ಜೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಡ್ರ್ಯಾಗನ್’ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆಯಿದೆ. ಸಿನಿಮಾಗಳ ನಡುವೆ ಗ್ಯಾಪ್ ಬಂದ ಬಳಿಕ ಜೂ.ಎನ್‌ಟಿಆರ್ ನೀಡಿದ ಚಿತ್ರಗಳು ಯಶಸ್ಸು ಕಂಡಿವೆ.
ಯಂಗ್ ಟೈಗರ್ ಜೂ.ಎನ್‌ಟಿಆರ್ ಮತ್ತು ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಡ್ರ್ಯಾಗನ್’ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಪಕ್ಕಾ ಸೂಪರ್‌ಹಿಟ್ ಆಗಲಿದೆ ಎಂಬ ವಿಶ್ವಾಸ ಈಗಾಗಲೇ ತಾರಕ್ ಅಭಿಮಾನಿಗಳಲ್ಲಿ ಜೋರಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರೋದು ಜೂ.ಎನ್‌ಟಿಆರ್ ಅವರ ವೃತ್ತಿಜೀವನದ ಒಂದು ವಿಶೇಷ ಸಕ್ಸಸ್ ಸೆಂಟಿಮೆಂಟ್!
ಗ್ಯಾಪ್ ಬಳಿಕ ಬಂದ ಸಿನಿಮಾಗಳೆಲ್ಲ ಹಿಟ್?
ಜೂ.ಎನ್‌ಟಿಆರ್ ಅವರ ಕೆರಿಯರ್ ಗಮನಿಸಿದರೆ, ಸಿನಿಮಾಗಳ ನಡುವೆ ಲಾಂಗ್ ಗ್ಯಾಪ್ ತೆಗೆದುಕೊಂಡ ಬಳಿಕ ಅವರು ನೀಡಿದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ ಎಂಬುದು ಅಭಿಮಾನಿಗಳ ವಾದ. 2009ರ ಬಳಿಕ ಬಂದ ‘ಅದೂರ್ಸ್’, ‘ಬೃಂದಾವನಂ’ ಸಿನಿಮಾಗಳು ಉತ್ತಮ ಯಶಸ್ಸು ಕಂಡಿದ್ದವು. ಅದೇ ರೀತಿ 2018ರ ಬಳಿಕ ಬಂದ ‘ಆರ್‌ಆರ್‌ಆರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನೇ ಬರೆದಿತ್ತು.
ಇನ್ನು 2023ರಲ್ಲಿ ಯಾವುದೇ ಸಿನಿಮಾ ಮಾಡದೆ, 2024ರಲ್ಲಿ ‘ದೇವರ’ ಮೂಲಕ ಪ್ರೇಕ್ಷಕರ ಮುಂದೆ ಬಂದ ಜೂ.ಎನ್‌ಟಿಆರ್ ಮತ್ತೊಂದು ಬಿಗ್ ಹಿಟ್ ನೀಡಿದ್ದರು. ಹೀಗಾಗಿ ತಾರಕ್ ಸಿನಿಮಾಗಳ ನಡುವೆ ಗ್ಯಾಪ್ ಬಂದಾಗಲೆಲ್ಲ ದೊಡ್ಡ ಸಕ್ಸಸ್ ಸಿಗುತ್ತದೆ ಎಂಬ ಸೆಂಟಿಮೆಂಟ್ ಅಭಿಮಾನಿಗಳಲ್ಲಿ ಗಟ್ಟಿಯಾಗಿದೆ.
‘ಡ್ರ್ಯಾಗನ್’ಗೂ ಇದೇ ಸೆಂಟಿಮೆಂಟ್ ವರ್ಕೌಟ್ ಆಗುತ್ತಾ?
ಈಗ 2026ರಲ್ಲಿ ‘ಡ್ರ್ಯಾಗನ್’ ಸಿನಿಮಾ ಬಿಡುಗಡೆಯಾಗಲಿದ್ದು, ಮತ್ತೊಮ್ಮೆ ಇದೇ ಸಕ್ಸಸ್ ಸೆಂಟಿಮೆಂಟ್ ವರ್ಕೌಟ್ ಆಗಲಿದೆ ಎಂಬ ನಂಬಿಕೆ ಜೂ.ಎನ್‌ಟಿಆರ್ ಫ್ಯಾನ್ಸ್‌ಗಿದೆ. ಅದರಲ್ಲೂ ಪ್ರಶಾಂತ್ ನೀಲ್ ನಿರ್ದೇಶನ ಎನ್ನುವುದು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
1967ರ ಕಾಲಘಟ್ಟದಲ್ಲಿ ಕಥೆ
ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾ 1967ರ ಬ್ಯಾಕ್‌ಡ್ರಾಪ್‌ನಲ್ಲಿ ಸಾಗಲಿದೆ ಎನ್ನಲಾಗಿದೆ. ಇಂಟರ್‌ನ್ಯಾಷನಲ್ ಡ್ರಗ್ ಟ್ರೇಡ್ ಮಾಫಿಯಾ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಎನ್‌ಟಿಆರ್ ‘ಲುಗರ್’ ಎಂಬ ಕ್ರೂರ ಸ್ವಭಾವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಈಗಾಗಲೇ ಕುತೂಹಲ ಮೂಡಿಸಿದೆ.
ಭಾರೀ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ತಾರಕ್ ಅವರ ‘ಗ್ಯಾಪ್ ಸಕ್ಸಸ್ ಸೆಂಟಿಮೆಂಟ್’ ಕೂಡ ಮತ್ತೊಮ್ಮೆ ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಮುಂದಿನ ವರ್ಷ ಜೂನ್ 11ರಂದು ‘ಡ್ರ್ಯಾಗನ್’ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.


