟ್‌ನೆಸ್, ವರ್ಕೌಟ್, ಡಯೆಟ್, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ತಾಯಿಯಾದ್ಮೇಲೆ ದೇಹದಲ್ಲಿ ಒಂದೇ ಅಲ್ಲದೆ, ಮಹಿಳೆಯ ಜೀವನವೇ ಬದಲಾಗುತ್ತದೆ. ಒಂದು ಮಗು ಬಂದರೆ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆಯಾದರೆ, ತಾಯಿಗೆ ಮಾತ್ರ ಅವಳ ಬದುಕೇ ಬದಲಾಗುತ್ತದೆ. ಈಗ ನನಗೆ ಮಗನಿದ್ದು, ನನ್ನ ಪತಿ ಚಂದನ್ ಕುಮಾರ್, ಮನೆಯವರು ಸಹಾಯ ಮಾಡೋದರಿಂದ ಮಗು ನೋಡಿಕೊಳ್ಳೋದು ಅಷ್ಟು ಕಷ್ಟ ಆಗುತ್ತಿಲ್ಲ. ಆದರೆ ತಾಯಿಯಾಗಿ ಅವನಿಗೆ ಎಷ್ಟು ಆದ್ಯತೆ ಕೊಡಬೇಕೋ ಅಷ್ಟನ್ನು ನಾನು ಕೊಡ್ತಿದ್ದೀನಿ. ಮಗನ ವಿಚಾರದಲ್ಲಿ ಕೆಲ ವಿಷಯಗಳಿವೆ. ಅವನಿಗೆ ಬೆಳಿಗ್ಗೆ ತಿಂಡಿ ನಾನೇ ಮಾಡಿಸಬೇಕು ಎಂದಿದೆ, ಅದಕ್ಕೆ ನಾನೇ ಇರಬೇಕು. ಉಳಿದ ವಿಷಯಗಳನ್ನು ಮನೆಯವರು ನೋಡಿಕೊಳ್ತಾರೆ.

ಮಾನಸಿಕವಾಗಿ ಬದಲಾವಣೆ ಆಗುತ್ತದೆ!
ಈ ಹಿಂದೆ ನನಗೆ ಕೋಪ ಬರುತ್ತಿರಲಿಲ್ಲ. ಯಾರಾದರೂ ಏನಾದರೂ ಹೇಳಿಕೊಳ್ಳಲಿ? ಏನಾದರೂ ಮಾಡಿಕೊಳ್ಳಲಿ ಎಂದುಕೊಳ್ತಿದ್ದೆ. ಮಗು ಆದ್ಮೇಲೆ ಯಾರು ಏನು ಹೇಳಿದರೂ ಕೂಡ, ಅವರಿಗೆ ಏನಾದರೂ ಹೇಳಿ ಬೇಸರ ಮಾಡೋದು ಬೇಡ, ನನಗೂ ಬೇಸರ ಮಾಡಿಕೊಳ್ಳೋದು ಬೇಡ ಎಂದುಕೊಂಡು ಸುಮ್ಮನಾಗಿರುತ್ತೇನೆ. ಫಂಕ್ಷನ್ ಇರಲೀ, ಬೇರೆ ಕೆಲಸ ಇರಲಿ, ಎಲ್ಲೇ ಹೋಗಬೇಕು ಎಂದ್ರೂ ಕೂಡ, ಈ ಟೈಮ್‌ನಲ್ಲಿ ಬರೋಕೆ ಆಗೋದಿಲ್ಲ,ಆ ಟೈಮ್‌ನಲ್ಲಿ ಬರೋಕೆ ಆಗೋದಿಲ್ಲ ಎಂದು ಮೊದಲೇ ತಿಳಿಸಿರುತ್ತೇನೆ. ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ.
ಗಂಡ ಅಥವಾ ಪುರುಷರು ಅರ್ಥ ಮಾಡಿಕೊಳ್ಳಬೇಕು
ಪ್ರಗ್ನೆಂಟ್ ಆದಾಗ, ತಾಯಿ ಆದಾಗ ಮಹಿಳೆಗೆ ಮಾನಸಿಕವಾಗಿ, ದೈಹಿಕವಾಗಿ ಬದಲಾವಣೆ ಆಗುತ್ತದೆ. ಇದನ್ನು ಗಂಡ ಅಥವಾ ಪುರುಷರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಗೆ ಬೆನ್ನು ನೋವು ಬಂತು, ಕಾಲು ನೋವು ಬಂತು ಎಂದಾಗ ಡ್ರಾಮಾ ಮಾಡ್ತಾರೆ ಎಂದು ಪುರುಷರು ಎಂದುಕೊಳ್ಳೋದು ತಪ್ಪು. ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ಬದಲಾಗುತ್ತದೆ ಎಂದು ಪುರುಷರು ಅರ್ಥಮಾಡಿಕೊಳ್ಳಬೇಕು. ನನ್ನ ಮಗನಿಗೆ ನಾನು ಇದನ್ನೆಲ್ಲ ಕಲಿಸುತ್ತೇನೆ, ಇಂದಿನ ಮಹಿಳೆಯರು ಕೂಡ ಮಕ್ಕಳಿಗೆ ಇದನ್ನೆಲ್ಲ ಕಲಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ.
ಕ್ರೇವಿಂಗ್ಸ್ ಆದರೆ?
ನನಗೆ ಪ್ರಗ್ನೆನ್ಸಿ ಟೈಮ್‌ನಲ್ಲಿ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಎಂದು ಅನಿಸಿರಲಿಲ್ಲ. ಮೊದಲೇ ಫಿಟ್‌ನೆಸ್ ಕಡೆಗೆ ಗಮನ ಕೊಟ್ಟಿದ್ದಕ್ಕೆ ಗರ್ಭಿಣಿಯಾದಾಗ, ನಂಗೆ ಬೆನ್ನು ನೋವು, ಕಾಲು ನೋವು ಅಂತ ಬಂದಿರಲಿಲ್ಲ. ಮಗು ಡೆಲಿವರಿಗೆ ಆದ್ಮೇಲೆ ಸಮಸ್ಯೆಯಾದರೂ ಕೂಡ, ಅದಕ್ಕೆ ಬೇಕಾದ ಆರೈಕೆ ಮಾಡಿಕೊಂಡೆ. ಕ್ರೇವಿಂಗ್ಸ್ ಬಂದಿದೆ ಎಂದರೆ ನಿಮ್ಮಲ್ಲಿ ಏನಾದರೊಂದು ಕೊರತೆ ಇರುತ್ತದೆ ಎಂದರ್ಥ. ಆಗ ಡಾಕ್ಟರ್ ಬಳಿ ಕೇಳಿದಾಗ ಏನು ಸಮಸ್ಯೆ ಆಗಿದೆ ಎಂದು ಗೊತ್ತಾಗುತ್ತದೆ. ಇಂದು ಇಂಟರ್‌ನೆಟ್‌ನಲ್ಲಿ ಕೂಡ ಸಾಕಷ್ಟು ಮಾಹಿತಿ ಸಿಗುತ್ತಿದೆ.
ಡಯೆಟ್ ಹೇಗಿರಬೇಕು?
ಅನ್ನದ ಜೊತೆಗೆ ತರಕಾರಿ, ಪ್ರೋಟೀನ್ ಇರಬೇಕು. ಕೇವಲ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರೋಟೀನ್ ಮೊದಲು ತಿಂದು, ಆಮೇಲೆ ತರಕಾರಿ ತಿನ್ನೇಕು, ಇದಾದ ಬಳಿಕ ಅನ್ನ, ಚಪಾತಿ, ರೊಟ್ಟಿ ತಿಂದರೆ ಊಟ ಬ್ಯಾಲೆನ್ಸ್ ಆಗುತ್ತದೆ. ಸ್ವೀಟ್ ತಿನ್ನಬೇಕು ಎನಿಸಿದಾಗ, ಇದಕ್ಕೆ ಬದಲಾಗಿ ಏನು ತಿನ್ನಬಹುದು ಎಂದು ಯೋಚಿಸಿ. ಹೀಗೆ ಎಣ್ಣೆ ತಿಂಡಿ, ಸ್ವೀಟ್ ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲದ ಆಹಾರಗಳನ್ನು ತ್ಯಜಿಸಿ.
ಯಾವಾಗ ಎಷ್ಟು? ಏನು ತಿನ್ನಬೇಕು ಎನ್ನೋದು ಡಯೆಟ್. ಇದನ್ನು ಪಾಲಿಸಬೇಕು.
ವರ್ಕೌಟ್ ಹೇಗಿರುತ್ತದೆ?
ವರ್ಕೌಟ್ ಮಾಡಬೇಕು ಎಂದು ಏನೇನೋ ಮಾಡಿದರೆ ಪ್ರಯೋಜನ ಇಲ್ಲ. ದಪ್ಪ ಇದ್ದು ಯಾವುದ್ಯಾವುದೋ ವರ್ಕೌಟ್ ಮಾಡಿದರೆ, ಆಮೇಲೆ ಮೊಣಕಾಲು ನೋವು ಬರುತ್ತದೆ, ಎಲುಬಿಗೆ ಸಮಸ್ಯೆ ಆಗುತ್ತದೆ. ತಾಯಿಯಾದ್ಮೇಲೆ ಮಹಿಳೆಗೆ ಯಾವ ರೀತಿ ವರ್ಕೌಟ್ ಮುಖ್ಯ ಆಗುತ್ತದೆ ಎಂದು ತಿಳಿದುಕೊಳ್ಳಬೇಕು. ಹೀಗಾಗಿ ಡಾಕ್ಟರ್ ಸಲಹೆ, ಟ್ರೇನರ್ ಸಲಹೆ ಮುಖ್ಯ ಆಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

