ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೀಮ್ ಕರೋಲಿ ಬಾಬಾ ಆಧಾರಿತ ಹನುಮಾನ್ ಅಂಶ್ ಸಿನಿಮಾ ಈಗಾಗಲೇ 236 ಕೋಟಿ ರೂ ಬಾಚಿಕೊಂಡಿದೆ. ಇದೀಗ ಒಟಿಟಿಯಿಂದ ಬಿಗ್ ಆಫರ್ ನೀಡಿರುವುದಾಗಿ ವರದಿಯಾಗಿದೆ. ಆಫರ್ ಹಾಗೂ ಒಟಿಟಿ ರಿಲೀಸ್ ಡೇಟ್ ಯಾವಾಗ?

ಮುಂಬೈ (ಸೆ.13) ನೀಮ್ ಕರೋಲಿ ಬಾಬಾ ಆಧಾರಿತ ಹನುಮಾನ್ ಅಂಶ್ ಸಿನಿಮಾ ನಿರ್ಮಾಣ, ಬಿಡುಗಡೆ ಸಮಯದಲ್ಲೂ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಸಿನಿಮಾ ಪ್ರದರ್ಶನ ಕಾಣುತ್ತಿದ್ದಂತೆ ಹೊಸ ದಾಖಲೆ ನಿರ್ಮಾಣವಾಯಿತು. ಸಿನಿಮಾ ತಂಡ ಹೆಚ್ಚು ಜಾಹೀರಾತು, ಪ್ರಚಾರ ಮಾಡಲಿಲ್ಲ. ಆದರೆ ಸನಿಮಾ ನೋಡಿದ ಜನ ಮಾತನಾಡಿಕೊಂಡರು. ಚಿತ್ರಮಂದಿರಗಳನ್ನೇ ದೇವಾಲಯದ ರೀತಿ ನೋಡಿದರು. ಚಪ್ಪಲಿ ಬಿಚ್ಚಿಟ್ಟು ಸಿನಿಮಾ ನೋಡಿ ಭಕ್ತಪರವಶರಾದರು. ಪರಿಣಾಮ ಈ ಸಿನಿಮಾ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸುತ್ತಾ ಹೋಯಿತು. ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಹನುಮಾನ್ ಅಂಶ್ ಸಿನಿಮಾ ಇದೀಗ ವಿಶ್ವಾದ್ಯಂತ ಬರೋಬ್ಬರಿ 236 ಕೋಟಿ ರೂಪಾಯಿ ಬಾಚಿಕೊಂಡು ಮುನ್ನುಗ್ಗುತ್ತಿದೆ. ಇದರ ನಡುವೆ ಒಟಿಟಿಯಿಂದ ಬಿಗ್ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.

ಒಟಿಟಿಯಿಂದ 100 ಕೋಟಿ ರೂಪಾಯಿ ಆಫರ್?

ಹನುಮಾನ್ ಅಂಶ್ ಸಿನಿಮಾ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿಗಳು ಫುಲ್ ಆಗುತ್ತಿದೆ. ಟಿಕೆಟ್‌ಗಾಗಿ ಜನರು ಕಾಯುತ್ತಿದ್ದಾರೆ. ಒಟಿಟಿ ಲಿಸ್ಟ್‌ನಲ್ಲೇ ಇಲ್ಲದ ಹನುಮಾನ್ ಅಂಶ್ ಸಿನಿಮಾ ಇದೀಗ ಎಲ್ಲೆಡೆಯಿಂದ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಒಟಿಟಿ ಪ್ಲಾಟ್‌ಫಾರ್ಮ್ ಹನುಮಾನ್ ಅಂಶ್ ಸಿನಿಮಾ ತಂಡಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಒಟಿಟಿ ಮೂಲಕ ಸಿನಿಮಾ ರಿಲೀಸ್ ಮಾಡಲು ತಯಾರಿಗಳು ನಡೆಯುತ್ತಿದೆ.

ಹಿಂದಿ ಸಿನಿಮಾಗೆ ಚಿತ್ರಮಂದಿರದಲ್ಲಿ ಕನಿಷ್ಠ 8 ವಾರಗಳ ಕಾಲಾವಕಾಶ ನೀಡಲಾಗಿದೆ. ಬಳಿಕವಷ್ಟೇ ಒಟಿಟಿ ಮೂಲಕ ರಿಲೀಸ್ ಮಾಡಲು ಸಾಧ್ಯ. ಇದೀಗ ಒಟಿಟಿ ಪ್ಲಾಟ್‌ಫಾರ್ಮ್ ಈ ಅವಧಿ ಮುಗಿಯಲು ಕಾಯುತ್ತಿದೆ. ಅವಧಿಗೂ ಮೊದಲೇ 100 ಕೋಟಿ ರೂಪಾಯಿ ಮೂಲಕ ಡೀಲ್ ಖುದುರಿಸಲು ಮುಂದಾಗಿದೆ. ಆದರೆ ಚಿತ್ರ ತಂಡ 100 ಕೋಟಿ ರೂಪಾಯಿ ಡೀಲ್ ಒಪ್ಪಿಕೊಂಡಿದೆಯಾ? ಅನ್ನೋ ಕುರಿತು ಯಾವುದೇ ಮಾಹಿತಿ ಲಭ್ಯವಿದೆ. ಆದರೆ 100 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಒಟಿಟಿ ಡೀಲ್ ಕುರಿತು ಪ್ರತಿಕ್ರಿಯಿಸಿರುವ ಸಹ ನಿರ್ಮಾಪಕ ರಾಗಿಣಿ ಸನ್, ಒಟಿಟಿ ಕುರಿತು ಜನರು ತಲೆಕೆಡಿಸಿಕೊಳ್ಳಬೇಕಿಲ್ಲ. ಸದ್ಯ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಮಗೆ ಹೆಚ್ಚಿನ ಮಂದಿ ಸಿನಿಮಾ ನೋಡಬೇಕು. ಸಿನಿಮಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಬೇಕು. ಹನುಮಾನ್ ಅಂಶ್ ಸಿನಿಮಾಗೆ ಆಂಜನೇಯನ ಕೃಪೆ ಇದೆ. ಜನರು ಮೆಚ್ಚಿಕೊಂಡಿದ್ದಾರೆ.ನಮಗೆ ಇದು ಮುಖ್ಯ. ಸಿನಿಮಾ ನೋಡಿದ ಜನರೆ ಈ ಪ್ರಮೋಶನ್ ಮಾಡಿ ಗೆಲ್ಲಿಸಿದ್ದಾರೆ ಎಂದು ರಾಗಿಣಿ ಹೇಳಿದ್ದಾರೆ.

2 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡಿದ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಗಳಿಸಿತ್ತು. ಮೊದಲ ಎರಡು ವಾರದಲ್ಲಿ ಸಿನಿಮಾ 1.48 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಹಾಕಿ ಬಂಡವಾಳವೂ ಬಂದಿರಲಿಲ್ಲ. ಅಷ್ಟರಲ್ಲಿ ಸಿನಿಮಾ ಜನರ ಬಾಯಿಯಿಂದ ಬಾಯಿಗೆ ಹರಡಿತ್ತು. ಉತ್ತಮ ಸಿನಿಮಾ, ಬಾಬಾ ನೀಮ್ ಕರೋಲಿ ಕುರಿತ ಸಿನಿಮಾ ನೋಡಿ ಜನ ಮೆಚ್ಚುಗೆ ಸೂಚಿಸಿದ್ದು. ಜನರೇ ಪ್ರಚಾರ ಮಾಡಿದ್ದರು. ಹೀಗಾಗಿ 16ನೇ ದಿನದಿಂದ ಗಳಿಕೆ ಬದಲಾಯಿತು. 4ನೇ ವಾರ 61 ಕೋಟಿ ರೂಪಾಯಿ ಗಳಿಸಿದರೆ 5ನೇ ವಾರಕ್ಕೆ 90 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಇದೀಗ ದೇಶ ವಿದೇಶದಲ್ಲಿ ಒಟ್ಟು 236 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ.