ಭಾರತದ ಅತಿ ಉದ್ದದ ತಡೆರಹಿತ ರೈಲು! 528 ಕಿ.ಮೀ. ಚಲಿಸಿದರೂ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲೋದಿಲ್ಲ!
ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.
13

Image Credit : X
ನಮ್ಮ ದೇಶದಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕೆ ರೈಲು ಮೊದಲ ಆಯ್ಕೆಯಾಗಿರುತ್ತದೆ. ಗಂಟೆಗಟ್ಟಲೆ ಸಾಗುವ ಈ ಪ್ರಯಾಣದಲ್ಲಿ ರೈಲು ಹಲವು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಆದರೆ, ನಮ್ಮ ದೇಶದಲ್ಲಿ ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ, ಬರೋಬ್ಬರಿ 528 ಕಿಲೋಮೀಟರ್ ನಾನ್‌ಸ್ಟಾಪ್ ಆಗಿ ಚಲಿಸುವ ರೈಲು ಒಂದಿದೆ. ರಾಜಸ್ಥಾನದ ಕೋಟಾದಿಂದ ಗುಜರಾತ್‌ನ ವಡೋದರಾವರೆಗೆ ಸಾಗುವ ಆ ರೈಲಿನ ಬಗ್ಗೆ ಈಗ ನೋಡೋಣ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Gemini AI
ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ 528 ಕಿಲೋಮೀಟರ್ ಪ್ರಯಾಣಿಸುವ ಮೂಲಕ ತ್ರಿವೇಂಡ್ರಂ ರಾಜಧಾನಿ ಎಕ್ಸ್‌ಪ್ರೆಸ್ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲುಗಳು ಪ್ರತಿ 50 ರಿಂದ 100 ಕಿಲೋಮೀಟರ್‌ಗೆ ಒಮ್ಮೆ ಯಾವುದಾದರೂ ನಿಲ್ದಾಣದಲ್ಲಿ ನಿಲ್ಲುತ್ತವೆ. ಆದರೆ ತ್ರಿವೇಂಡ್ರಂ ರಾಜಧಾನಿ ಎಕ್ಸ್‌ಪ್ರೆಸ್ ಕೋಟಾ ಜಂಕ್ಷನ್‌ನಿಂದ ಹೊರಟರೆ, ಮತ್ತೆ 528 ಕಿಲೋಮೀಟರ್ ದೂರದಲ್ಲಿರುವ ವಡೋದರಾ ಜಂಕ್ಷನ್‌ನಲ್ಲೇ ನಿಲ್ಲುತ್ತದೆ. ಈ ಎರಡು ದೊಡ್ಡ ಜಂಕ್ಷನ್‌ಗಳ ನಡುವೆ ಇರುವ ಹತ್ತಾರು ಸಣ್ಣ, ದೊಡ್ಡ ರೈಲ್ವೆ ನಿಲ್ದಾಣಗಳನ್ನು ಈ ರೈಲು ಕ್ಯಾರೇ ಎನ್ನದೆ ಸಾಗುತ್ತದೆ.
33
Image Credit : Pixabay
ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಎರಡು ಕಮರ್ಷಿಯಲ್ ಹಾಲ್ಟ್‌ಗಳ ನಡುವೆ ಅತಿ ಹೆಚ್ಚು ದೂರ ನಾನ್‌ಸ್ಟಾಪ್ ಆಗಿ ಸಂಚರಿಸುವ ರೈಲು ಇದಾಗಿದೆ. ಮಧ್ಯದಲ್ಲಿ ಎಲ್ಲಿಯೂ ನಿಲ್ಲದೆ ಇರುವುದರಿಂದ, ಈ ರೈಲು ಸುಮಾರು 528 ಕಿಲೋಮೀಟರ್‌ಗಳ ಈ ದೈತ್ಯ ದೂರವನ್ನು ಕೇವಲ 5 ರಿಂದ 6 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ಸುದೀರ್ಘ ನಾನ್‌ಸ್ಟಾಪ್ ಪ್ರಯಾಣದಲ್ಲಿ ಪ್ರಯಾಣಿಕರು ಯಾವುದೇ ಅಡೆತಡೆ ಇಲ್ಲದೆ, ನಿರಂತರ ಪ್ರಯಾಣವನ್ನು ಆನಂದಿಸಬಹುದು. ರೈಲು ವೇಗವಾಗಿ ಚಲಿಸುವುದರಿಂದ ದಣಿವಾದ ಅನುಭವ ಆಗುವುದಿಲ್ಲ. ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

