Karnataka News Live: ಕಾಡಾನೆ ದಾಳಿ: ಜೀಪ್ ರೇಸ್ನಲ್ಲಿದ್ದ ಯುವಕ ಅದೃಷ್ಟವಶಾತ್ ಪಾರು!
ಬೆಂಗಳೂರು: ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಏ.17ರಂದು ವಿಶೇಷಸಚಿವ ಸಂಪುಟ ಸಭೆ ನಿಗದಿಯಾಗಿರುವ ಬೆನ್ನಲ್ಲೇ ಗಣತಿಯಲ್ಲಿನ ಅಂಕಿ-ಅಂಶಗಳ ಬಗ್ಗೆ ವಿರೋಧ ಹೊಂದಿರುವ ಜಾತಿಗಳು ಚುರುಕಾಗಿವೆ. ವೀರಶೈವ ಲಿಂಗಾಯತ ಮಹಾಸಭೆ ಈ ವರದಿಯನ್ನು ವಿರೋಧಿಸುವ ಸಂಬಂಧ ನಿವೃತ್ತ ಜಡ್ಜ್ಗಳ ಸಮಿತಿ ರಚಿಸಲು ಮುಂದಾಗಿದೆ. ಒಕ್ಕಲಿಗರ ಮನದಿಂಗಿತ ಅರಿತು ಮುಂದೇನು ಮಾಡಬೇಕು ಎಂದು ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ಒಕ್ಕಲಿಗರ ಸಂಘವೂ ಮಂಗಳವಾರ ಸಭೆ ಸೇರುತ್ತಿದೆ. ಹೊಸದಾಗಿ ಸಮೀಕ್ಷೆ ಮಾಡಬೇಕು ಎಂದು ಸರ್ಕಾರದ ಹಾಲಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಳರ್ ಬಹಿರಂಗವಾಗಿ ಆಗ್ರಹಿಸಿದ್ದಾರೆ. ಹೀಗಾಗಿ ಗಣತಿ ಭವಿಷ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಅದನ್ನು ಧರ್ಮಾಧಾರಿತವಾಗಿ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