MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Karnataka Districts
  • ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!

ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!

ತಿರುಪತಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಭಾರತೀಯ ರೈಲ್ವೆ ಇಲಾಖೆಯು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಿದೆ. ಈ ಸಂಬಂಧ ತಿರುಪತಿ ಸಂಸದರು ಗುಡ್‌ ನ್ಯೂಸ್ ಕೊಟ್ಟಿದ್ದಾರೆ.

1 Min read
Author : Naveen Kodase
Published : Sep 07 2026, 12:18 PM IST
Share this Photo Gallery
  • FB
  • TW
  • Linkdin
  • Whatsapp
16
ಮಲೆನಾಡಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ ಕಾರ್ಯಾಚರಣೆ
Image Credit : Google Gemini

ಮಲೆನಾಡಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ ಕಾರ್ಯಾಚರಣೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ವಂದೇ ಭಾರತ್ ರೈಲಿನ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತಂತೆ ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿಯವರು ಮಹತ್ವದ ಗುಡ್‌ ನ್ಯೂಸ್ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಶಿವಮೊಗ್ಗಕ್ಕೆ ವಂದೇ ಭಾರತ್ ಆರಂಭಿಸಲು ರೈಲ್ವೆ ಇಲಾಖೆ ಸಕಾರಾತ್ಮಕ ಸ್ಪಂದನೆ
Image Credit : X

ಶಿವಮೊಗ್ಗಕ್ಕೆ ವಂದೇ ಭಾರತ್ ಆರಂಭಿಸಲು ರೈಲ್ವೆ ಇಲಾಖೆ ಸಕಾರಾತ್ಮಕ ಸ್ಪಂದನೆ

ಹೌದು, ಶಿವಮೊಗ್ಗದಿಂದ ತಿರುಪತಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಭಾರತೀಯ ರೈಲ್ವೆ ಮಂಡಳಿಯುವ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗಾಗಲೇ ಈ ರೈಲು ಆರಂಭಿಸಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಿದೆ ಎಂದು ತಿಳಿಸಿದ್ದಾರೆ.

Related Articles

Related image1
ಶಿವಮೊಗ್ಗ: ಅರಣ್ಯಾಧಿಕಾರಿಗಳ ದಾಳಿ, ರಿಪ್ಪನ್‌ಪೇಟೆಯಲ್ಲಿ 21 ಕೆ.ಜಿ. ಜಿಂಕೆ ಮಾಂಸ ಸೀಜ್‌; ಆರೋಪಿಗಳು ಎಸ್ಕೇಪ್
Related image2
ವಂದೇ ಭಾರತ್ ರೈಲಿನ 'ಅತ್ಯಾಧುನಿಕ ಸೌಲಭ್ಯ' ಕಟ್; ಆದಾಯಕ್ಕಾಗಿ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!
36
ಎಕ್ಸ್‌ ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ತಿರುಪತಿ ಸಂಸದ
Image Credit : Maddila Gurumoorthy Twitter

ಎಕ್ಸ್‌ ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ತಿರುಪತಿ ಸಂಸದ

ಈ ಕುರಿತಂತೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಿವಮೊಗ್ಗ-ತಿರುಪತಿ-ಶಿವಮೊಗ್ಗಕ್ಕೆ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎನ್ನುವ ನನ್ನ ಬೇಡಿಕೆಗೆ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

46
ಆದಷ್ಟು ಬೇಗ ಸೇವೆ ಆರಂಭಿಸಲು ಮನವಿ
Image Credit : others

ಆದಷ್ಟು ಬೇಗ ಸೇವೆ ಆರಂಭಿಸಲು ಮನವಿ

ಉಳಿದಿರುವ ಔಪಚಾರಿಕ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಆದಷ್ಟು ಶೀಘ್ರವಾಗಿ ಸೇವೆಯನ್ನು ಪ್ರಾರಂಭಿಸುವಂತೆ ನಾನು ರೈಲ್ವೆ ಮಂಡಳಿಯನ್ನು ಒತ್ತಾಯಿಸುತ್ತೇನೆ. ಇದು ಶಿವಮೊಗ್ಗ, ಬೆಂಗಳೂರು ಮತ್ತು ತಿರುಪತಿ ನಡುವಿನ ಸಂಪರ್ಕವನ್ನು ಬಲಪಡಿಸುವುದಲ್ಲದೆ, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ರೋಗಿಗಳು ಮತ್ತು ಇತರ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿ ಬರೆದುಕೊಂಡಿದ್ದಾರೆ.

