ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ Dragon Boat Championship!
ರಾಜ್ಯದಲ್ಲೇ ಮೊದಲ ಬಾರಿಗೆ ಡ್ರ್ಯಾಗನ್ ಬೋಟ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಸ್ಪರ್ಧೆ ಉಡುಪಿಯಲ್ಲಿ ಆಯೋಜನೆಯಾಗಿದೆ.
ಉಡುಪಿ (ಫೆ.24) : ರಾಜ್ಯದಲ್ಲೇ ಮೊದಲ ಬಾರಿಗೆ ಡ್ರ್ಯಾಗನ್ ಬೋಟ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಸ್ಪರ್ಧೆ ಉಡುಪಿಯಲ್ಲಿ ಆಯೋಜನೆಯಾಗಿದೆ.
ಕಯಾಕಿಂಗ್ ಮತ್ತು ಕನೋಯಿಂಗ್ ಅಸೋಸಿಯೇಷನ್ ಕರ್ನಾಟಕ(Kayaking & Canoeing Association of Karnataka), ಭಾರತೀಯ ಕಯಾಕಿಂಗ್ ಹಾಗು ಕನೋಕಿಂಗ್ ಅಸೋಸಿಯೇಷನ್, ಜಿಲ್ಲಾಡಳಿತ, ಜಿ.ಪಂ, ಕ್ರೀಡೆ, ಯುವಜನ ಸಬಲೀಕರಣ ಇಲಾಖೆಯ ವತಿಯಿಂದ ಗುರುವಾರ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಸುವರ್ಣ ನದಿಯಲ್ಲಿ 11 ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್ (11th National Dragon Boat Championship) ಉದ್ಘಾಟನೆ(Inauguration)ಗೊಂಡಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ, ಇಂಡಿಯನ್ ಕನೊಯಿಂಗ್ ಅ್ಯಂಡ್ ಕಯಾಕಿಂಗ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಕುಷ್ವ(Prashant Kushwa), ನಮ್ಮ ದೇಶದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳಿದ್ದು, 4600 ಮಂದಿ ಕನೋಯಿಂಗ್, ಕಯಾಕಿಂಗ್ ಮುಂತಾದ ಜಲಸಾಹಸ ಕ್ರೀಡಾಪಟುಗಳನ್ನು ಸೇನೆಯಲ್ಲಿ ಕ್ರೀಡಾ ಮೀಸಲಾತಿಯಡಿ ನೇಮಿಸಲಾಗಿದೆ ಎಂದು ಹೇಳಿದರು.
ದಾಂಡೇಲಿ ವಾಟರ್ ಸ್ಪೋರ್ಟ್ಸ್: ಪರವಾನಗಿ ಪಡೆದು ಮತ್ತೆ ಪ್ರಾರಂಭಿಸಲು ಜಿಲ್ಲಾಡಳಿತ ಸೂಚನೆ
ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್(Dr HS Ballal) ಸ್ಪರ್ಧೆಯನ್ನು ಉದ್ಘಾಟಿಸಿದರು. ಉಡುಪಿ ಶಾಸಕ ರಘುಪತಿ ಭಟ್(MLA Raghupati bhat) ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಯಾಕಿಂಗ್ ಅ್ಯಂಡ್ ಕನೊಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಕ್ಯಾಪ್ಟನ್ ದಿಲೀಪ್ ಕುಮಾರ್, ಡ್ರ್ಯಾಗನ್ ಬೋಟ್ ರಾಷ್ಟ್ರೀಯ ತಂಡದ ನಾಯಕ ಮಂಜೀತ್ ಸಿಂಗ್(Manjeet singh), ಜಿಪಂ ಸಿಇಓ ಪ್ರಸನ್ನ ಎಚ್., ಎಸ್ಪಿ ಹಾಕೆ ಅಕ್ಷಯ್ ಮಚ್ಛಿಂದ್ರ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸ್ಪರ್ಧೆಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಬಿರ್ತಿ ಉಪಸ್ಥಿತರಿದ್ದರು.
ಇಂದು, ನಾಳೆ ಕರ್ನಾಟಕದಲ್ಲಿ ಜೆ.ಪಿ.ನಡ್ಡಾ ಸಮಾವೇಶ
ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ದೇಶದ 15 ರಾಜ್ಯಗಳ 480 ಪುರುಷ, 107 ಮಹಿಳಾ ಕ್ರೀಡಾಪಟುಗಳು, 24 ಅಧಿಕಾರಿಗಳು ಭಾಗವಹಿಸಿದ್ದಾರೆ. 200 ಮೀ, 500 ಮೀ, 2 ಕಿ.ಮೀ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, 10 ಜನರು ಮತ್ತು 20 ಜನರ ತಂಡಗಳು ಭಾಗವಹಿಸಲಿವೆ.