ಜಯಂತ್ ಕೈಗೆ ಸಿಲುಕಿ ವಿಲವಿಲ ಒದ್ದಾಡಿದ ಶಾಂತಮ್ಮ; ಕಾಲ್ಗೆಜ್ಜೆ, ಚಾಕ್ಲೆಟ್‌ನಿಂದ ಜಾನು ಬದುಕಿರೋ ಸತ್ಯ ಬಯಲು
Lakshmi Nivasa Serial: ಜಯಂತ್‌ನಿಂದ ಶಾಂತಮ್ಮ ಪರದಾಟ, ಜಾನು ಬದುಕಿರುವ ಸತ್ಯ ಕಾಲ್ಗೆಜ್ಜೆ ಮತ್ತು ಚಾಕ್ಲೆಟ್‌ನಿಂದ ಬಯಲಾಗಿದೆ. ಅಜ್ಜಿಗೆ ಪ್ರಜ್ಞೆ ಬಂದಿದ್ದು, ಜಾನು ತನ್ನ ಕಥೆ ಹೇಳಿಕೊಂಡಿದ್ದಾಳೆ.

Jahnavi's secret revealed: ಜಯಂತ್‌ನ ಕೈಗೆ ಸಿಲುಕಿರುವ ಶಾಂತಮ್ಮ ವಿಲವಿಲ ಒದ್ದಾಡುತ್ತಿದ್ದಾಳೆ. ನಿದ್ದೆ ಮಾಡುತ್ತಿದ್ದ ಶಾಂತಮ್ಮಳನ್ನು ತನ್ನೊಂದಿಗೆ ಜಯಂತ್ ಕರೆದುಕೊಂಡು ಬಂದಿದ್ದಾನೆ. ದಾರಿಯುದ್ದಕ್ಕೂ ಜಾನು ಹಾಗೆ, ಹೀಗೆ ಅಂತ ಜಯಂತ್ ಹುಚ್ಚು ಮಾತುಗಳನ್ನು ಕೇಳಿ ಶಾಂತಮ್ಮ ಗಾಬರಿಗೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಜಾನು ಹೇಳಿರುವ ಹಾಡನ್ನು ಸಹ ಕೇಳಿಸಿದ್ದಾನೆ. ಮನೆಗೆ ಹೋದ ಕೂಡಲೇ ಜಾನುಗೆ ಮತ್ತೊಂದು ಹಾಡು ಹೇಳಿಸೋಣ ಎಂದಿದ್ದಾನೆ. ಲಕ್ಷ್ಮೀ ನಿವಾಸಕ್ಕೆ ಬಂದ ಕೂಡಲೇ ಕಾರ್‌ನಿಂದ ಇಳಿಯಲು ಶಾಂತಮ್ಮ ಹಿಂದೇಟು ಹಾಕಿದ್ದಾಳೆ. ಶಾಂತಮ್ಮ ನಡೆಗೆ ಒಂದು ಕ್ಷಣ ಕೋಪಗೊಳ್ಳುವ ಜಯಂತ್ ಮರುಕ್ಷಣವವೇ ಬದಲಾಗುತ್ತಾನೆ. ನೀನು ಹೋಗಿ ಜಯಂತ್‌ನೊಂದಿಗೆ ಮಾತನಾಡು. ಮಧ್ಯರಾತ್ರಿ ನಾವಿಬ್ಬರು ಈ ರೀತಿ ಹೋಗುವುದು ತಪ್ಪಾಗುತ್ತದೆ. ಜಾನು ಮತ್ತು ನೀನು ಮಾತನಾಡುವ ಸಂದರ್ಭದಲ್ಲಿ ನಿಮ್ಮಿಬ್ಬರ ಮಧ್ಯೆ ನಾನೇಕೆ? ಇನ್ನೊಮ್ಮೆ ನಿನ್ನ ಹೆಂಡತಿಯನ್ನು ಭೇಟಿಯಾಗುತ್ತೇನೆ. ನೀನು ಹೋಗಿ ಬಾ ಎಂದು ಶಾಂತಮ್ಮ ತಪ್ಪಿಸಿಕೊಂಡಿದ್ದಾಳೆ. ಜಯಂತ್‌ನೊಂದಿಗಿದ್ರೆ ನನಗೆ ಹುಚ್ಚು ಹುಡಿಯೋದು ಖಂಡಿತ ಎಂದು ಶಾಂತಮ್ಮ ಅಂದ್ಕೊಂಡಿದ್ದಾಳೆ. ಇತ್ತ ಜಯಂತ್ ಬಂದ ಕೂಡಲೇ ಅಜ್ಜಿ ಕೋಣೆಯಲ್ಲಿ ಜಾನು ಅಡಗಿ ಕುಳಿತಿದ್ದಾಳೆ.
ವಿಶ್ವನ ಜಗತ್ತಿಗೆ ಜಾನು ಎಂಟ್ರಿ ಕೊಟ್ಟ ಜಾಹ್ನವಿಯನ್ನು ಆತನ ತಾಯಿ ಲಲಿತಾ ಭೇಟಿಯಾಗಿದ್ದಾಳೆ. ಜಾನು ಉಳಿದುಕೊಂಡಿರುವ ಕ್ವಾಟರ್ಸ್‌ಗೆ ಬಂದಿರುವ ಲಲಿತಾ, ನೀನು ನನ್ನ ಮಾಂಗಲ್ಯವನ್ನು ಉಳಿಸಿಕೊಟ್ಟ ದೇವತೆ. ನನಗೆ ನನ್ನ ಯಜಮಾನ್ರು ಅಂದ್ರೆ ಪ್ರಾಣ. ನಿನಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ಎಂದು ಜಾನು ಕೈಗಳನ್ನು ಹಿಡಿದುಕೊಂಡು ಕಣ್ಣೀರು ಹಾಕಿದ್ದಾಳೆ.
ಸುಳ್ಳು ಹೇಳಿದ ಜಾನು!
ಪತಿ ಬಗ್ಗೆ ಕೇಳಿದ್ದಕ್ಕೆ ಅವರ ಬಗ್ಗೆ ನನಗೆ ಮಾತನಾಡಲು ಇಷ್ಟವಿಲ್ಲ. ಎರಡು ವರ್ಷದ ಹಿಂದೆ ಅಪ್ಪ-ಅಮ್ಮ ತೀರಿಕೊಂಡು ಎಂದು ಜಾಹ್ನವಿ ಸುಳ್ಳು ಹೇಳಿದ್ದಾಳೆ. ಆದ್ರೆ ಹೆಚ್ಚು ಮಾತನಾಡಲು ಹಿಂದೇಟು ಹಾಕಿದ್ದರಿಂದ ಇದನ್ನು ಅರ್ಥ ಮಾಡಿಕೊಂಡ ಲಲಿತಾ, ನಿನ್ನ ಖಾಸಗಿ ಜೀವನದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಎಂದು ಊಟ ತಂದುಕೊಟ್ಟಿದ್ದಾಳೆ. ಇಲ್ಲಿಯೂ ತನ್ನ ಹೆಸರು ಚಂದನಾ ಎಂದು ಜಾನು ಹೇಳಿದ್ದಾಳೆ.
ಕೊನೆಗೂ ಅಜ್ಜಿಗೆ ಬಂತು ಪ್ರಜ್ಞೆ
ಅಮ್ಮನ ಮನೆಗೆ ಬಂದ ಜಾನು ತನ್ನ ಫೋಟೋಗೆ ಪೂಜೆ ಮಾಡಿರೋದನ್ನು ಕಂಡು ಶಾಕ್ ಆಗಿ ಕಣ್ಣೀರು ಹಾಕಿದ್ದಾಳೆ. ಹಾಲು-ತುಪ್ಪ ಕಾರ್ಯಕ್ಕಿರಿಸಿದ ಎಡೆಯನ್ನು ಜಾನು ತಿಂದು, ಅಜ್ಜಿ ಕೋಣೆಗೆ ಬಂದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅಷ್ಟರಲ್ಲಿಯೇ ಅಜ್ಜಿಗೆ ಪ್ರಜ್ಞೆ ಬಂದಿದ್ದನ್ನು ಕಂಡು ಜಾನು ಖುಷಿಯಾಗಿದ್ದಾಳೆ. ಈ ವೇಳೆ ತಾನು ಸಮುದ್ರಕ್ಕೆ ಜಿಗಿದಿದ್ದು ನಂತರ ಬದುಕುಳಿದಿದ್ದು ಮತ್ತು ಮಗುವನ್ನು ಕಳೆದುಕೊಂಡಿರುವ ವಿಷಯವನ್ನು ಅಜ್ಜಿ ಮುಂದೆ ಜಾನು ಹೇಳಿಕೊಂಡಿದ್ದಾಳೆ. ನೀನು ಬಂದಿರೋ ವಿಷಯವನ್ನು ಮನೆಯವರಿಗೆ ಹೇಳಿ ಎಂದಾಗ ಜಾನು ಬೇಡ ಅಂದಿದ್ದಾಳೆ.