56
ಶಿವಮೊಗ್ಗಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ಬಹುಕಾಲದ ಬೇಡಿಕೆ
Image Credit : Asianet News

ಶಿವಮೊಗ್ಗಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ಬಹುಕಾಲದ ಬೇಡಿಕೆ

ಅಂದಹಾಗೆ ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತರಬೇಕು ಎನ್ನುವುದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಬಹುಕಾಲದ ಬೇಡಿಕೆಯಾಗಿದೆ. ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್, ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವೈ ಸೋಮಣ್ಣ ಅವರನ್ನು ಅವಕಾಶ ಸಿಕ್ಕಾಗಲೆಲ್ಲಾ ಮನವಿ ಮಾಡುತ್ತಾ ಬಂದಿದ್ದಾರೆ. ಇದೆಲ್ಲದರ ನಡುವೆ, ತಿರುಪತಿ ಸಂಸದರು ನೀಡಿದ ಈ ಅಪ್‌ಡೇಟ್, ಶಿವಮೊಗ್ಗ ಜನತೆಯ ವಂದೇ ಭಾರತ್ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.

66
ಶಿವಮೊಗ್ಗ ಪ್ರಯಾಣಿಕರಿಗೆ, ಯಾತ್ರಿಕರಿಗೆ ಗುಡ್‌ ನ್ಯೂಸ್
Image Credit : Gemini Ai

ಶಿವಮೊಗ್ಗ ಪ್ರಯಾಣಿಕರಿಗೆ, ಯಾತ್ರಿಕರಿಗೆ ಗುಡ್‌ ನ್ಯೂಸ್

ಇನ್ನು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಶಿವಮೊಗ್ಗದಿಂದ ರಾಜ್ಯ ರಾಜಧಾನಿ ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ನಡೆಸಲಿದೆ. ಹೀಗಾಗಿ ಬೆಂಗಳೂರು ಮತ್ತು ಶಿವಮೊಗ್ಗ ಹಾಗೆಯೇ ಶಿವಮೊಗ್ಗದಿಂದ ಪವಿತ್ರ ಕ್ಷೇತ್ರ ತಿರುಪತಿಗೆ ಯಾತ್ರಿಕರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಶಿವಮೊಗ್ಗ
ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೆ
ಬಿ. ವೈ. ರಾಘವೇಂದ್ರ

Latest Videos
Recommended Stories
Recommended image1
ತಿರುಪತಿ ಬಳಿಕ ಮಂತ್ರಾಲಯ ಮಠದ ಮೇಲೆ ಸೈಬರ್ ವಂಚಕರ ಕಣ್ಣು! ಭಕ್ತರಿಗೆ ಖುದ್ದಾಗಿ ಶ್ರೀಗಳು ನೀಡಿದ ಎಚ್ಚರಿಕೆ ಏನು?
Recommended image2
ಪೋಷಕರೇ ಎಚ್ಚರ... ಫಿಟ್ ಇಲ್ಲದ ನೂರಾರು ಶಾಲಾ ಬಸ್‌ ಓಡುತ್ತಿವೆ..! ಮಕ್ಕಳ ಜೀವನದೊಂದಿಗೆ ಚೆಲ್ಲಾಟ
Recommended image3
ಸ್ಯಾಟಲೈಟ್ ಫೋಟೋದಾಗ ಹಸಿರು ಕಾಣಿಸ್ತೈತಿ ಅಂತಾ ಬರಪೀಡಿತ ಪಟ್ಯಾಗ ಕಲ್ಬುರ್ಗಿ ಕೈಬಿಟ್ರಲ್ಲೋ ಸರ್ಕಾರದವ್ರು!
Related Stories
Recommended image1
ಶಿವಮೊಗ್ಗ: ಅರಣ್ಯಾಧಿಕಾರಿಗಳ ದಾಳಿ, ರಿಪ್ಪನ್‌ಪೇಟೆಯಲ್ಲಿ 21 ಕೆ.ಜಿ. ಜಿಂಕೆ ಮಾಂಸ ಸೀಜ್‌; ಆರೋಪಿಗಳು ಎಸ್ಕೇಪ್
Recommended image2
ವಂದೇ ಭಾರತ್ ರೈಲಿನ 'ಅತ್ಯಾಧುನಿಕ ಸೌಲಭ್ಯ' ಕಟ್; ಆದಾಯಕ್ಕಾಗಿ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved