PHOTOS: ಪರರಾಜ್ಯದವರ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ; ವಿಧಿ ಬರೆದ ಲವ್‌ಸ್ಟೋರಿ ಇದು ಎಂದ ಸೀತಾರಾಮ ನಟಿ
‘ಸೀತಾರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2025 ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಬೆಳಗ್ಗೆ ಸಂಪ್ರದಾಯಿಕವಾಗಿ ನಿಶ್ಚಿತಾರ್ಥ ನಡೆದಿದೆ. ಇನ್ನು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಸಂಜೆ ಪಾರ್ಟಿ ಕೂಡ ಇಟ್ಟುಕೊಳ್ಳಲಾಗಿತ್ತು.

ಈ ನಿಶ್ಚಿತಾರ್ಥದ ಪಾರ್ಟಿಯಲ್ಲಿ ನಟಿ ಅಮೂಲ್ಯ, ಪೂಜಾ ಲೋಕೇಶ್, ಜ್ಯೋತಿ ಕಿರಣ್, ರೀತು ಸಿಂಗ್, ಚೈತ್ರಾ ವಾಸುದೇವನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ವೈಷ್ಣವಿ ಗೌಡ ಅವರು ಮದುವೆಯಾಗುತ್ತಿರೋ ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈಷ್ಣವಿ ಗೌಡ ಅವರ ಮನೆಯವರೇ ಈ ಸಂಬಂಧವನ್ನು ಹುಡುಕಿದ್ದಾರೆ ಎನ್ನಲಾಗಿದೆ. ಈ ಮದುವೆ ಫಿಕ್ಸ್ ಆಗಿ ಹಲವು ತಿಂಗಳುಗಳೇ ಕಳೆದಿದ್ದು, ಈಗ ನಿಶ್ಚಿತಾರ್ಥ ಆಗಿದೆ.

ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಗೌಡ ಅವರು, “ಅವನದ್ದು ಆಕಾಶ, ಸೇವೆ, ನನ್ನದು ಸ್ಕ್ರಿಪ್ಟ್, ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ” ಎಂದು ಹೇಳಿದ್ದಾರೆ.

ಅಂದಹಾಗೆ ಬೆಳಗ್ಗೆ ನಡೆದ ಶಾಸ್ತ್ರದಲ್ಲಿ ಕ್ರೀಮ್ ಕಲರ್ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಸಂಜೆ ವೈಷ್ಣವಿ ಗೌಡ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

ವೈಷ್ಣವಿ ಗೌಡ ಅವರ ತಾಯಿಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ “ಕೊರೊನಾ ಟೈಮ್ ಆದರೂ ಕೂಡ ನನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದೀನಿ. ನನ್ನ ಮಗಳ ಮದುವೆಯನ್ನು ಕೂಡ ಗ್ರ್ಯಾಂಡ್ ಆಗಿ ಮಾಡ್ತೀನಿ” ಎಂದು ಹೇಳಿದ್ದರು.

ಅಂದಹಾಗೆ ಕನ್ನಡ ನಟಿ ವೈಷ್ಣವಿ ಗೌಡ ಅವರ ಮದುವೆ ಯಾವಾಗ ಎಂದು ರಿವೀಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ನಟಿ ಮಾಹಿತಿ ಕೊಡಬಹುದು.

ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ತುಂಬ ದೊಡ್ಡ ಕನಸು ಕಂಡಿದ್ದರು. ಅವರ ಸ್ನೇಹಿತರೆಲ್ಲರಿಗೂ ಮದುವೆಯಾಗಿದ್ದರೂ ಕೂಡ ವೈಷ್ಣವಿ ಮಾತ್ರ ಇಷ್ಟುದಿನ ಸಿಂಗಲ್ ಆಗಿದ್ದರು.

ಮದುವೆ ಎನ್ನುವ ಸಂಬಂಧದ ಮೇಲೆ ಕನ್ನಡ ನಟಿ ವೈಷ್ಣವಿ ಗೌಡ ತುಂಬ ನಂಬಿಕೆ ಇಟ್ಟುಕೊಂಡು, ನಾನು ಮದುವೆ ಆಗಬೇಕು ಎಂದು ಹೇಳಿದ್ದರು.

ವೈಷ್ಣವಿ ಗೌಡ ಅವರು ಬಯಸಿದಂತೆ ಈಗ ಅವರು ಪ್ರೀತಿಸುವ ಹುಡುಗ ಸಿಕ್ಕಿದ್ದಾನೆ. ಆದಷ್ಟು ಬೇಗ ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಅವರ ಮದುವೆ ನಡೆಯಲಿದೆ.

ವೈಷ್ಣವಿ ಗೌಡ ಅವರು ಮದುವೆ ಬಳಿಕ ನಟಿಸ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. "ಎಲ್ಲದಕ್ಕೂ ಡೆಸ್ಟಿನಿ ಎನ್ನೋದು ಇರುತ್ತದೆ. ಅದನ್ನು ನಾನು ನಂಬುವೆ" ಎಂದು ವೈಷ್ಣವಿ ಸದಾ ಹೇಳುತ್ತಿರುತ್ತಾರೆ.

"ನನಗೆ ಮದುವೆ ಅಂದ್ರೆ ಇಷ್ಟ, ನಾನು ಮದುವೆ ಆಗ್ತೀನಿ" ಎಂದು ವೈಷ್ಣವಿ ಗೌಡ ಅವರು ಸಾಕಷ್ಟು ಕಡೆ ಮುಕ್ತವಾಗಿ ಹೇಳಿಕೊಂಡಿದ್ದರು.

ಬಿಗ್ ಬಾಸ್ ಶೋ ಮುಗಿದ ಬಳಿಕ ವೈಷ್ಣವಿ ಗೌಡ ಅವರ ಗುಣವನ್ನು ಮೆಚ್ಚಿ ಅನೇಕರು ಮದುವೆ ಸಂಬಂಧ ತಂದಿದ್ದರಂತೆ. ಅದನ್ನೆಲ್ಲವನ್ನು ವೈಷ್ಣವಿ ಒಪ್ಪಿರಲಿಲ್ಲ. ಈಗ ಅನುಕೂಲ್ ಜೊತೆ ಮದುವೆ ಆಗಲಿದ್ದಾರೆ.