ಹಾರ್ದಿಕ್ ಪಾಂಡ್ಯ ಅವರ ಗೆಳತಿ ಎನ್ನಲಾದ ಮಾಡೆಲ್ ಜಾಸ್ಮಿನ್ ವಾಲಿಯಾ ದೆಹಲಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ವಾಂಖೆಡೆ ಸ್ಟೇಡಿಯಂನಲ್ಲೂ ಕಾಣಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ಆಫೀಶಿಯಲ್ ಬಸ್‌ನಲ್ಲಿ ಹೋಗುತ್ತಿದ್ದಾಗ ಇವರಿಬ್ಬರ ಡೇಟಿಂಗ್ ಸುದ್ದಿ ಹಬ್ಬಿತ್ತು. ಮುಂಬೈ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದೆ.

ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್‌ ತಂಡದ ಕ್ಯಾಪ್ಟನ್ ಆಗಿರುವ ಹಾರ್ದಿಕ್ ಪಾಂಡ್ಯ ಅವರ ಹೊಸ ಗರ್ಲ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಮಾಡೆಲ್ ಜಾಸ್ಮಿನ್ ವಾಲಿಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದಾರೆ. ಇದೀಗ ಮುಂಬೈ ತಂಡವು ದೆಹಲಿ ವಿರುದ್ಧದ ಪಂದ್ಯವನ್ನು ಆಡಲು ಬಂದಿದ್ದ ವೇಳೆ ದೆಹಲಿ ಸ್ಟೇಡಿಯಂನಲ್ಲಿ ಮುಂಬೈ ತಂಡಕ್ಕೆ ಚೀಯರ್ ಮಾಡುತ್ತಿರುವುದು ಕಂಡುಬಂದಿದೆ. 

ದೆಹಲಿಯಲ್ಲಿ ವಾಸಿಸುವ ಬಹುತೇಕರು ದೆಹಲಿ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದರೆ, ಮಾಡೆಲ್ ನಟಿ ಜಾಸ್ಮಿನ್ ವಾಲಿಯಾ ಮುಂಬೈ ಇಂಡಿಯನ್ಸ್ ಮ್ಯಾಚ್‌ನಲ್ಲಿ ಜಾಸ್ಮಿನ್ ಹಾರ್ದಿಕ್‌ಗೆ ಸಪೋರ್ಟ್ ಮಾಡುತ್ತಿದ್ದರು. ಪಾಂಡ್ಯ ಜೊತೆಗಿನ ಸಂಬಂಧದ ಜೊತೆಗಿರುವ ಜಾಸ್ಮಿನ್ ತನ್ನ ಸೌಂದರ್ಯದಿಂದ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ. ಅವರ ಸ್ಟೈಲ್ ಬಾಲಿವುಡ್ ಹೀರೋಯಿನ್‌ಗಿಂತ ಕಮ್ಮಿ ಏನಿಲ್ಲ. ಜಾಸ್ಮಿನ್‌ನ ಒಂದೊಂದು ಲುಕ್‌ಗೂ ಫ್ಯಾನ್ಸ್ ಫಿದಾ ಆಗಿದ್ದಾರೆ. ಈಗ ದೆಹಲಿಯಲ್ಲಿ ಸುತ್ತಾಡ್ತಿರೋದು ಕಾಣ್ತಿದೆ. ಅವರೇ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಜಾಸ್ಮಿನ್ ವಾಲಿಯಾ ದಿಢೀರ್ ದೆಹಲಿಗೆ ಯಾಕೆ ಬಂದಿದ್ರು?
ಜಾಸ್ಮಿನ್ ವಾಲಿಯಾ ಸೋಮವಾರ ತಮ್ಮ ಆಫೀಶಿಯಲ್ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ವೇಳೆ ಅವರು ದೆಹಲಿಯ ಇಂಡಿಯಾ ಗೇಟ್ ಬಳಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಸುಂದರವಾದ ಮುಖವನ್ನು ನೋಡಿದರೆ ಚಂದಿರನೇ ದರೆಗೆ ಬಂದು ಅರಳಿದಂಗಿದೆ. ಒಂದೆರಡಲ್ಲ, ಬರೋಬ್ಬರಿ 16 ಫೋಟೋಗಳನ್ನು ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಕೆಲವೊಂದರಲ್ಲಿ ಇಂಡಿಯಾ ಗೇಟ್ ಬಳಿ ಕಾಣಿಸಿಕೊಂಡರೆ, ಇನ್ನು ಕೆಲವು ಫೋಟೋಗಳಲ್ಲಿ ಪುಸ್ತಕದ ಅಂಗಡಿ ಬಳಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಅವರ ಪೋಸ್ಟ್‌ಗೆ ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡ್ತಿದ್ದಾರೆ. ಎಲ್ಲರೂ ಹಾರ್ದಿಕ್ ಜೊತೆಗಿನ ಸಂಬಂಧದ ಬಗ್ಗೆ ಮಾತಾಡ್ತಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಹೊಸ ಗೆಳತಿ ನಿವ್ವಳ ಮೌಲ್ಯ ಎಷ್ಟು? ಪಾಂಡ್ಯ ಸಿಕ್ಸ್‌ಗೆ ಜಾಸ್ಮಿನ್ ಕ್ಲೀನ್ ಬೌಲ್ಡ್!

MI ಮತ್ತು DC ನಡುವೆ ದೆಹಲಿಯಲ್ಲಿ ಪಂದ್ಯ: ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ 2025ರ 29ನೇ ಪಂದ್ಯ ನಡೆದಿತ್ತು. ಈ ಮ್ಯಾಚ್ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದೆ. ಜಾಸ್ಮಿನ್ ವಾಲಿಯಾ ದಿಢೀರ್ ದೆಹಲಿಗೆ ಬಂದಿದ್ದು, ಹಾರ್ದಿಕ್‌ಗೆ ಸಪೋರ್ಟ್ ಮಾಡೋಕೆ ಬಂದಿರಬಹುದು. ಇದಕ್ಕೂ ಮುಂಚೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲೂ ಅವರು ಕಾಣಿಸಿಕೊಂಡಿದ್ದರು. ಆಮೇಲೆ ಮುಂಬೈ ಇಂಡಿಯನ್ಸ್ ಆಫೀಶಿಯಲ್ ಬಸ್‌ನಲ್ಲಿ ಹೋಗುತ್ತಿದ್ದರು. ಇದಾದ ನಂತರವೇ ಇವರಿಬ್ಬರ ನಡುವಿನ ಡೇಟಿಂಗ್ ಸುದ್ದಿ ಜೋರಾಗಿದೆ.

View post on Instagram

18ನೇ ಸೀಸನ್‌ನಲ್ಲಿ ಡೆಲ್ಲಿಗೆ ಮೊದಲ ಸೋಲುಣಿಸಿದ ಮುಂಬೈ: ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೀಸನ್‌ನ ಎರಡನೇ ಗೆಲುವು ದಾಖಲಿಸಿದೆ. ಪಂದ್ಯ ಸಖತ್ ರೋಚಕವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 205 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡ 193 ರನ್‌ಗಳಿಗೆ ಆಲೌಟ್ ಆಯಿತು. 19ನೇ ಓವರ್‌ನಲ್ಲಿ ಭರ್ಜರಿ ತಿರುವ ಪಡೆದುಕೊಂಡಿತು. ಕೊನೆಯ ಎರಡು ಓವರ್ ಬಾಕಿ ಇರುವಾಗ ಒಂದಾದ ಮೇಲೆ ಒಂದರಂತೆ ಮೂವರು ಬ್ಯಾಟ್ಸ್‌ಮನ್‌ಗಳು ರನ್ ಔಟ್ ಆದರು. ಬುಮ್ರಾ ಓವರ್‌ನಲ್ಲಿ ಕೊನೆಯ 3 ಬಾಲ್‌ಗಳಲ್ಲಿ ಮೂರು ರನ್ ಔಟ್ ವಿಕೆಟ್ ಬಿತ್ತು. ಇದು ದೊಡ್ಡ ರೋಚಕ ಕ್ಷಣವಾಗಿತ್ತು. ಇದರಿಂದ ಮುಂಬೈ 12 ರನ್‌ಗಳಿಂದ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೆ ಬಂದಿತು. ಮುಂಬೈ ಇಂಡಿಯನ್ಸ್ ಟೀಮ್ ಈವರೆಗೆ 6 ಮ್ಯಾಚ್ ಆಡಿದ್ದು, ಅದರಲ್ಲಿ 4 ಸೋತಿದೆ ಮತ್ತು 2 ಗೆದ್ದಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರೂಮರ್ಡ್ ಗರ್ಲ್ ಫ್ರೆಂಡ್ ಬೆಂಕಿ ಫೋಟೋ ವೈರಲ್!