ಇದನ್ನೂ ಓದಿ: ಇವಳ ಬಟ್ಟೆ ಬಿಚ್ಚೋಕೆ ರೆಡಿನಾ ಅಂತಾರೆ: ನೋವು ತೋಡಿಕೊಂಡ ಅಣ್ಣಯ್ಯ ಸೀರಿಯಲ್ ಜಿಮ್ ಸೀನಾ!
ಅಜ್ಜಿಯೂ ಸಹ ತನಗೆ ಪ್ರಜ್ಞೆ ಬಂದರೂ ಜಯಂತ್ ಭಯದಿಂದ ನಾಟಕ ಮಾಡುತ್ತಿದ್ದೇನೆ. ಆದ್ರೆ ನನಗೆ ಹುಷಾರು ಆಗಿಲ್ಲ ಅಂತ ಮಗ ತುಂಬಾ ಹಣ ಖರ್ಚು ಮಾಡುತ್ತಿದ್ದಾನೆ. ಅದನ್ನು ನೋಡಿ ನನಗೆ ನೋವು ಆಗುತ್ತಿದೆ ಎಂದು ಅಜ್ಜಿ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಏನಾದ್ರೂ ಒಂದು ವ್ಯವಸ್ಥೆ ಮಾಡೋಣ. ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು. ಜಯಂತ್ ಎಲ್ಲೆಲ್ಲಿ ಕ್ಯಾಮೆರಾ ಇರಿಸುತ್ತಾರೆ ಎಂದು ಗೊತ್ತಿರಲ್ಲ. ನಾನು ಹೇಳುವರೆಗೂ ಪ್ರಜ್ಞೆ ಇಲ್ಲದಂತಿರು ಎಂದು ಜಾನು ಹೇಳಿದ್ದಾಳೆ.
ಮತ್ತಷ್ಟು ಬಲವಾಯ್ತು ಜಯಂತ್ ಅನುಮಾನ!
ಇತ್ತ ತನ್ನ ಚಿನ್ನುಮರಿ ಬದುಕಿರುವ ಸತ್ಯ ಜಯಂತ್ ಮುಂದೆ ಬಯಲಾಗಿದೆ. ಅಜ್ಜಿ ಕೋಣೆಯಲ್ಲಿ ಬಂದ ಜಯಂತ್‌ಗೆ ಅಲ್ಲಿ ತನ್ನ ಚಿನ್ನುಮರಿ ಧರಿಸಿದ್ದ ಕಾಲ್ಗೆಜ್ಜೆ ಸಿಕ್ಕಿದೆ. ಇದರಿಂದ ಜಯಂತ್‌ನ ಅನುಮಾನ ಮತ್ತಷ್ಟು ದೃಢವಾಗಿದೆ. ಬೆಳಗ್ಗೆ ಲಕ್ಷ್ಮೀ ನಿವಾಸದಿಂದ ಹೊರಡುವಾಗ ಎದುರಾದ ಬಾಲಕ, ಜಾನು ಅಕ್ಕ ಎಲ್ಲಿ ಎಂದು ಜಯಂತ್‌ನನ್ನು ಕೇಳಿದ್ದಾನೆ. ಇದಕ್ಕೆ ಜಾನು ಸತ್ತಿದ್ದಾಳೆ ಎಂದಿದ್ದಕ್ಕೆ ಸುಳ್ಳು ಹೇಳಬೇಡಿ. ನಿನ್ನೆ ರಾತ್ರಿ ಭೇಟಿಯಾಗಿ ಚಾಕ್ಲೆಟ್ ನೀಡಿ ಚೆನ್ನಾಗಿ ಓದಬೇಕು ಎಂದು ಹೇಳಿದ್ದಾಳೆ. ಈ ವಿಷಯ ತಿಳಿಯುತ್ತಲೇ ಶಾಂತಮ್ಮ ಮತ್ತು ಜಯಂತ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ!