ಅಂತೆ-ಕಂತೆಗಳಿಗೆ ಬ್ರೇಕ್: Bigg Bossಗೆ ಹೋಗ್ತಿರೋ ಅಂತಿಮ ಸ್ಪರ್ಧಿಗಳು ಇವರೇ ನೋಡಿ
ಬಿಗ್ಬಾಸ್ 13ರ ಗ್ರ್ಯಾಂಡ್ ಓಪನಿಂಗ್ಗೆ ದಿನಗಣನೆ ಆರಂಭವಾಗಿದ್ದು, ಸ್ಪರ್ಧಿಗಳ ಬಗ್ಗೆ ತೀವ್ರ ಕುತೂಹಲ ಮನೆಮಾಡಿದೆ. ಕಲರ್ಸ್ ವಾಹಿನಿಯು ಸ್ಪರ್ಧಿಗಳ ಮುಖ ತೋರಿಸದೆ, ಹಿಂಬದಿಯಿಂದ ಸೆರೆಹಿಡಿದ ವಿಡಿಯೋವನ್ನು ಹಂಚಿಕೊಂಡು, ಇವರು ಯಾರೆಂದು ಊಹಿಸುವಂತೆ ಪ್ರೇಕ್ಷಕರಿಗೆ ಸವಾಲು ಹಾಕಿದೆ.

ಔಟ್ ಆಗಿಲ್ಲ ಲಿಸ್ಟ್
ಬಿಗ್ಬಾಸ್ 13ಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇವೆ. ಗ್ರ್ಯಾಂಡ್ ಓಪನಿಂಗ್ ಇದೇ 6ರಂದು ನಡೆಯಲಿದೆ. ಇಲ್ಲಿಯವರೆಗೂ ಬಿಗ್ಬಾಸ್ಗೆ ಹೋಗ್ತಿರೋ ಸ್ಪರ್ಧಿಗಳ ಬಗ್ಗೆ ಎಲ್ಲಿಯೂ ಲಿಸ್ಟ್ ಔಟ್ ಆಗಲಿಲ್ಲ.
ಅಂತೆ-ಕಂತೆಗಳಿಗೆ ಬ್ರೇಕ್
ಅಂತೆ-ಕಂತೆಗಳೇ ಇಲ್ಲಿಯವರೆಗೆ ಕೇಳಿಬರುತ್ತಿವೆ. ಅವರು ಹೋಗ್ತಿದ್ದಾರೆ, ಇವರು ಹೋಗ್ತಿದ್ದಾರೆ ಎಂದಷ್ಟೇ ಹೇಳಲಾಗುತ್ತಿದೆ. ಈ ಕುತೂಹಲಕ್ಕೆ ಕಲರ್ಸ್ ವಾಹಿನಿ ಕೊನೆಗೂ ಬ್ರೇಕ್ ಕೊಟ್ಟಿದೆ.
ಬೋರ್ಡಿಂಗ್ ಪಾಸ್
ಸಸ್ಪೆನ್ಸ್ ಇಡುವ ಮೂಲಕವೇ ಬಿಗ್ಬಾಸ್ಗೆ ಹೋಗ್ತಿರೋರು ಯಾರು ಎನ್ನುವ ಕುತೂಹಲವನ್ನು ಕೆರಳಿಸಿರೋ ಕಲರ್ಸ್ ವಾಹಿನಿ, ಬೋರ್ಡಿಂಗ್ ಪಾಸ್ ಸಿಕ್ಕಿರೋದು ಇವರಿಗೇ ನೋಡಿ ಎಂದು ಒಂದಿಷ್ಟು ಸೆಲೆಬ್ರಿಟಿಗಳ ವಿಡಿಯೋ ರಿಲೀಸ್ ಮಾಡಿದೆ.
ಬ್ಯಾಕ್ ಪೋಸ್
ಇದರಲ್ಲಿ, ಎಲ್ಲರನ್ನೂ ಬ್ಯಾಕ್ ಪೋಸ್ನಲ್ಲಿ ತೋರಿಸಲಾಗಿದೆ. ಇವರನ್ನು ಗೆಸ್ ಮಾಡಿ ಎಂದು ಹೇಳಲಾಗುತ್ತಿದೆ. ಹಲವರು ಹಲವು ರೀತಿಯಲ್ಲಿ ಗೆಸ್ ಮಾಡುತ್ತಿದ್ದಾರೆ. ಇಲ್ಲಿ ಹಾಕಿರುವ ಫೋಟೋಗಳನ್ನು ನೋಡಿ ಯಾರು ಎಂದು ಗೆಸ್ ಮಾಡಲು ಸಾಧ್ಯನಾ?
ನೆಟ್ಟಿಗರ ಗೆಸ್
ಶ್ರಾವಣಿ ಸುಬ್ರಹ್ಮಣ್ಯದ ನಾಯಕಿ ಆಸಿಯಾ ಫಿರ್ದೋಸ್, ದಿವ್ಯಾ ಉರುಡಗ, ಸೌಂದರ್ಯ ಶೆಟ್ಟಿ, ಕಾವ್ಯಾ ಗೌಡ, ಸೂರಜ್, ಸುದರ್ಶನ್, ಅರವಿಂದ ರೆಡ್ಡಿ... ಹೀಗೆ ಹಲವಾರು ಹೆಸರುಗಳನ್ನು ಕಮೆಂಟ್ನಲ್ಲಿ ಹಾಕಲಾಗುತ್ತಿದೆ.
ನಿಮ್ಮ ಊಹೆ ಸರಿಯಾಯ್ತಾ?
ನಿಮಗೆ ಏನು ಎನ್ನಿಸುತ್ತದೆ? ಇಲ್ಲಿ ಇರುವವರು ಯಾರು, ಗೆಸ್ ಮಾಡಿ. ನಿಮ್ಮ ಊಹೆ ಸರಿಯಾಯ್ತಾ ಎಂದು ನಾಡಿದ್ದು ನಡೆಯಲಿರುವ ಗ್ರ್ಯಾಂಡ್ ಓಪನಿಂಗ್ನಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

