ಟಾಕ್ಸಿಕ್ ಸಿನಿಮಾ ದೇಶಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಯಶ್ ಅಬ್ಬರ ಶುರುವಾಗಿದೆ. ಸಿನಿಮಾ ಪ್ರದರ್ಶನದ ನಡುವೆ ಚಿತ್ರಮಂದಿರಗಳಿಗೆ ಟಾಕ್ಸಿಕ್ ಸಿನಿಮಾ ತಂಡ ಸ್ಪಷ್ಟ ಸೂಚನೆ ನೀಡಿದೆ. ಟಾಕ್ಸಿಕ್ ಸಿನಿಮಾ ನೀಡಿದ ವಾರ್ನಿಂಗ್ ಏನು?

ಬೆಂಗಳೂರು (ಆ.26) ಟಾಕ್ಸಿಕ್ ಸಿನಿಮಾ ದೇಶಾದ್ಯಂತ ಅಬ್ಬರ ಆರಂಭಿಸಿದೆ. ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಿದೆ. ಸ್ಯಾಂಡಲ್‌‍ವುಡ್, ಬಾಲಿವುಡ್, ಹಾಲಿವುಡ್ ಸೇರಿದಂತೆ ಹಲವು ಸಿನಿ ರಂಗದಲ್ಲಿ ಯಶ್ ಟಾಕ್ಸಿಕ್ ಹೊಸ ಅಲೆ ಸೃಷ್ಟಿಸಿದೆ. ಇಂದು ಬೆಳಗ್ಗೆಯಿಂದಲೇ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಇದರ ನಡುವೆ ಟಾಕ್ಸಿಕ್ ಸಿನಿಮಾ ತಂಡ ಇದೀಗ ಚಿತ್ರಮಂದಿರಗಳಿಗೆ ಖಡಕ್ ಸೂಚನೆ ನೀಡಿದೆ. ಸಿನಿಮಾ ಪ್ರದರ್ಶನದ ನಡುವೆ ಸೂಚನೆ ಪಾಲಿಸುವಂತೆ ಹೇಳಿದೆ.

ಸಿನಿಮಾ ಥಿಯೇಟರ್‌ಗಳಿಗೆ ಕೊಟ್ಟ ಸೂಚನೆ ಏನು?

ಟಾಕ್ಸಿಕ್ ಸಿನಿಮಾ ಪ್ರದರ್ಶನ ಮಾಡುವಾಗ ಕೆಲ ನೀತಿ ಪಾಲಿಸುವಂತೆ ಸೂಚಿಸಿದೆ. ಪ್ರಮುಖವಾಗಿ ಸಿನಿಮಾ ಥಿಯೇಟರ್ ಸೌಂಡ್ ಸಿಸ್ಟಮ್ ಕುರಿತು ಖಡಕ್ ವಾರ್ನಿಂಗ್ ನೀಡಿದೆ ಟಾಕ್ಸಿಕ್ ಸಿನಿಮಾ ಪ್ರದರ್ಶನ ಮಾಡುವಾಗ ಸಂಪೂರ್ಮ ಸಿನಿಮಾದ ಆಡಿಯೋ (ಶಬ್ದ) 5.0 ಲೆವೆಲ್ ಇರುವಂತೆ ನೋಡಿಕೊಳ್ಳಲು ಸೂಚಿಸಿದೆ. ಡೋಲ್ಬಿ ಪ್ರೊಸೆಸರ್‌ 5.0 ಲೆವೆಲ್‌ನಲ್ಲಿದ್ದರೆ ಮಾತ್ರ ಈ ಸಿನಿಮಾದ ಶಬ್ದ ಸರಿಯಾಗಿ ಪ್ರೇಕ್ಷಕರಿಗೆ ಕೇಳಿಸಲಿದೆ. ಸಿನಿಮಾದ ಬಿಜಿಎಂ, ಡೈಲಾಗ್, ಹೆಜ್ಜೆ ಶಬ್ದಗಳು ಸ್ಪಷ್ಟವಾಗಿ ಪ್ರೇಕ್ಷಕರಿಗೆ ತಲುಪಲಿದೆ ಎಂದು ಚಿತ್ರ ತಂಡ ಹೇಳಿದೆ.

ಡೈಲಾಗ್ ಸ್ಪಷ್ಟತೆ ಕಳೆದುಕೊಳ್ಳದಂತೆ ಚಿತ್ರಮಂದಿರಗಳು ನೋಡಿಕೊಳ್ಳಬೇಕು ಎಂದು ಕೆವಿನ್ ಪ್ರೊಡಕ್ಷನ್ ಸೂಚನೆ ನೀಡಿದೆ. ಸೌಂಡ್ ಮಿಕ್ಸ್ ಡಾಲ್ಬಿ ಪ್ರೊಸೆಸರ್ ಫೇಡರ್ ಲೆವರ್ 5.0 ಇರುವಂತೆ ನೋಡಿಕೊಳ್ಳಿ. ಪ್ರತಿ ಸ್ಕ್ರೀನ್ ಪ್ಲೇಬ್ಯಾಕ್ 5.0 ಲೆವೆಲ್‌ನಲ್ಲೇ ಆರಂಭಿಸಬೇಕು. ಇನ್ನು ಕೆಲ ಸಿನಿಮಾ ಆಡಿಟೋರಿಯಂಗಳಲ್ಲಿ ವಾಲ್ಯೂಮ್ ಕಡಿಮೆಯಾಗಿದ್ದರೆ ಹೆಚ್ಚಿಸಹುದು. ಡಾಲ್ಬಿ ಪ್ರೊಸೆಸರ್ ಇಲ್ಲದ ಸಿನಿಮಾ ಮಂದಿರಗಳಲ್ಲಿ ಡೈಲಾಗ್ ಡೆಲಿವರಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಸೂಚಿಸಿದೆ.

ಸೌಂಡ್ ಕಡಿಮೆ ಮಾಡಬೇಡಿ

ಸಿನಿಮಾದ ಯಾವುದೇ ಸಮಯದಲ್ಲೂ 5.0 ಲೆವೆಲ್ ಸೌಂಡ್ ಕಡಿಮೆ ಮಾಡಬಾರದು.ಇದರಿಂದ ಡೈಲಾಗ್ ಸ್ಪಷ್ಟತೆ ಕಳೆದುಕೊಳ್ಳುತ್ತದೆ. ಕೆಲ ಶಾಂತ ದೃಶ್ಯಗಳಲ್ಲಿ ಪ್ರತಿ ಶಬ್ದ ಹಾಗೂ ಬಿಜಿಎಂ ಮುಖ್ಯ ಎಂದು ಟಾಕ್ಸಿಕ್ ತಂಡ ಹೇಳಿದೆ. ಶಿಫಾರಸ್ಸು ಮಾಡಿರುವ ಹಂತಕ್ಕಿಂತ ಸೌಂಡ್ ಕಡಿಮೆ ಮಾಡಬೇಡಿ ಎಂದು ಸೂಚನೆ ನೀಡಿದೆ.

ಪ್ರೇಕ್ಷಕರು ಟಾಕ್ಸಿಕ್ ಸಿನಿಮಾ ಆನಂದಿಸಲು ವಾಲ್ಯೂಮ್ ಮುಖ್ಯವಾಗಿದೆ. ಸಿನಿಮಾದಲ್ಲಿ ಹಲವು ಹೊಸ ಪ್ರಯೋಗ ಮಾಡಲಾಗಿದೆ. ಹೀಗಾಗಿ ಸಿನಿಮಾ ಥೇಯರ್ ಸೌಂಡ್ ಅತ್ಯಂತ ಮುಖ್ಯವಾಗಿದೆ. ಸೌಂಡ್ ಸ್ಪಷ್ಟತೆಯೊಂದಿಗೆ ಕೇಳಿಸಿದರೆ ಮಾತ್ರ ಟಾಕ್ಸಿಕ್ ಸಿನಿಮಾ ಅನುಭವಿಸಲು ಸಾಧ್ಯ ಎಂದು ಕೆವಿಎನ್ ಪ್ರೊಡಕ್ಷನ್ ಹೇಳಿದೆ.

ಟಾಕ್ಸಿಕ್ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕರ್ನಾಟಕದಾದ್ಯಂತ ಟಾಕ್ಸಿಕ್ ಸಿನಿಮಾ ಅಬ್ಬರಿಸುತ್ತಿದೆ. ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ಯಶ್ ಇದೀಗ ಪ್ಯಾನ್ ಗ್ಲೋಬಲ್ ಸ್ಟಾರ್ ಆಗಿ ಮಿಂಚಿದ್ದಾರೆ.