Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!

ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಕೊರಳಿಗೆ ಕಟ್ಟಿದ ಆ ಸುಂದರ ಮಂಗಳಸೂತ್ರವನ್ನು ಬೇರಾರೂ ವಿನ್ಯಾಸ ಮಾಡಿದ್ದಲ್ಲ, ಸ್ವತಃ ರಶ್ಮಿಕಾ ಮಂದಣ್ಣ. ತನ್ನ ಜೀವನದ ಅತ್ಯಂತ ವಿಶೇಷ ಕ್ಷಣಕ್ಕಾಗಿ ರಶ್ಮಿಕಾ ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಭಿರುಚಿಗೆ ತಕ್ಕಂತೆ ಮಂಗಳಸೂತ್ರ ಮಾಡಿಸಿಕೊಂಡಿದ್ದಾರೆ.. ಈ ಸ್ಟೋರಿ ನೋಡಿ!

Share this Video
  • FB
  • Linkdin
  • Whatsapp

ಸಾಮಾನ್ಯವಾಗಿ ಸ್ಟಾರ್ ನಟಿಯರ ಮದುವೆ ಎಂದರೆ ಅವರು ಧರಿಸುವ ಡ್ರೆಸ್, ಆಭರಣಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತದೆ. ಈಗ ರಶ್ಮಿಕಾ ಮಂದಣ್ಣ ಅವರ ಮದುವೆಯ ಮಂಗಳಸೂತ್ರದ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ರಶ್ಮಿಕಾ ಅವರ ಮದುವೆಯ ಲುಕ್ ವಿನ್ಯಾಸಗೊಳಿಸಿದ್ದ ಖ್ಯಾತ ಸ್ಟೈಲಿಸ್ಟ್ ಪ್ರಿಯಾ ಮಗಂತಿ, ಮದುವೆಯಾಗಿ ಮೂರು ತಿಂಗಳ ನಂತರ ಒಂದು ಇಂಟರೆಸ್ಟಿಂಗ್ ಗುಟ್ಟನ್ನು ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದು- ವಿಜಯ್ ದೇವರಕೊಂಡ ಅವರು ರಶ್ಮಿಕಾ ಕೊರಳಿಗೆ ಕಟ್ಟಿದ ಆ ಸುಂದರವಾದ ಮಂಗಳಸೂತ್ರವನ್ನು ಬೇರಾರೂ ವಿನ್ಯಾಸ ಮಾಡಿದ್ದಲ್ಲ, ಸ್ವತಃ ರಶ್ಮಿಕಾ ಮಂದಣ್ಣ ಅವರೇ ಡಿಸೈನ್ ಮಾಡಿದ್ದರಂತೆ! ಹೌದು, ತನ್ನ ಜೀವನದ ಅತ್ಯಂತ ವಿಶೇಷ ಕ್ಷಣಕ್ಕಾಗಿ ರಶ್ಮಿಕಾ ತುಂಬಾನೇ ಪ್ಲ್ಯಾನ್ ಮಾಡಿಕೊಂಡಿದ್ದರು. ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಡಿಸೈನ್‌ಗಳಿಗಿಂತ ಭಿನ್ನವಾಗಿ, ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಭಿರುಚಿಗೆ ತಕ್ಕಂತೆ ಮಂಗಳಸೂತ್ರ ಇರಬೇಕು ಎಂಬುದು ರಶ್ಮಿಕಾ ಅವರ ಹಠವಾಗಿತ್ತಂತೆ.

ಕ್ರಿಯೇಟಿವಿಟಿಯಲ್ಲೂ ರಶ್ಮಿಕಾ ಸೈ!
ನಟನೆಯಲ್ಲಿ ಮಾತ್ರವಲ್ಲದೆ ಡಿಸೈನಿಂಗ್‌ನಲ್ಲೂ ತಾನು ಸೈ ಎನ್ನುವುದನ್ನು ರಶ್ಮಿಕಾ ಸಾಬೀತುಪಡಿಸಿದ್ದಾರೆ. ರಶ್ಮಿಕಾ ನೀಡಿದ ಐಡಿಯಾಗಳು ಮತ್ತು ವಿನ್ಯಾಸವನ್ನು ನೋಡಿ ಸ್ವತಃ ಸ್ಟೈಲಿಸ್ಟ್ ಪ್ರಿಯಾ ಅವರೇ ಆಶ್ಚರ್ಯಚಕಿತರಾಗಿದ್ದರಂತೆ. ಸಾಂಪ್ರದಾಯಿಕ ಕಲೆ ಮತ್ತು ಆಧುನಿಕ ಶೈಲಿಯ ಮಿಶ್ರಣವನ್ನು ಹೊಂದಿದ್ದ ಆ ಮಂಗಳಸೂತ್ರವನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿತ್ತು. ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರ ಈ ಕ್ರಿಯೇಟಿವಿಟಿಗೆ ಫುಲ್ ಫಿದಾ ಆಗಿದ್ದರು ಎನ್ನಲಾಗಿದೆ.

ಇನ್ನೂ ನಿಂತಿಲ್ಲ ಸಂಭ್ರಮ!
ಉದಯಪುರದ ಅರಮನೆಯಲ್ಲಿ ನಡೆದ ಈ ಮದುವೆಯಲ್ಲಿ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಮತ್ತು ವಿಜಯ್ ಅವರ ರಾಯಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಮಾಂಗಲ್ಯದ ವಿಷಯ ಹೊರಬರುತ್ತಿದ್ದಂತೆ ಅಭಿಮಾನಿಗಳು "ರಶ್ಮಿಕಾ ಕೇವಲ ಗ್ರೇಟ್ ಆಕ್ಟ್ರೆಸ್ ಮಾತ್ರವಲ್ಲ, ಅದ್ಭುತ ಡಿಸೈನರ್ ಕೂಡ ಹೌದು" ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಿನಿಮಾ ಹಂಗಾಮ ವಿಡಿಯೋ ನೋಡಿ

Related Video