MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Life
  • Travel
  • ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ'

ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ'

‘ಗುಣ’ ಸಿನಿಮಾ ಮತ್ತು ‘ಮಂಜುಮ್ಮಲ್ ಬಾಯ್ಸ್’ ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್‌ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.

1 Min read
Author : Govindaraj S
Published : Sep 07 2026, 04:43 PM IST
Share this Photo Gallery
  • FB
  • TW
  • Linkdin
  • Whatsapp
15
ವಿಸ್ಮಯಗಳಿಗೆ ಜೀವಂತ ಸಾಕ್ಷಿ
Image Credit : Facebook

ವಿಸ್ಮಯಗಳಿಗೆ ಜೀವಂತ ಸಾಕ್ಷಿ

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್‌ನ ಸುಂದರ ಗಿರಿಧಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು 2,230 ಮೀಟರ್ (7,320 ಅಡಿ) ಎತ್ತರದಲ್ಲಿರುವ ಗುಣ ಗುಹೆಗಳು ಪ್ರಕೃತಿಯ ವಿಸ್ಮಯಗಳಿಗೆ ಜೀವಂತ ಸಾಕ್ಷಿಯಾಗಿದೆ. ಕೋಟ್ಯಂತರ ವರ್ಷಗಳ ಭೂವೈಜ್ಞಾನಿಕ ಬದಲಾವಣೆಗಳಿಂದ ರೂಪುಗೊಂಡ ಈ ಗುಹೆಗಳು ದಟ್ಟ ಶೋಲಾ ಕಾಡು, ಎತ್ತರದ ಪೈನ್ ಮರಗಳು ಹಾಗೂ ಆಳವಾದ ಕಲ್ಲಿನ ಬಿರುಕುಗಳಿಂದ ಕೂಡಿದ್ದು, ಪ್ರಕೃತಿ ಪ್ರಿಯರು ಮತ್ತು ಸಾಹಸಾಸಕ್ತರನ್ನು ತನ್ನತ್ತ ಸೆಳೆಯುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮತ್ತೊಮ್ಮೆ ವಿಶ್ವದ ಗಮನ
Image Credit : Facebook

ಮತ್ತೊಮ್ಮೆ ವಿಶ್ವದ ಗಮನ

1821ರಲ್ಲಿ ಬ್ರಿಟಿಷ್ ಅನ್ವೇಷಕ ಬಿ.ಎಸ್. ವಾರ್ಡ್ ಇದನ್ನು ಪತ್ತೆ ಮಾಡಿದರು. ಈ ಗುಹೆಗಳನ್ನು ಹಿಂದೆ ಡೆವಿಲ್ಸ್ ಕಿಚನ್ ಎಂದು ಕರೆಯಲಾಗುತ್ತಿತ್ತು. ಆದರೆ 1991ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ಬಳಿಕ ಈ ಸ್ಥಳವು ಗುಣ ಗುಹೆ ಎಂಬ ಹೆಸರಿನಿಂದ ದೇಶಾದ್ಯಂತ ಜನಪ್ರಿಯವಾಯಿತು. ಸುಮಾರು ಮೂರು ದಶಕಗಳ ನಂತರ, 2024ರಲ್ಲಿ ಬಿಡುಗಡೆಯಾದ ಮಲಯಾಳಂನ ಬ್ಲಾಕ್‌ಬಸ್ಟರ್ ಮಂಜುಮ್ಮಿಲ್ ಬಾಯ್ಸ್ ಈ ಗುಹೆಯನ್ನು ಮತ್ತೊಮ್ಮೆ ವಿಶ್ವದ ಗಮನಕ್ಕೆ ತಂದಿತು.

Related Articles

Related image1
ನಿರ್ದೇಶಕ ಓಂ ಸಾಯಿಪ್ರಕಾಶ್‌ ನನ್ನ ಪಾಲಿಗೆ ಗುರುಗಳಿದ್ದಂತೆ: ಹಿರಿಯ ನಟಿ ಉಮಾಶ್ರೀ!
Related image2
ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?
35
ಗುಹೆಯ ಆಳವಾದ ಬಿರುಕು
Image Credit : Facebook

ಗುಹೆಯ ಆಳವಾದ ಬಿರುಕು

2006ರಲ್ಲಿ ನಡೆದ ನೈಜ ಘಟನೆಯ ಆಧಾರದ ಮೇಲೆ ನಿರ್ಮಿತವಾದ ಈ ಚಿತ್ರದಲ್ಲಿ, ಗುಹೆಯ ಆಳವಾದ ಬಿರುಕಿಗೆ ಬಿದ್ದ ಸ್ನೇಹಿತನನ್ನು ಉಳಿಸಲು ಇತರ ಸ್ನೇಹಿತರು ತೋರಿದ ಧೈರ್ಯ ಮತ್ತು ಸ್ನೇಹದ ಮೌಲ್ಯವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಆರಂಭಿಸಿದರು.

45
ಸರ್ಕಾರ ನಿರ್ಬಂಧ
Image Credit : Facebook

ಸರ್ಕಾರ ನಿರ್ಬಂಧ

ಗುಣ ಗುಹೆಯ ಬಿರುಕುಗಳು ನೂರಾರು ಅಡಿ ಆಳ ಹೊಂದಿರುವುದರಿಂದ ಇಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿವೆ. ಈ ಕಾರಣದಿಂದ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಹೆಯ ಒಳಭಾಗಕ್ಕೆ ಪ್ರವೇಶವನ್ನು ಸರ್ಕಾರ ನಿರ್ಬಂಧಿಸಿದೆ. ಆದರೂ ಸುರಕ್ಷಿತ ವೀಕ್ಷಣಾ ಪ್ರದೇಶಗಳಿಂದ ಪೈನ್ ಕಾಡು, ಮಂಜಿನ ಹೊದಿಕೆ ಮತ್ತು ವಿಶಿಷ್ಟ ಶಿಲಾರಚನೆಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು.

55
ಪ್ರವಾಸದ ಆಕರ್ಷಣೆ
Image Credit : Facebook

ಪ್ರವಾಸದ ಆಕರ್ಷಣೆ

ಪ್ರಕೃತಿಯ ಸೌಂದರ್ಯ, ಭೂವೈಜ್ಞಾನಿಕ ವೈಶಿಷ್ಟ್ಯ, ಸಿನಿರಂಗದ ಇತಿಹಾಸ ಹಾಗೂ ಸಾಹಸದ ರೋಮಾಂಚನ ಈ ನಾಲ್ಕೂ ಅಂಶಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುವ ಅಪರೂಪದ ಪ್ರವಾಸಿ ತಾಣವೇ ಗುಣ ಗುಹೆ. ಕೊಡೈಕೆನಾಲ್ ಪ್ರವಾಸದ ಅವಿಭಾಜ್ಯ ಆಕರ್ಷಣೆಯಾಗಿ ಇದು ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ತಮಿಳುನಾಡು
ಪ್ರವಾಸ
ಪ್ರವಾಸೋದ್ಯಮ
ಜೀವನಶೈಲಿ

Latest Videos
Recommended Stories
Recommended image1
Tirumala Free Bus: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್, ಬೆಟ್ಟದ ಮೇಲೆ ಇನ್ಮುಂದೆ ಉಚಿತ ಪ್ರಯಾಣ!
Recommended image2
ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!
Recommended image3
ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್ ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್
Related Stories
Recommended image1
ನಿರ್ದೇಶಕ ಓಂ ಸಾಯಿಪ್ರಕಾಶ್‌ ನನ್ನ ಪಾಲಿಗೆ ಗುರುಗಳಿದ್ದಂತೆ: ಹಿರಿಯ ನಟಿ ಉಮಾಶ್ರೀ!
Recommended image2
ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved