- Home
- Entertainment
- Cine World
- Toxic cast salary: ಕಿಯಾರ ಅಡ್ವಾನಿ, ರುಕ್ಮಿಣಿ ವಸಂತ್ ಅಥವಾ ನಯನತಾರಾ, ಯಾವ ನಟಿಯರಿಗೆ ಹೆಚ್ಚು ಸಂಭಾವನೆ..? ಸಿನಿಮಾ ಸಂಭಾವನೆ ವಿವರ ವೈರಲ್
Toxic cast salary: ಕಿಯಾರ ಅಡ್ವಾನಿ, ರುಕ್ಮಿಣಿ ವಸಂತ್ ಅಥವಾ ನಯನತಾರಾ, ಯಾವ ನಟಿಯರಿಗೆ ಹೆಚ್ಚು ಸಂಭಾವನೆ..? ಸಿನಿಮಾ ಸಂಭಾವನೆ ವಿವರ ವೈರಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಇಂದು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ತೆರೆ ಕಂಡಿದೆ. ಮೊದಲ ದಿನವೇ ಈ ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರು ಭಾಷೆಗಳಲ್ಲಿ ತೆರೆ ಕಂಡಿರುವ ಈ ಸಿನಿಮಾದಲ್ಲಿ ನಟಿಸಿರುವ ನಟ, ನಟಿಯರ ಸಂಬಳ ಎಷ್ಟು ನೋಡೋಣ ಬನ್ನಿ.

ಟಾಕ್ಸಿಕ್ ಸಿನಿಮಾ: ಯಾವ ನಟಿಗೆ ಎಷ್ಟು ಸಂಭಾವನೆ
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ತಾರಾ ನಟಿಯರ ದಂಡೇ ಇದೆ. ಈ ಚಿತ್ರದಲ್ಲಿ ಕಿಯಾರ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಮಾಧ್ಯಮಗಳ ವರದಿಯ ಪ್ರಕಾರ 50 ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗಿದ್ದರೇ, ಈ ಸಿನಿಮಾದಲ್ಲಿ ನಟಿಸಿರುವ ನಟಿಯರ ಪೈಕಿ ಯಾವ ನಟಿಗೆ ಹೆಚ್ಚು ಸಂಭಾವನೆ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.
ಕಿಯಾರ ಅಡ್ವಾಣಿಗೆ 15 ಕೋಟಿ ರುಪಾಯಿ
ಹೌಟರ್‌ಪ್ಲೈ(Hauterrfly) ಪೋರ್ಟಲ್ ವರದಿಯ ಪ್ರಕಾರ, ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿದ್ದಕ್ಕೆ ಕಿಯಾರ ಬರೋಬ್ಬರಿ 15 ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರ, ನಾದಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಕಿಯಾರ, ನಯನತಾರಾ ಅವರನ್ನೂ ಹಿಂದಿಕ್ಕಿ ಗರಿಷ್ಠ ಸಂಭಾವನೆಯನ್ನು ಈ ಸಿನಿಮಾದಲ್ಲಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ನಯನತಾರಾ ಅವರಿಗೆ 12-18 ಕೋಟಿ ರುಪಾಯಿ
ಇನ್ನು ದಕ್ಷಿಣ ಭಾರತದ ಮಹಿಳಾ ಸೂಪರ್‌ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಯನತಾರಾ ಅವರ ಸರಿಯಾದ ಸಂಭಾವನೆ ಅಧಿಕೃತವಾಗಿ ಬಹಿರಂಗವಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಯನತಾರಾ ಅವರು ಟಾಕ್ಸಿಕ್ ಸಿನಿಮಾ ನಟನೆಗೆ 12ರಿಂದ 18 ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿರಬಹುದು ಎನ್ನಲಾಗಿದೆ. ಸಿನಿಮಾದಲ್ಲಿ ನಯನತಾರಾ ಅವರು ಗಂಗಾ ಪಾತ್ರವನ್ನು ನಿರ್ವಹಿಸಿದ್ದಾರೆ.
ತಾರಾ ಸುತಾರಿಯಾ: 2-3 ಕೋಟಿ ರುಪಾಯಿ
ಟಾಕ್ಸಿಕ್ ಸಿನಿಮಾದಲ್ಲಿ ತಾರಾ ಸುತಾರಿಯಾ ರೆಬೆಕಾ ಪಾತ್ರವನ್ನು ನಿಭಾಯಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಟಾಕ್ಸಿಕ್ ಸಿನಿಮಾ ನಟನೆಗೆ ತಾರಾ ಸುತಾರಿಯಾಗೆ ಎರಡರಿಂದ ಮೂರು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಹುಮಾ ಖುರೇಷಿ: 2-3 ಕೋಟಿ ರುಪಾಯಿ
ಟಾಕ್ಸಿಕ್ ಸಿನಿಮಾದಲ್ಲಿ ಹುಮಾ ಖುರೇಷಿ ಎಲಿಜಬೆತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ನಟನೆಯ ಮೂಲಕವೇ ಮಿಂಚಿರುವ ಹುಮಾ ಖುರೇಷಿ, ಟಾಕ್ಸಿಕ್ ಸಿನಿಮಾಗಾಗಿ 2 ರಿಂದ ಮೂರು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ರುಕ್ಮಿಣಿ ವಸಂತ್: 3-5 ಕೋಟಿ ರುಪಾಯಿ
ಕನ್ನಡಿಗರ ನೂತನ ಕ್ರಶ್ ರುಕ್ಮಿಣಿ ವಸಂತ್, ಟಾಕ್ಸಿಕ್ ಸಿನಿಮಾದಲ್ಲಿ 'ಮೆಲ್ಲಿಸಾ' ಪಾತ್ರವನ್ನು ನಿಭಾಯಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ರುಕ್ಮಿಣಿ ವಸಂತ್ ಅವರಿಗೆ ಟಾಕ್ಸಿಕ್ ಸಿನಿಮಾದ ನಟಿಗೆ ಮೂರರಿಂದ ಐದು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಒಂದು ವಿಚಾರ ನೆನಪಿರಲಿ, ಮೇಲಿನ ಎಲ್ಲಾ ಅಂಕಿ-ಅಂಶಗಳನ್ನು ಟಾಕ್ಸಿಕ್ ಸಿನಿಮಾ ತಂಡದವರು ಅಧಿಕೃತವಾಗಿ ಖಚಿತಪಡಿಸಿಲ್ಲ. ಇವೆಲ್ಲಾ ಮಾಧ್ಯಮ ವರದಿಗಳಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

