- Home
- Entertainment
- Sandalwood
- ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?
ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?
ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘ಶಂಕರಾಭರಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.

ಕನಸಿನ ಫಲ
‘ನಮಗೆ ಅನ್ನಿಸುವುದನ್ನು ಮಾಡಬೇಕಾದರೆ ವೇದಿಕೆ ನಮ್ಮದೇ ಆಗಿರಬೇಕು. ಹಾಗಾಗಿ ನಾನೇ ನಿರ್ಮಾಣ ಸಂಸ್ಥೆ ಕಟ್ಟಿ ಮಾಡಿದ ಸಿನಿಮಾ ಇದು. ಹಲವು ವರ್ಷಗಳ ಶ್ರಮದ, ಕನಸಿನ ಫಲ ಈ ಶಂಕರಾಭರಣ’. ಶೈನ್ ಶೆಟ್ಟಿ ಹೇಳಿದ ಮಾತಿದು. ಸಾಮಾನ್ಯವಾಗಿ ಪ್ರತಿಯೊಬ್ಬ ಕಲಾವಿದರೂ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಸುಮಂತ್ ಭಟ್ ನಿರ್ದೇಶನ
ಕೆಲವರು ಆ ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಶೈನ್ ಎರಡನೇ ದಾರಿ ಆರಿಸಿಕೊಂಡಿದ್ದಾರೆ. ಅವರ ತಂಡ ನಿರ್ಮಿಸಿರುವ, ಅವರು ನಾಯಕನಾಗಿ ನಟಿಸಿರುವ, ‘ಮಿಥ್ಯ’ ಖ್ಯಾತಿಯ ಸುಮಂತ್ ಭಟ್ ನಿರ್ದೇಶನದ ‘ಶಂಕರಾಭರಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ಮತ್ತು ಮೆಚ್ಚುಗೆ ಗಳಿಸಿದೆ.
ನಿರ್ಮಾಣ ಸಂಸ್ಥೆ ಮಾಡುವ ಧೈರ್ಯ
ರಿಷಬ್ ಶೆಟ್ಟಿಯವರ ಸಂಸ್ಥೆಯಲ್ಲಿ ನಾನೊಂದು ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ ಕತೆ ಮಾಡಿದ್ದಾಗ ಅವರು ಮೆಚ್ಚಿದ್ದರು. ನಾನೂ ಕತೆ ಮಾಡಬಹುದು ಅನ್ನುವ ಧೈರ್ಯ ಬಂದಿತ್ತು. ಆಮೇಲೆ ನಾನೇ ನಿರ್ಮಾಣ ಸಂಸ್ಥೆ ಮಾಡುವ ಧೈರ್ಯ ಮಾಡಿದೆ. ಹಲವು ಸಮಯ ಹೋರಾಟ ಮಾಡಿದರೂ ನಿರ್ಮಾಪಕರು ಸಿಗಲಿಲ್ಲ.
ಸಾರ್ಥಕತೆ ತಂದಿದೆ
ಕೊನೆಗೆ ಅಣ್ಣ ದಿವಾಕರ ಶೆಟ್ಟಿ ಜೊತೆಯಾದರು. ರಂಗಸ್ಥಳ ಸಂಸ್ಥೆ ಕಟ್ಟಿದೆವು. ನನ್ನ ಕತೆಯನ್ನು ಸುಮಂತ್ ಭಟ್ರಿಗೆ ಹೇಳಿ ಅವರೂ ಒಪ್ಪಿ ಸಿನಿಮಾ ಆಗಿದೆ. ಈ ಪಯಣ ನನಗೆ ತೃಪ್ತಿ ಕೊಟ್ಟಿದೆ. ಒಂದೊಳ್ಳೆ ಸಿನಿಮಾ ಮಾಡಿದ ಸಾರ್ಥಕತೆ ತಂದಿದೆ ಎನ್ನುತ್ತಾರೆ ಶೈನ್.ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಶೈನ್ ಬಸ್ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ.
ತನ್ವಿ ರಾವ್ ಚಿತ್ರದ ನಾಯಕಿ
ಕರಾವಳಿ ಭಾಗದ ಖಾಸಗಿ ಬಸ್‌ಗಳ ಜಗತ್ತು ಈ ಕತೆಯಲ್ಲಿ ಅನಾವರಣಗೊಳ್ಳಲಿದೆ. ತನ್ವಿ ರಾವ್ ಈ ಚಿತ್ರದ ನಾಯಕಿ. ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್‌ರಾಜ್ ಸಂಗೀತ ನೀಡಿರುವ ಈ ಚಿತ್ರ ನ.20ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

