MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Karnataka Districts
  • ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್ ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್

ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್ ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್

1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.

2 Min read
Author : Mahmad Rafik
Published : Sep 06 2026, 07:06 PM IST
Share this Photo Gallery
  • FB
  • TW
  • Linkdin
  • Whatsapp
15
ಮಂಡ್ಯ ಜಿಲ್ಲೆಯಲ್ಲೊಂದು ಸುರಂಗ ಕಾಲುವೆ
Image Credit : Social Media

ಮಂಡ್ಯ ಜಿಲ್ಲೆಯಲ್ಲೊಂದು ಸುರಂಗ ಕಾಲುವೆ

ಮಂಡ್ಯ ಜಿಲ್ಲೆಯಲ್ಲೊಂದು ಸುರಂಗ ಕಾಲುವೆಯನ್ನು ನೋಡಲು ಜನರು ಆಗಮಿಸುತ್ತಾರೆ. ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳು ಇಲ್ಲದ ಸಮಯದಲ್ಲಿ ನಿರ್ಮಾಣವಾದ ಅದ್ಭುತವಾದ ಸುರಂಗ ಕಾಲುವೆ, ಇಂದಿಗೂ ಇಲ್ಲಿಯ ಕೃಷಿ ಜಮೀನುಗಳಿಗೆ ನೀರೂಣಿಸುತ್ತಿದೆ. ಇಂದು ಕಾಲುವೆಗಳು ಉದ್ಘಾಟನೆಗೂ ಮುಂಚೆಯೇ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಉದಾಹರಣೆಗಳ ನಡುವೆ 1928-1931ರ ಅವಧಿಯಲ್ಲಿ ನಿರ್ಮಾಣವಾದ ಸುರಂಗ ಕೂತಹಲ ಮೂಡಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಲ್ಲಿದೆ ಈ ಸುರಂಗ?
Image Credit : Social Media

ಎಲ್ಲಿದೆ ಈ ಸುರಂಗ?

ಮಂಡ್ಯ ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ (ಕಳೆನಹಳ್ಳಿ ಹತ್ತಿರ) ಅಪರೂಪದ ನೀರಾವರಿ ಕಾಲುವೆ ಸುರಂಗವನ್ನು ಕಾಣಬಹುದು. ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿರುವ ಈ ಸುರಂಗ ತಲುಪಲು ಎರಡೂವರೆ ಗಂಟೆ ಸಮಯ ಬೇಕಾಗುತ್ತದೆ. ರಜಾದಿನಗಳಲ್ಲಿ ಮಕ್ಕಳನ್ನು ಸಿನಿಮಾ, ಮಾಲ್ ಅಂತ ಕರೆದುಕೊಂಡು ಹೋಗದೇ ಹುಲಿಕೆರೆಗೆ ಕರೆದುಕೊಂಡು ಹೋಗಿ. ಅಪರೂಪ ಮತ್ತು ವಿಶೇಷ ವಿನ್ಯಾಸವುಳ್ಳ ಸುರಂಗವನ್ನು ಮಕ್ಕಳಿಗೆ ತೋರಿಸಬಹುದು. ಮಂಡ್ಯ ನಗರದಿಂದ 14 ಕಿಮೀ ದೂರದಲ್ಲಿ ಹುಲಿಕೆರೆ ಗ್ರಾಮ ಸಿಗುತ್ತದೆ.

Related Articles

Related image1
ವೀಕೆಂಡ್ ಪ್ಲ್ಯಾನ್ ಮಾಡ್ತಿದ್ದೀರಾ? ಬೆಂಗಳೂರಿನ ಈ 5 ಪರ್ಫೆಕ್ಟ್ ಜಾಗ ಮಿಸ್ ಮಾಡ್ಬೇಡಿ!
Related image2
ಉದಯಪುರದ ಐಷಾರಾಮಿ ಒಬೆರಾಯ್ ಉದಯವಿಲಾಸ್ ಹೋಟೆಲ್‌ನಲ್ಲಿ ತಂಗಿ ₹5.74 ಲಕ್ಷ ಬಿಲ್ ಕಟ್ಟದೆ ಹೋದ ಕುಟುಂಬ! ಕಾರಣವೇನು?
35
ಈ ಸುರಂಗ ನಿರ್ಮಿಸಿದ್ಯಾರು?
Image Credit : Social Media

ಈ ಸುರಂಗ ನಿರ್ಮಿಸಿದ್ಯಾರು?

ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುರಂಗ ನಿರ್ಮಾಣಕ್ಕೆ ಆದೇಶ ನೀಡುತ್ತಾರೆ. ಅಂದಿನ ಮಂತ್ರಿಗಳಾಗಿದ್ದ ಸರ್ ಮಿರ್ಜಾ ಇಸ್ಮೈಲ್ ಅವರು ಖ್ಯಾತ ಇಂಜಿನೀಯರ್ ಸರ್ ಎಂ.ವಿಶ್ವೇಶರಯ್ಯ ಜೊತೆಗೂಡಿ 1928ರಲ್ಲಿ ಸುರಂಗ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಾರೆ. ಯೋಜನೆಯಂತೆ 1931ರಲ್ಲಿ ಸುರಂಗ ಕಾಲುವೆ ಉದ್ಘಾಟನೆಯಾಗುತ್ತದೆ.

45
ಹುಲಿಕೆರೆ ಸುರಂಗದ ವಿಶೇಷತೆ ಏನು?
Image Credit : Social Media

ಹುಲಿಕೆರೆ ಸುರಂಗದ ವಿಶೇಷತೆ ಏನು?

ಹುಲಿಕೆರೆ ಸುರಂಗ ನಿರ್ಮಾಣಗೊಂಡು 95 ವರ್ಷ ಪೂರ್ಣಗೊಂಡಿದ್ದು, ಇಂದಿಗೂ ಕೃಷಿಭೂಮಿ ನೀರು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಈ ಸುರಂಗವು ಸುಮಾರು 2,800 ಮೀಟರ್ ಉದ್ದ, 3.75 ಮೀಟರ್ ಅಗಲ ಹಾಗೂ 4.5 ಮೀಟರ್ ಎತ್ತರವಿದೆ. ಇದನ್ನು ಏಷ್ಯಾದ ಮೊದಲ ಭೂಗತ ನೀರಾವರಿ ಸುರಂಗ ಎಂದು ಪರಿಗಣಿಸಲಾಗುತ್ತದೆ. ಅಂದಿನ ಕಾಲಘಟ್ಟದಲ್ಲಿ ಈ ಸುರಂಗವು 4,56,000 ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದಕ್ಕಾಗಿ ಕೇರಳ, ಮಹಾರಾಷ್ಟ್ರ, ಪಂಜಾಬ್‌ ರಾಜ್ಯಗಳಿಂದಲೂ ತಜ್ಞ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು.

55
20 ಅಡಿ ಕಮಾನಿನ ಪ್ರವೇಶದ್ವಾರ
Image Credit : Social Media

20 ಅಡಿ ಕಮಾನಿನ ಪ್ರವೇಶದ್ವಾರ

ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರಿಗೆ ಒಂದು ದಿನಕ್ಕೆ 1.50 ರಿಂದ 4 ಆಣೆವರೆಗೆ ಸಂಬಳವನ್ನು ನೀಡಲಾಗುತ್ತಿತ್ತು. ಇದು 20 ಅಡಿ ಕಮಾನಿನ ಪ್ರವೇಶದ್ವಾರ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿತ ತಾಣವಾಗಿ ಬದಲಾಗುತ್ತಿದೆ. ಇದು ವಿಶ್ವೇಶರಯ್ಯ ನಾಲೆಯ ಭಾಗವಾಗಿದ್ದು, ಎರಡು ಬದಿಯಲ್ಲಿ ಭೂಮಿಯನ್ನು ಅಗೆದು ಸುರಂಗ ನಿರ್ಮಿಸಲಾಗಿದೆ. ಈ ಸುರಂಗ ನೋಡಲು ಮಂಡ್ಯದಿಂದ ಶಿರಳ್ಳಿ ಮಾರ್ಗವಾಗಿ 14 ಕಿ.ಮೀ. ಪ್ರಯಾಣಿಸಿದ್ರೆ ಹುಲಿಕೆರೆ ಗ್ರಾಮ ಸಿಗುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಂಡ್ಯ
ಪ್ರವಾಸ

Latest Videos
Recommended Stories
Recommended image1
ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಅವಘಡ: ಪರ್ಯಾಯ ಶ್ರೀಗಳ ಕೈಯಿಂದ ಜಾರಿಬಿದ್ದ ಕೃಷ್ಣನ ಮಣ್ಣಿನ ಮೂರ್ತಿ
Recommended image2
Bengaluru: 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ', ಅಹಿಂದ ಸಮಾವೇಶದಲ್ಲಿ ಪ್ರದೀಪ್ ಈಶ್ವರ್ ಅಬ್ಬರ!
Recommended image3
​"ನಿಮ್ಮ ವೆಬ್‌ಸೈಟ್ ತೀರಾ ಅಸಹ್ಯವಾಗಿದೆ" - ಉದ್ಯೋಗಾಕಾಂಕ್ಷಿಯ ಕಮೆಂಟ್‌ಗೆ ಬೆಂಕಿ ಉತ್ತರ ನೀಡಿದ ಬೆಂಗಳೂರು ಸ್ಟಾರ್ಟ್‌ಅಪ್ ಸಿಇಒ
Related Stories
Recommended image1
ವೀಕೆಂಡ್ ಪ್ಲ್ಯಾನ್ ಮಾಡ್ತಿದ್ದೀರಾ? ಬೆಂಗಳೂರಿನ ಈ 5 ಪರ್ಫೆಕ್ಟ್ ಜಾಗ ಮಿಸ್ ಮಾಡ್ಬೇಡಿ!
Recommended image2
ಉದಯಪುರದ ಐಷಾರಾಮಿ ಒಬೆರಾಯ್ ಉದಯವಿಲಾಸ್ ಹೋಟೆಲ್‌ನಲ್ಲಿ ತಂಗಿ ₹5.74 ಲಕ್ಷ ಬಿಲ್ ಕಟ್ಟದೆ ಹೋದ ಕುಟುಂಬ! ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved