ಕಾಲು ಮುರಿದ್ರೂ ವೀಲ್ ಚೇರ್ ನೀಡದ ಏರ್ ಇಂಡಿಯಾ, ಸಿಬ್ಬಂದಿ ವಿರುದ್ಧ ನಟನ ಆಕ್ರೋಶ

ಹಾಸ್ಯನಟ ವೀರ್ ದಾಸ್ ಗೆ ಏರ್ ಇಂಡಿಯಾ ವಿಮಾನದಲ್ಲಿ ಕೆಟ್ಟ ಅನುಭವ ಆಗಿದೆ. ಅದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 

Comedian Veer Das rages against Air India for not providing wheelchairs

ಹಾಸ್ಯನಟ  ವೀರ್ ದಾಸ್ (Comedian Veer Das) ಒಂದಲ್ಲ ಒಂದ್ ಕಾರಣಕ್ಕೆ ಆಗಾಗ ಸುದ್ದಿಯಲ್ಲಿರ್ತಾರೆ. ಈಗ ಅವರ ಮತ್ತೊಂದು ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಆ ಪೋಸ್ಟ್ ನಲ್ಲಿ ವೀರ್ ದಾಸ್ ಏರ್ ಇಂಡಿಯಾ (Air India) ವಿಮಾನದಲ್ಲಿ ತಮಗಾದ ಕೆಟ್ಟ ಅನುಭವವನ್ನು ಬರೆದುಕೊಂಡಿದ್ದಾರೆ. ಆದ್ರೆ ಇಲ್ಲಿಯವರೆಗೂ ಏರ್ ಇಂಡಿಯಾ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.  

ವೀರ್ ದಾಸ್ ತಮ್ಮ ಪತ್ನಿ ಶಿವಾನಿ ಮಾಥುರ್ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಶಿವಾನಿ ಕಾಲು ಮುರಿದುಕೊಂಡಿದ್ದು, ನಡೆಯೋದು ಕಷ್ಟ. ಇದೇ ಕಾರಣಕ್ಕೆ ವೀರ್ ದಾಸ್ ವೀಲ್ ಚೇರ್ ಕೂಡ ಬುಕ್ ಮಾಡಿದ್ದರು. ಆದ್ರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶಿವಾನಿಗೆ ವೀಲ್ ಚೇರ್ ನೀಡಿಲ್ಲ. ನೋವಿನ ಮಧ್ಯೆಯೂ ಶಿವಾನಿ ಮೆಟ್ಟಿಲು ಇಳಿಯಬೇಕಾಯ್ತು. ಪಾರ್ಕಿಂಗ್ ಪ್ಲೇಸ್ ತಲುಪುವವರೆಗೂ ಯಾವುದೇ ಸಿಬ್ಬಂದಿ ವೀರ್ ದಾಸ್ ಮತ್ತು ಶಿವಾನಿಗೆ ನೆರವಾಗಲಿಲ್ಲ.  ಅಷ್ಟೇ ಅಲ್ಲ, ವೀರ್ ದಾಸ್ 50 ಸಾವಿರ ರೂಪಾಯಿ ನೀಡಿ ಬುಕ್ ಮಾಡಿದ್ದ ವಿಮಾನದ ಸೀಟ್ ಕೂಡ ಚೆನ್ನಾಗಿರಲಿಲ್ಲ ಎಂದು ವೀರ್ ದಾಸ್ ಬರೆದಿದ್ದಾರೆ. ಸಿಕ್ಕ ಸೀಟು ಮುರಿದುಹೋಗಿತ್ತು. ಸೀಟಿನ ಲೆಗ್ ರೆಸ್ಟ್ ಕೂಡ ಮುರಿದುಹೋಗಿತ್ತು. ಸೀಟು ಓರೆಯಾಗಿತ್ತು ಎಂದು ವೀರ್ ದಾಸ್ ಹೇಳಿದ್ದಾರೆ. 

ಈ ನಟಿಯ ತಂದೆ ಇಂದಿರಾ ಗಾಂಧಿಯ ಪರ್ಸನಲ್‌ ಪೈಲಟ್‌ ಆಗಿದ್ದರು!

ವೀರ್ ದಾಸ್ ಪೋಸ್ಟ್ ನಲ್ಲಿ ಏನಿದೆ? :  ಪ್ರಿಯ ಏರ್ ಇಂಡಿಯಾ, ನಿಮ್ಮಲ್ಲಿ ಅತ್ಯುತ್ತಮ ಕ್ಯಾಬಿನ್ ಸಿಬ್ಬಂದಿ ಇದ್ದಾರೆ ಎಂದು ನಾನು ನಂಬುತ್ತೇನೆ. ಈ ಪೋಸ್ಟ್ ಬರೆಯಲು ನನಗೆ ತುಂಬಾ ದುಃಖವಾಗಿದೆ. ನನ್ನ ಹೆಂಡತಿ ಮತ್ತು ನಾನು ವೀಲ್ಚೇರ್ ಬುಕ್ ಮಾಡಿದ್ದೆವು. ಅವಳ ಕಾಲು ಮುರಿದಿದ್ದು, ಆಕೆಗೆ ನಡೆಯಲು ಸಾಧ್ಯವಾಗ್ತಿಲ್ಲ. ನಾವು ದೆಹಲಿಗೆ ಹೋಗಲು 50 ಸಾವಿರ ರೂಪಾಯಿ ನೀಡಿ ಟಿಕೆಟ್ ಬುಕ್ ಮಾಡಿದ್ದೆವು.  ಆದ್ರೆ ನಮಗೆ ವೀಲ್ ಚೇರ್ ಸಿಗಲಿಲ್ಲ. ಸಿಕ್ಕ ಸೀಟ್ ಕೂಡ ಸರಿಯಾಗಿರಲಿಲ್ಲ.  ಸೀಟ್  ಓರೆಯಾಗಿತ್ತು. ಸೀಟ್ ಮುರಿದಿದ್ದು ಆರಾಮದಾಯಕ ಪ್ರಯಾಣ ಸಾಧ್ಯವಾಗ್ಲಿಲ್ಲ. ನಾವು ಎರಡು ಗಂಟೆ ತಡವಾಗಿ ದೆಹಲಿಗೆ ಬಂದೆವು ಎಂದು ವೀರ್ ದಾಸ್ ಬರೆದಿದ್ದಾರೆ.  ನಾವು ಮೊದಲೇ ವೀಲ್ ಚೇರ್ ಬುಕ್ ಮಾಡಿದ್ದೆವು. ಆದ್ರೆ ದೆಹಲಿ ವಿಮಾನ ನಿಲ್ದಾಣದಲ್ಲಿ ವೀಲ್ ಚೇರ್ ಸಿಗಲಿಲ್ಲ. ಮೆಟ್ಟಿಲು ಇಳಿಯಲು ಹೇಳಲಾಯ್ತು. ನಾಲ್ಕು ಬ್ಯಾಗ್ ಹೊತ್ತುಕೊಂಡಿದ್ದರಿಂದ ಹೆಂಡತಿಗೆ ಸಹಾಯ ಮಾಡಲು ಆಗ್ಲಿಲ್ಲ. ಏರ್ ಹೋಸ್ಟೆಸ್ ಕೇಳಿದೆ. ಅವ್ರು ಯಾವುದೇ ಉತ್ತರ ನೀಡ್ಲಿಲ್ಲ.   ನಾನು ಏರ್ ಇಂಡಿಯಾದ ಗ್ರೌಂಡ್ ಸ್ಟಾಫ್ ಸದಸ್ಯರನ್ನು ಸಹಾಯ ಮಾಡಲು ಕೇಳಿದೆ. ಆದ್ರೆ ಅವರು ಭುಜ ಅಲುಗಾಡಿಸಿ ಅಲ್ಲಿಂದ ಹೋದ್ರು ಎಂದು ವೀರ್ ದಾಸ್ ಬರೆದಿದ್ದಾರೆ. 

ತಮ್ಮ ಪೋಸ್ಟ್ ಮುಂದುವರೆಸಿದ ಅವರು, ಮೂಳೆ ಮುರಿತದ ನೋವಿದ್ರೂ ನನ್ನ ಪತ್ನಿ ಮೆಟ್ಟಿಲು ಇಳಿಯಬೇಕಾಯ್ತು. ಬಸ್ ನಲ್ಲಿ ಏರ್ ಇಂಡಿಯಾ ಸಿಬ್ಬಂದಿ, ಸರ್ ನಾನು ಏನು ಮಾಡಬೇಕು. ಕ್ಷಮಿಸಿ ಎಂದ್ರು.  ನಾವು ಟರ್ಮಿನಲ್ ತಲುಪಿದಾಗ ಅಲ್ಲಿದ್ದ ಸಿಬ್ಬಂದಿ, ವೀಲ್ ಚೇರ್ ಆಗ್ಲೇ ಬುಕ್ ಮಾಡಿದ್ದೆವು ಎನ್ನುತ್ತಾರೆ. ವಿಮಾನ ತಡವಾಗಿ ಬಂದ ಕಾರಣ ಸಿಬ್ಬಂದಿ ಇರಲಿಲ್ಲ. ಹಾಗಾಗಿ ನಮಗೆ ವೀಲ್ ಚೇರ್ ಸಿಗಲಿಲ್ಲ ಎಂದು ವೀರ್ ದಾಸ್ ಬರೆದಿದ್ದಾರೆ.  

ನಟ ಗೋವಿಂದ ಬಗ್ಗೆ ಕೇಳಿದ್ದಕ್ಕೆ ಹಲವು ಅನುಮಾನ ಹುಟ್ಟುಹಾಕಿದ

ವೀರ್ ದಾಸ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು, ಪ್ರಯಾಣಿಕರ ಬಗ್ಗೆ ಕಾಳಜಿ ತೋರಿಸದ ಏರ್ ಇಂಡಿಯಾ ವಿಮಾನವನ್ನು ಏಕೆ ಬುಕ್ ಮಾಡ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ರೈಲು ಪ್ರಯಾಣಕ್ಕೆ ಒಳ್ಳೆಯದು ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios