
Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್ ಏನ್ ಹೇಳ್ತಿದೆ?
ಈ ಬಾರಿ ಯಶ್ ಜೊತೆ ಫೈಟ್ ಮಾಡೋಕೆ, ಯಶ್ ಸಾಮ್ರಾಜ್ಯಕ್ಕೆ ಸವಾಲು ಹಾಕೋಕೆ ಬಂದಿರೋದು ಲೇಡೀಸ್ ಗ್ಯಾಂಗ್! ಟೀಸರ್‌ನಲ್ಲಿ ನಾಯಕಿಯರ ಸೌಂದರ್ಯದ ಜೊತೆಗೆ ಅವರೊಳಗಿರೋ ಕ್ರೌರ್ಯ ಮತ್ತು ಸಾಹಸದ ಝಲಕ್ ಪ್ರೇಕ್ಷಕರ ಮೈ ರೋಮಾಂಚನಗೊಳಿಸುವಂತಿದೆ.
ಸ್ಯಾಂಡಲ್‌ವುಡ್ ನಿಂದ ಬಾಲಿವುಡ್, ಹಾಲಿವುಡ್‌ವರೆಗೆ ಇಡೀ ಜಗತ್ತೇ ಕಾತರದಿಂದ ಕಾಯ್ತಿರೋ ಸಿನಿಮಾ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ 'ಟಾಕ್ಸಿಕ್'. ಈ ಸಿನಿಮಾದ ಒಂದೊಂದು ಅಪ್‌ಡೇಟ್ ಕೂಡ ಹಿಸ್ಟರಿ ಕ್ರಿಯೇಟ್ ಮಾಡ್ತಿದೆ. ಅದರಲ್ಲೂ ಸದ್ಯ ರಿಲೀಸ್ಆಗಿರೋ ಟಾಕ್ಸಿಕ್‌ನ (Toxic) ಲೇಡೀಸ್ ಸ್ಪೆಷಲ್ ಟೀಸರ್ ಅಂತೂ ಇಡೀ ಸೆನ್ಸೇಷನ್ ಸೃಷ್ಟಿಸಿದೆ. ರಾಯನ ಸಾಮ್ರಾಜ್ಯಕ್ಕೆ ಬರೋಬ್ಬರಿ ಐದು ಜನ ಪವರ್‌ಫುಲ್ ನಾಯಕಿಯರು ಎಂಟ್ರಿ ಕೊಟ್ಟಿದ್ದಾರೆ.
ಮಕ್ಕಳು ನೋಡಲೇಬೇಡಿ.. ರಾಕಿಂಗ್ ಸ್ಟಾರ್ ವಾರ್ನಿಂಗ್..!
ರಾಯನ ಸಾಮ್ರಾಜ್ಯದಲ್ಲಿ ಗ್ಯಾಂಗ್ ಆಫ್ ಗರ್ಲ್ಸ್ ಮಿಂಚಿಂಗ್
ಹೌದು, ಸಿನಿಮಾ ಹೊಸ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಆರಂಭವಾಗೋದೇ ಒಂದು ಖಡಕ್ ವಾರ್ನಿಂಗ್‌ನೊಂದಿಗೆ. 'ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ, ವಯಸ್ಸಾದವರು ನಿಮ್ಮ ರಿಸ್ಕ್‌ನಲ್ಲಿ ನೋಡಿ' ಅಂತ ಚಿತ್ರತಂಡ ಮೊದಲೇ ಎಚ್ಚರಿಕೆ ಕೊಟ್ಟಿದೆ ಅಂದ್ರೆ, ಈ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ರಕ್ತಪಾತ, ವೈಲೆನ್ಸ್ ಮತ್ತು ಬ್ರೂಟಲ್ ಆ್ಯಕ್ಷನ್ ಇರಬಹುದು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ.
ಆದ್ರೆ ಈ ಬಾರಿ ಯಶ್ ಜೊತೆ ಫೈಟ್ ಮಾಡೋಕೆ, ಯಶ್ ಸಾಮ್ರಾಜ್ಯಕ್ಕೆ ಸವಾಲು ಹಾಕೋಕೆ ಬಂದಿರೋದು ಲೇಡೀಸ್ ಗ್ಯಾಂಗ್! ಟೀಸರ್‌ನಲ್ಲಿ ನಾಯಕಿಯರ ಸೌಂದರ್ಯದ ಜೊತೆಗೆ ಅವರೊಳಗಿರೋ ಕ್ರೌರ್ಯ ಮತ್ತು ಸಾಹಸದ ಝಲಕ್ ಪ್ರೇಕ್ಷಕರ ಮೈ ರೋಮಾಂಚನಗೊಳಿಸುವಂತಿದೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..